Showing posts with label ಪಂಪಾತೀರದ ಲಿಂಗಾ ಭವಭಸಿತಾಂಗಾ vijaya vittala PAMPAATEERADA LINGA BHAVABHASI TAANGAA. Show all posts
Showing posts with label ಪಂಪಾತೀರದ ಲಿಂಗಾ ಭವಭಸಿತಾಂಗಾ vijaya vittala PAMPAATEERADA LINGA BHAVABHASI TAANGAA. Show all posts

Saturday, 4 December 2021

ಪಂಪಾತೀರದ ಲಿಂಗಾ ಭವಭಸಿತಾಂಗಾ ankita vijaya vittala PAMPAATEERADA LINGA BHAVABHASI TAANGAA



ಪಂಪಾತೀರದ ಲಿಂಗಾ ಭವಭಸಿತಾಂಗಾ
ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗ ||pa||

ನೀನೆ ಗತಿಯೆಂದು ನಿದಾನದಿಂದ 
ಧ್ಯಾನವ ಮಾಡಲು ನಾ ದೈನ್ಯದಿಂದ 
ಹೀನ ಪಾಪಂಗಳ ಕಳೆ ದಯದಿಂದ
ಮಾನಾಭಿಮಾನದ ಒಡೆಯನೆ ಆನಂದ||1||

ಗಜಚರ್ಮಾಂಬರ ಗಂಗಾಧರ ಮುರವೈರಿ
ಭಜಿಸುವೆನು ನಿನ್ನ ಭಕ್ತಿಯಲಿ ಸಾರಿ
ಕುಜನರೊಳಿಡದೆ ಉತ್ತಮವಾದ ದಾರಿ
ನಿಜವಾಗಿ ತೋರಯ್ಯ ದೀನರ ಉಪಕಾರಿ||2||

ಹೇಮಗಿರಿಯ ವಾಸಾ ಈಶಗಿರೀಶಾ
ಸೋಮಶೇಖರ ಪಾರ್ವತಿ ವಿಲಾಸಾ
ರಾಮಶ್ರೀ ವಿಜಯವಿಠ್ಠಲನೆ 
ನಿರ್ದೋಷಾ ಸ್ವಾಮಿಯ ನೆನೆವಂತೆ 
ಕೊಡು ಎನಗೆ ಮನಸಾ||3||
***

Pampatirada linga bava basitangasampullakshana toro bakta krupanga ||pa||

Nine gatiyendu nidanadinda
Dhyanava madalu dainyadalinda
Manabimanadodiyane ananda ||1||

Gajacharmambara gangadhara puravairi
Bajisideno ninna baktiyali sakire
Kujanarolidade uttamavada dari
Nijavagi torayya dinarupakari||2||

Hemagiriya vasa isanirisa
Somasekarane parvatiya vilasa
Rama sri vijayaviththalane nirdosha
Svamiya nenevante kodu enage manasa||3||
***

ಪಂಪಾತೀರದ ಲಿಂಗಾ ಭವಭಸಿತಾಂಗಾ
ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗ ||pa||

ನೀನೆ ಗತಿಯೆಂದು ನಿದಾನದಿಂದ
ಧ್ಯಾನವ ಮಾಡಲು ದೈನ್ಯದಲಿಂದ
ಹೀನ ಪಾಪಂಗಳು ಕಳೆದು ದಯದಿಂದ
ಮಾನಾಭಿಮಾನದೊಡಿಯನೆ ಆನಂದ||1||

ಗಜಚರ್ಮಾಂಬರ ಗಂಗಾಧರ ಪುರವೈರಿ
ಭಜಿಸಿದೆನೊ ನಿನ್ನ ಭಕ್ತಿಯಲಿ ಸಾಕಿರೆ
ಕುಜನರೊಳಿಡದೆ ಉತ್ತಮವಾದ ದಾರಿ
ನಿಜವಾಗಿ ತೋರಯ್ಯ ದೀನರುಪಕಾರಿ||2||

ಹೇಮಗಿರಿಯ ವಾಸಾ ಈಶನಿರೀಶಾ
ಸೋಮಶೇಖರನೆ ಪಾರ್ವತಿಯ ವಿಲಾಸಾ
ರಾಮ ಶ್ರೀ ವಿಜಯವಿಠ್ಠಲನೆ ನಿರ್ದೋಷಾ
ಸ್ವಾಮಿಯ ನೆನೆವಂತೆ ಕೊಡು ಎನಗೆ ಮನಸಾ||3||
******

ಪಂಪಾತೀರದ ಲಿಂಗಾ ಭವಭಸಿತಾಂಗಾ
ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗ ಪ

ನೀನೆ ಗತಿಯೆಂದು ನಿದಾನದಿಂದ
ಧ್ಯಾನವ ಮಾಡಲು ದೈನ್ಯದಲಿಂದ
ಹೀನ ಪಾಪಂಗಳು ಕಳೆದು ದಯದಿಂದ
ಮಾನಾಭಿಮಾನದೊಡಿಯನೆ ಆನಂದ 1

ಗಜಚರ್ಮಾಂಬರ ಗಂಗಾಧರ ಪುರವೈರಿ
ಭಜಿಸಿದೆನೊ ನಿನ್ನ ಭಕ್ತಿಯಲಿ ಸಾಕಿರೆ
ಕುಜನರೊಳಿಡದೆ ಉತ್ತಮವಾದ ದಾರಿ
ನಿಜವಾಗಿ ತೋರಯ್ಯ ದೀನರುಪಕಾರಿ2

ಹೇಮಗಿರಿಯ ವಾಸಾ ಈಶನಿರೀಶಾ
ಸೋಮಶೇಖರನೆ ಪಾರ್ವತಿಯ ವಿಲಾಸಾ
ರಾಮ ಶ್ರೀ ವಿಜಯವಿಠ್ಠಲನೆ ನಿರ್ದೋಷಾ
ಸ್ವಾಮಿಯ ನೆನೆವಂತೆ ಕೊಡು ಎನಗೆ ಮನಸಾ3
***