ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ಜಯ ಯಾಧವನಾಥ ಮುರಾರಿ ಜಯ ಜಯ ಶ್ರೀವಧುರಮಣ ಶ್ರೀ ಹರಿ ಪ
ದೀನೊದ್ದರ ಸಗಟಾಸುರದಮನಾ ಆನಂದ ಮೂರುತಿ ಫಣಿವರ ಶಯನಾ 1
ಕರುಣಾ ಕರಗಿರಿಧರ ಸರ್ವೇಶಾ ಶರಣಾಗತ ವತ್ಸಲ ಪಯೋನಿಧಿವಾಸಾ 2
ಕಂಬುಕಂದರ ಕಮಲಳಾಕ್ಷಾ ಅಂಬುಜ ಭವನುತಗೋಗೋರಕ್ಷಾ 3
ಶಂಬರ ಮಥನ ಜನಕ ಮಹಾ ಮಹಿಮಾ ಜಂಭಭೇದಿಸುತ ಸಖಘನ ಶಾಮಾ 4
ಪೀತಾಂಬರಧರ ಕೃಷ್ಣ ಶ್ರೀಧರಾ ಮಾತುಳನಾಶನ ಕೃತಭೂಧರಾ 5
ಗುರುಮಹಿಪತಿ ಸುತ ಜೀವನರಾಮಾ ಪರಮಾನಂದ ಕಾಯಕ ಗುಣಧಾಮಾ 6
***