ವ್ಯಾಸಮುನಿಯೆ ವ್ಯಾಸ-
ಮುನಿಯೆ ದೇಶಪತಿ ।
ಕ್ಲೇಶ ವಿನಾಶನವ ಮಾಡಿ -
ಸಿಂಹಾಸನವನೇರಿದೆ ।
ದಾಸರರಸ ಶ್ರೀ ಹರಿ -
ದಾಸರರಸಾ ।। ಪಲ್ಲವಿ ।।
ತರ್ಕತಾಂಡವ ಚಂದ್ರಿಕೆ -
ನಾಯಾಮೃತವಾ ।
ಪ್ರಕಟಿಸಿ ದುರ್ಜನರ -
ನೋಕ್ಕೊತ್ತಿದೆಯೊ ।
ನ್ಯಲಕ್ಕೊತ್ತಿದೆಯೊ ನೀ-
ಶಿಲಕ್ಕೊತ್ತಿದೆಯೊ ।। ಚರಣ ।।
ಲೆಂಕರೊಳು ನಿಂನುಂಗುಟ -
ನಖವನು ಹೋಲುವರ ।
ನಾ ಕಾಣೆನು ಕಾಣೆನೆಲೊ -
ಕಾರುಣಿಕಾ । ಮ ।
ಹಾ ಕಾರುಣಿಕಾ ವೋ -
ಮಹಾ ಕಾರುಣಿಕಾ ।। ಚರಣ ।।
ಬ್ರಹ್ಮಣ್ಯ ಮುನಿ ತನಯಾ -
ನಿಮ್ಮಗೊಲಿದು ಕುಣಿದ ।
ಬ್ರಹ್ಮನುತ ಬಾದರಾಯಣವಿಠ್ಠಲ ।
ಹಾಹಾ ಭಲಾ ನಿಷ್ಕುಟಿಲಾ -
ಭಾಪುರಿ ನಿಷ್ಕುಟಿಲಾ ।। ಚರಣ ।।
****