Showing posts with label ಭಜಿಸೊ ಮನವೆ ಪೂರ್ಣ ಅಜಸುರೊಂದಿತ ಚರಣ ಸುಜನ mahipati. Show all posts
Showing posts with label ಭಜಿಸೊ ಮನವೆ ಪೂರ್ಣ ಅಜಸುರೊಂದಿತ ಚರಣ ಸುಜನ mahipati. Show all posts

Wednesday 1 September 2021

ಭಜಿಸೊ ಮನವೆ ಪೂರ್ಣ ಅಜಸುರೊಂದಿತ ಚರಣ ಸುಜನ ankita mahipati

ಭಜಿಸೊ ಮನವೆ ಪೂರ್ಣ ಅಜಸುರೊಂದಿತ ಚರಣ ಸುಜನ ಹೃದಯ ಪ್ರಾಣ ಗಜಭಯ ನಿವಾರಣ 1 

ಹಿಡಿಯ ಬ್ಯಾಡನುಮಾನ ಜಡಿಯೊ ನಿಜಧ್ಯಾನ ಅಮೃತ ಪೂರ್ಣ 2 

ಸಾಧಿಸಬೇಕೊಂದೇ ಮನ ಬುಧಜನರ ಜೀವನ ಸದಮಲಾನಂದ ಸದ್ಗತಿ ಸುಖಸಾಧನ 3 

ಪಾವನಗೈಸುವದಾ ಭಾವಿಸೊ ಗುರುಪಾದ ಬೋಧ ಸೇವಿಸು ನಿಜ ಸುಸ್ವಾದ 4 

ತ್ಯಜಿಸಿ ತನುಮನ ದ್ವಂದ್ವ ಭಜಿಸೊ ಭಾವಾರ್ಥದಿಂದ ಪೂಜಿಸೊ ಮಹಿಪತಿ ಆನಂದ ನಿಜಗುರು ಪಾದಾರವಿಂದ 5

***