Showing posts with label ಮೊದಲು ವೇದವ ತಂದ ಮತ್ಸ್ಯಾವತಾರದಿ sukhanidhi vittala. Show all posts
Showing posts with label ಮೊದಲು ವೇದವ ತಂದ ಮತ್ಸ್ಯಾವತಾರದಿ sukhanidhi vittala. Show all posts

Saturday, 1 May 2021

ಮೊದಲು ವೇದವ ತಂದ ಮತ್ಸ್ಯಾವತಾರದಿ ದಶಾವತಾರ ಸ್ತುತಿ ankita sukhanidhi vittala

 " ದಶಾವತಾರ ಸ್ತುತಿ "


ಮೊದಲು ವೇದವ ತಂದ ಮತ್ಸ್ಯಾವತಾರದಿ  ।

ಮೇಲ್ಗಿರಿಯ ಪೊತ್ತು ಕೂರ್ಮ ನಾಮದಿ ।

ಒಲಿದು ಭೂಮಿಯ ತಂದು ವರಾಹ ರೂಪದಿ ।

ಬಾಲನ ಸಲುಹಿದ ಚಳುವ ನರಹರಿಯೇ ।। ೧ ।।


ಬಲಿಯ ದಾನವ ಬೇಡಿ ಛಲದಿ ಕ್ಷತ್ರಿಯರ ।

ಕುಲವೆಲ್ಲ ಸಂಹರಿಸಿ ರಾಮನಾದಿ ।

ಹಾಲು ಮೊಸರು ಬೆನ್ನಿ ಲೀಲೆಯಿಂದಲಿ ತಿಂದು ।

ಲೋಲಾಕ್ಷಿಯರ ಗೂಡಿದಾ ಬಾಲ ಗೋಪಾಲಾ ।। ೨ ।।


ತ್ರಿಪುರರ ಸತಿಯರ ವ್ರತಗೆಡಿಸಿ ಬೇಗ ।

ಚಪಲ ತನದಿ ಅಶ್ವ ರೂಢನಾಗಿ ।

ಕೃಪಣ ವತ್ಸಲ ನಮ್ಮ ಸುಖನಿಧಿವಿಠಲನ ।

ಅಪರಿಮಿತ ಮಹಿಮೆಗೆ ನಮೋ ಎಂಬೆವೀಗ ।। ೩ ।

****