ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡುಕೊಳ್ಳಿರೋ ಸುಖ ಸ್ವಾತ್ಮವ ಕಂಡುಕೊಳ್ಳಿರೋ p
ಕಣ್ಣಿಟ್ಟರ ತಾಂ ಕಾಣಿಸುತದೆ ಚೆನ್ನಾಗನುಭವಕಿದಿರಿಡುತದೆ 1
ಮನವಿಟ್ಟರಲನುಗೂಡುತಲ್ಯದೆ ನೆನೆದರೆ ನಿಜಘನ ನೀಡುತಲ್ಯದೆ 2
ಲಯವಿಟ್ಟರ ದಯಬೀರುತಲ್ಯದೆ ಶ್ರಯ ಸುಖ ಸುರಮಳೆಗರೆಯತಲ್ಯದೆ 3
ಭಾವಕ ಅತಿಸುಲಭವಾಗ್ಯದೆ ಆವಾಗ ತಾನೆಲೆ ನಿಭವಾಗ್ಯದೆ 4
ಮಹಿಪತಿ ಮನೋಹರ ಮಾಡುತಲ್ಯದೆ ಬಾಹ್ಯಾಂತ್ರವು ತಾನೆವೆ ಆಗ್ಯದೆ 5
***