ಚನ್ನಪಟ್ಟಣದ ಅಹೋಬಲದಾಸರು
ಮಾಡಬೇಕೆಲೋ ಭಜನೆ ಮಾಡಬೇಕೆಲೊ ಪ
ಮಾಡಬೇಕು ಭಜನೆ ಮನದಿ ಕೂಡಬೇಕು ಪ್ರಣವ ಘನದೀ ಈಡ ಪಿಂಗಳ ಯಿದರೊಳಗಿರುವ ನಾಡಿ ಭೇದಗಳನು ತಿಳಿದೂ 1
ಆರು ಮೂರುಯೆಂಬೊ ದಾರಿ ಮೀರಿನೋಡುಯಿರುವ ಶಿಖರ ತೋರಿಯಾಡುವಂಥಾ ಘಂಟೆ ಭೇರಿನಾದಗಳನು ತಿಳಿದೂ 2
ವರದ ರಂಗನಿರುವನರಿಯೊ ಧರಣಿ ಕನಕಪುರಿಯ ಕೋಟೆ ಗುರುವು ತುಲಶೀರಾಮದಾಸ ರರಿತುಯಿತ್ತ ಚರಣ ಭಜನೆ 3
****