ಅಕ್ಷಯಪಾತ್ರೆ ಹಾಡು: by vadirajaru
ಎದ್ದಾರು ವನವಾಸಕ್ಕೆ ಬುದ್ದಿವಂತ ಪಾಂಡವರು
ಅಲ್ಲಿದ್ದ ಜನರು ಅಲ್ಲಿ ಇರಲಾರೆಂದು ಸಿದ್ದರಾದರು
ಏನು ಮಾಡಿದನು ಪಾಪಿ ಮೂಢ ಶಕುನಿಯ ಮಾತು ಕೇಳಿ
ಆಡಿ ಪಗಡೆ ಸೋಲಿಸಿ ಅವರನು ಅಡವಿಗಟ್ಟಿದ ದುಷ್ಟ ದುರ್ಯೋಧನನು
ನಿಮಗೆ ಪಗಡೆಯಾಡಿ ಸೋಲಿಸಿದ ವಾರ್ತೆಯ ನೀವು ಕಳುಹಿಸುತಿರೆ
ಹೀಗೆ ಧನವು ದ್ರವ್ಯವು ಇದ್ದ ಇವನಿಗೆ ದಯಾಧರ್ಮ ಎಳ್ಳಷ್ಟು ಬೇಡವೆ
ಲೋಭ ಮೋಹ ಪಾಶದಿಂದ ಬಿಗಿದುಕೊಂಡರು
ವಿಪ್ರರ ಮಾತು ಕೇಳಿ ದೌಮ್ಯಚಾರ್ಯರ ಪಾದಕ್ಕೆರಗಿ
ಅವರು ಹೇಳಿದಂತೆ ಮಾಡಿದ ಧರ್ಮಜ ಸೂರ್ಯೋಪಾಸನೆಯನ್ನು
ಕಂಡು ಸೂರ್ಯ ಪ್ರತ್ಯಕ್ಷನಾಗಿ ಏನು ಬೇಕು ಬೇಡು ಎಂದು ವರವ ಕೊಟ್ಟಾನು
ಲಕ್ಷಕೋಟಿ ಬ್ರಾಹ್ಮಣರ ಭೋಜನ ಆಲಸ್ಯವಿಲ್ಲದಂತೆ ಮಾಡಿಸಬೇಕು
ಎಂಬ ಮಾತನು ಕೇಳಿ ಕೊಟ್ಟ ಸೂರ್ಯ ಅಕ್ಷಯ ಪಾತ್ರೆಯ
ಸ್ವಚ್ಚವಾಗಿ ತೊಳೆದು ಪತ್ನಿಯ ಕೈಯಲ್ಲಿ ಕೊಟ್ಟ
ಅಚ್ಯುತನ ನಾಮ ನಮಗೆ ಹಾಸಿಗೆ ತಲೆದಿಂಬು
ಅಕ್ಷಯಪಾತ್ರೆಯ ಕೊಟ್ಟು ತೆರಳಿದ ಸೂರ್ಯ
ಇಷ್ಟವಾದ ವನದೊಳಗೆ ಅಷ್ಟ್ವೈಶ್ವರ್ಯದಿಂದಿದ್ದರು ಪಂಚಪಾಂಡವರು
ಮುತ್ತೈದೆಯರು ಉದಯ ಕಾಲದಲಿ ಈ ಪದವ ಹೇಳಿ ಕೇಳಿದರೆ
ಅಷ್ಟ್ವೈಶ್ವರ್ಯ ಕೊಟ್ಟು ಪುತ್ರಸಂತಾನ ಕೊಟ್ಟು ರಕ್ಷಿಸುವ ನಮ್ಮ ಹಯವದನ
***********