Saturday, 1 May 2021

ವ್ಯಾಸಮುನಿಯೆ ವ್ಯಾಸ ಮುನಿಯೆ ದೇಶಪತಿ ankita badarayana vittala vyasaraja stutih

ವ್ಯಾಸಮುನಿಯೆ ವ್ಯಾಸ-

ಮುನಿಯೆ ದೇಶಪತಿ ।

ಕ್ಲೇಶ ವಿನಾಶನವ ಮಾಡಿ -

ಸಿಂಹಾಸನವನೇರಿದೆ ।

ದಾಸರರಸ ಶ್ರೀ ಹರಿ -

ದಾಸರರಸಾ  ।। ಪಲ್ಲವಿ ।।


ತರ್ಕತಾಂಡವ ಚಂದ್ರಿಕೆ -

ನಾಯಾಮೃತವಾ ।

ಪ್ರಕಟಿಸಿ ದುರ್ಜನರ -

ನೋಕ್ಕೊತ್ತಿದೆಯೊ ।

ನ್ಯಲಕ್ಕೊತ್ತಿದೆಯೊ ನೀ-

ಶಿಲಕ್ಕೊತ್ತಿದೆಯೊ ।। ಚರಣ ।।


ಲೆಂಕರೊಳು ನಿಂನುಂಗುಟ -

ನಖವನು ಹೋಲುವರ ।

ನಾ ಕಾಣೆನು ಕಾಣೆನೆಲೊ -

ಕಾರುಣಿಕಾ । ಮ ।

ಹಾ ಕಾರುಣಿಕಾ ವೋ -

ಮಹಾ ಕಾರುಣಿಕಾ ।। ಚರಣ ।।


ಬ್ರಹ್ಮಣ್ಯ ಮುನಿ ತನಯಾ -

ನಿಮ್ಮಗೊಲಿದು ಕುಣಿದ ।

ಬ್ರಹ್ಮನುತ ಬಾದರಾಯಣವಿಠ್ಠಲ ।

ಹಾಹಾ ಭಲಾ ನಿಷ್ಕುಟಿಲಾ -

ಭಾಪುರಿ ನಿಷ್ಕುಟಿಲಾ  ।। ಚರಣ ।।

****


No comments:

Post a Comment