Showing posts with label ಚಿನ್ಮಯ ಚಿದಾನಂದ ನೀನೆ ಸನ್ನುತಾಂಗಿಯ vijaya vittala. Show all posts
Showing posts with label ಚಿನ್ಮಯ ಚಿದಾನಂದ ನೀನೆ ಸನ್ನುತಾಂಗಿಯ vijaya vittala. Show all posts

Wednesday, 16 October 2019

ಚಿನ್ಮಯ ಚಿದಾನಂದ ನೀನೆ ಸನ್ನುತಾಂಗಿಯ ankita vijaya vittala

ಚಿನ್ಮಯ ಚಿದಾನಂದ ನೀನೆ
ಸನ್ನುತಾಂಗಿಯ ರಮಣ ಸಕಲ ಲೋಕಕೆ ಕರುಣ ಪ

ದಿಗಳ ವೆಗ್ಗಳವ ನೋಡಲಿ ಬಂದ್ಯೋ
ಮಿಗಿಲಾದ ಪರದೈವ ಹರಿಯೆಂದು ಕೊಂಡಾಡೆ
ಗಗನ ವಾಸಿಗಳು ಪೂಮಳೆಗರಿಯೆ ಹರುಷದಲಿ 1

ಮಡುವಿನೊಳ್ ಕರಿರಾಜ ಸಿಕ್ಕಿ ಸಾವಿರದ ವರುಷ
ಬಿಡದೆ ನಕ್ರನ ಕೂಡ ಕಾದಿ ಸೋತು
ಒಡಿಯರಾರುಂಟೆ ತ್ರಿಮೂರ್ತಿಗಳೊಳಗೆನಲು
ಮೃಡನಜರು ಬೆರಗಾಗಿ ಸಾಮಜನ ಪಾಲಿಸಿದೆ 2

ಸೃಷ್ಟಿಜಲ ಮುಸುಕಿ ಬ್ರಹ್ಮಾಂಡ ಪ್ರಳಯಕಾಲದಲಿ
ಜಠರದೊಳು ಜಗಕರ್ತುನೆಂದೆನಿಸಿದೆ
ವಟಪತ್ರಶಯನ ಸಿರಿವಿಜಯವಿಠ್ಠಲರೇಯಾ3
**********