Showing posts with label ಇನ್ನು ಪುಟ್ಟಿಸದಿರಯ್ಯ ಪುಟ್ಟಿಸಿದಕೆ ಪಾಲಿಸಯ್ಯ purandara vittala INNU PUTTISADIRAYYA PUTTISIDAKE PAALISAYYA. Show all posts
Showing posts with label ಇನ್ನು ಪುಟ್ಟಿಸದಿರಯ್ಯ ಪುಟ್ಟಿಸಿದಕೆ ಪಾಲಿಸಯ್ಯ purandara vittala INNU PUTTISADIRAYYA PUTTISIDAKE PAALISAYYA. Show all posts

Monday, 6 December 2021

ಇನ್ನು ಪುಟ್ಟಿಸದಿರಯ್ಯ ಪುಟ್ಟಿಸಿದಕೆ ಪಾಲಿಸಯ್ಯ purandara vittala INNU PUTTISADIRAYYA PUTTISIDAKE PAALISAYYA




.ಇನ್ನು ಪುಟ್ಟಿಸದಿರಯ್ಯ 
ಪುಟ್ಟಿಸಿದಕೆ ಪಾಲಿಸಯ್ಯ 
ನನ್ನ ದಯದಿ ತಾರಿಸಯ್ಯ ||ಪ||

ನಿನ್ನ ಪಾದಾಂಬುಜವ ನಂಬಿದೆನು ರಘುಪತಿಯೇ 
ಬೆನ್ನುಬಿದ್ದೇನು ಭವಬಂಧನವ ಬಿಡಿಸೋ ||ಅ.ಪ|| 

ಅಮರೇಂದ್ರವಂದಿತನೆ ಅನಂತಮಹಿಮನೆ
ಕಮಲಸಖತೇಜಕರನೇ 
ಅಮಿತಲೋಹಿತನೆ ನೀ ಕಾಮಿತವರದನೇ
ವಿಮಲ ವಿಭೀಷಣಗೊಲಿದ ದಯದಿಂದಲೆನ್ನ ||೧|| 

ಅಜಮಿಳ ಅಂಬರೀಷ ಅಕ್ರೂರ ನಾರದಗೆ 
ಗಜರಾಜ ಗಿರಿಜೇಶಗೆ
ಅಜ ಧ್ರುವ ಅರ್ಜುನಗೆ ನಿಜಭಕ್ತ ಪ್ರಹ್ಲಾದಗೆ 
ದ್ವಿಜಗೆ ರುಕ್ಮಾಂಗದಗೆ ಒಲಿದ ದಯದಿಂದಲೆನ್ನ ||೨||

ಎಂದೆಂದಿಗೆ ನಿನ್ನ ಪಾದವೆನಗೆ ನೆಲೆಯಾಯಿತು 
ಅಂದು ನಿನ್ನ ಪಾದ ಭಜನೆ 
ಎಂದಿಗೆ ನಿನ್ನ ಪಾದ ಪಿಡಿಸಿ ಸಲಹೋ ಸ್ವಾಮಿ 
ಅಂದು ಅಂಜನೆಕಂದಗೊಲಿದ ದಯದಿಂದಲೆನ್ನ ||೩||

ಅವರಂತೆ ನಾನಲ್ಲ ಅವರ ದಾಸರ ದಾಸ 
ಸವರಿ ಬಿಸುಟೆನ್ನ ದೋಷ 
ಪಾವನ್ನ ಮಾಡಯ್ಯ ಪುಂಡರೀಕವರದನೇ 
ಅವಸರಕೆ ದ್ರೌಪದಿಗೆ ಒಲಿದ ದಯದಿಂದಲೆನ್ನ ||೪||

ಅಂತರಂಗದುಬ್ಬಸವು ನಿನಗೆ ಉಸುರುವೆ ನಾನು  
ಸಂತಸದಿ ಗೌತಮನ ಸತಿ ಸಲಹಿದೆ 
ಸಂತತ ನಿನ್ನ ಭಕ್ತರನು ಪಾಲಿಸುವ 
ಕಂತುಪಿತ ನಮ್ಮ ಸಿರಿಪುರಂದರವಿಠಲಾ ||೫||
***

Innu puttisadirayya 
puttisidake palisayya 
nanna dayadi tarisayya ||pa||

Ninna padambujava nambidenu raghupatiye
bennubiddenu bhavabandhanava bidiso ||a.pa|| 

Amarendravanditane anantamahimane
kamalasakhatejakarane 
amitalohitane ni kamitavaradane
vimala vibhishanagolida dayadindalenna ||1|| 

Ajamila ambarisha akrura naradage 
gajaraja girijeshage
aja dhruva arjunage nijabhakta prahladage 
dvijage rukmangadage olida dayadindalenna ||2||

Endendige ninna padavenage neleyayitu 
andu ninna padabhajane 
endige ninna pada pidisi salaho svami 
andu anjanekandagolida dayadindalenna ||3||

Avarante nanalla avara dasara dasa 
savari bisutenna dosha 
pavannamadayya pundarikavaradane
avasarake draupadige olida dayadindalenna ||4||

Antarangadubbasavu ninage usuruve nanu 
santasadi gautamana sati salahide 
santata ninna bhaktaranu palisuva 
kantupita namma siripurandaravittala ||5||
***

pallavi

innu puTTisidarayya puTTasidake pAlisayya nanna dayadi tArisayya

anupallavi

ninna pAdAmbujava nambidenu raghupatiye bennu biddeno bhava bandhanava biDisO

caraNam 1

amarEndra vanditane ananta mahimane kamala sakha tEjakarane
amita lOhitane nI kAmita varadane vimala vibhISaNa golida dayadindalenna

caraNam 2

ajamiLa ambarISa akrUra nAradage gajarAja girijEshage aja dhruva arjunage
nija bhakta prahlAdage dvijage rukmAngadage olida dayadindalenna

caraNam 3

endendige ninna pAdavenage neleyAyitu andu ninna pAda bhajane
endige ninna pAda biDisi salahO svAmi andu ajjane kandagolida dayadindalenna

caraNam 4

avarante nAnalla avara dAsara dAsa savari bisuTenna dOSa pAvanna
mADayya puNDarIka varadane avasarake draupadige olida dayadindalenna

caraNam 5

antarangaduppasava ninage usiruve nAnu santasati gautamana sati salahide
santata ninna bhaktaranu pAlisuva kantupita namma siri purandara viTTala
***

ಇನ್ನು ಪುಟ್ಟಿಸದಿರಯ್ಯ, ಪುಟ್ಟಿಸಿದಕೆ ಪಾಲಿಸಯ್ಯ
ನನ್ನ ದಯದಿ ತಾರಿಸಯ್ಯ ||ಪ||
ನಿನ್ನ ಪಾದಾಂಭುಜವ ನಂಬಿದೆನು ರಘುಪತಿಯೆ
ಬೆನ್ನುಬಿದ್ದೆನು ಭವಬಂಧನ ಬಿಡಿಸೊ ||ಅ||

ಅಮರೇಂದ್ರವಂದಿತನೆ ಅನಂತಮಹಿಮನೆ
ಕಮಲಸಖತೇಜಕರನೆ
ಅಮಿತಲೋಹಿತನೆ ನೀ ಕಾಮಿತವರದನೆ
ವಿಮಲ ವಿಭೀಷಣಗೊಲಿದ ದಯದಿಂದಲೆನ್ನ ||

ಅಜಮಿಳ ಅಂಬರೀಷ ಅಕ್ರೂರ ನಾರದಗೆ
ಗಜರಾಜ ಗಿರಿಜೇಶಗೆ
ಅಜಧ್ರುವ ಅರ್ಜುನಗೆ ನಿಜಭಕ್ರ ಪ್ರಹ್ಲಾದಗೆ
ದ್ವಿಜಗೆ ರುಕ್ಮಾಂಗದಗೆ ಒಲಿದ ದಯದಿಂದಲೆನ್ನ ||

ಎಂದೆಂದಿಗೆ ನಿನ್ನ ಪಾದವೆನಗೆ ನೆಲೆಯಾಯಿತು
ಅಂದು ನಿನ್ನ ಪಾದಭಜನೆ
ಎಂದಿಗೆ ನಿನ್ನ ಪಾದ ಪಿಡಿಸಿ ಸಲಹೋ ಸ್ವಾಮಿ
ಅಂದು ಅಂಜನೆಕಂದಗೊಲಿದ ದಯದಿಂದಲೆನ್ನ ||

ಅವರಂತೆ ನಾನಲ್ಲ ಅವರ ದಾಸರ ದಾಸ
ಸವರಿ ಬಿಸುಟೆನ್ನ ದೋಷ
ಪಾವನ್ನ ಮಾಡಯ್ಯ ಪುಂಡರೀಕವರದನೆ
ಅವಸರಕೆ ದ್ರೌಪದಿಗೆ ಒಲಿದ ದಯದಿಂದಲೆನ್ನ ||

ಅಂತರಂಗದುಬ್ಬಸವ ನಿನಗೆ ಉಸಿರುವೆ ನಾನು
ಸಂತಸದಿ ಗೌತಮನ ಸತಿ ಸಲಹಿದೆ
ಸಂತತ ನಿನ್ನ ಭಕ್ತರನು ಪಾಲಿಸುವ
ಕಂತುಪಿತ ನಮ್ಮ ಸಿರಿಪುರಂದರ ವಿಠಲ ||
***

ರಾಗ ರೇಗುಪ್ತಿ ಝಂಪೆತಾಳ (raga tala may differ in audio)