Showing posts with label ಕನ್ನೆ ಪ್ರಾಯದ ಹೆಣ್ಣು ಕಾಣಿರೊ ಅದನ್ನ ಕಂಡು ಪರಲೋಕ ಸೂರೆಯ ಮಾಡಿರೊ tulasiramadasa. Show all posts
Showing posts with label ಕನ್ನೆ ಪ್ರಾಯದ ಹೆಣ್ಣು ಕಾಣಿರೊ ಅದನ್ನ ಕಂಡು ಪರಲೋಕ ಸೂರೆಯ ಮಾಡಿರೊ tulasiramadasa. Show all posts

Sunday, 5 September 2021

ಕನ್ನೆ ಪ್ರಾಯದ ಹೆಣ್ಣು ಕಾಣಿರೊ ಅದನ್ನ ಕಂಡು ಪರಲೋಕ ಸೂರೆಯ ಮಾಡಿರೊ ankita tulasiramadasa

 ಚನ್ನಪಟ್ಟಣದ ಅಹೋಬಲದಾಸರು

ಕನ್ನೆ ಪ್ರಾಯದ ಹೆಣ್ಣು ಕಾಣಿರೊ [ಅ ದನ್ನ] ಕಂಡು ಪರಲೋಕ ಸೂರೆಯ ಮಾಡಿರೊ ಪ 


ಸನ್ನೆಯು ತೋರುವ ಗುರುಗಳಿಗೆರಗೂ ಪ್ರ ಸನ್ನಳಾಗುತ್ತಿಹ ಕಡುಚೆಲ್ವೆಯೀನಮ್ಮಾ ಅ.ಪ ಬ್ರಹ್ಮನ ಮಗನಾಗಿ ಹೇತ್ತಳು ಪರ ಬ್ರಹ್ಮವೆ ತಾನಾಗಿ ನಿಂತಳು ಸಂಹಾರ ಉತ್ಪತ್ತಿ ಪೋಷಕತ್ವದೊಳೊಳ್ಳೆ ಸಿಂಹಾಸನದೊಳಗಿರುತಾಳೆ 1 

ಕಾಮಾದಿಗಳನೆಲ್ಲ ನೀಗಿಯೂ ಗುರು ನೇಮದೊಳು ತಲೆ ಬಾಗಿಯೂ ಆ ಮಹಾ ಜ್ಯೋತಿ ಬೆಳಕಿನೊಳಿರುವಾ ಈ ಮಹ ಮೋಕ್ಷಕಾಮಿನಿಯೆಂಬುವ ಕನ್ನೆ 2 

ವನಗೂಡುವಂದಾವ ಕಾಣಿರೋ ನಿಮ್ಮ ಮನದೊಳು ನಿಚ್ಚಯ ಮಾಡಿರೋ ಘನಗುರು ತುಲಸೀರಾಮದಾಸನೂ ಅನುಮತಿಕೊಂಡಿಹ ಕಡುಚೇಲ್ವೆ ಯೀನಮ್ಮಾ 3

***