" ಶ್ರೀ ಮುದ್ದುಮೋಹನವಿಠ್ಠಲರು ಶ್ರೀ ಗುಂಡೂರಾವ್ ಅವರಿಗೆ ನೀಡಿದ ಅಂಕಿತ ನಾಮ" - " ಶ್ರೀ ವಾಸುಕೀಶಯನವಿಠ್ಠಲ "
ರಾಗ : ಕಾಂಬೋಧಿ ತಾಳ : ಝಂಪೆ
ವಾಸುಕೀಶಯನವಿಠ್ಥಲ
ಸಲಹೋ ।। ಪಲ್ಲವಿ ।।
ದೋಷರಾಶಿಯ ಕಳೆದು
ಪೋಷಿಸುವುದು ನಿರುತ ।। ಅ. ಪ ।।
ಪರಮಮಂಗಳ ನಿನ್ನ
ಚರಿತೆಯನು ತೋರಿಸಿ ।
ಕರಕರೆಯ ಬಿಡಿಸುವುದು
ಕರುಣಾನಿಧೆ ।
ಸರಿಗಾಣೆನೋ ನಿನ್ನ
ಸ್ಮರಣೆ ಮಾತ್ರವ ಕೊಟ್ಟು ।
ಕರ ಪಿಡಿದು ಕಾಯುವುದು
ಸುರಮುನಿ ವಂದ್ಯ ।। ಚರಣ ।।
ಪ್ರಾಣಪತಿಯೇ ಇವನ
ಸ್ಥಾಣು ಮಾರ್ಗವ ಬಿಡಿಸಿ ।
ಕಾಣಿಸೂವಂತೆ
ನೀನು ಕರುಣಿಸುವುದೂ ।
ವಾಣಿ ಅರಸನ ಪಿತನೆ
ಗೇಣುದರ ಚಿಂತೆಯ ।
ಜಾಣತನದಲಿ ಬಿಡಿಸೋ
ಪೂರ್ಣಪ್ರಜ್ಞಾತ್ಮ ।। ಚರಣ ।।
ತಾರತಮ್ಯ ಜ್ಞಾನ ಬಾರಿ
ಬಾರಿಗೂ ತಿಳಿಸಿ । ಉ ।
ದ್ಧಾರ ಮಾಡುವುದು ನೀನು
ವಾರಿಜಾಕ್ಷ ।
ದೂರ ನೋಡದೆ ಇವರ
ಪಾರುಗಾಣಿಸಿ ನೀನು ।
ಭೂರಮಣ ಮುದ್ದು-
ಮೋಹನವಿಠ್ಠಲ ಸಲಹೋ ।। ಚರಣ ।।
****