Showing posts with label ಭಾರತೀ ಮಜ್ಜನನಿಯ ಭಾರತೀ jagannatha vittala BHAARATI MAJJANANIYA BHARATI. Show all posts
Showing posts with label ಭಾರತೀ ಮಜ್ಜನನಿಯ ಭಾರತೀ jagannatha vittala BHAARATI MAJJANANIYA BHARATI. Show all posts

Saturday, 11 December 2021

ಭಾರತೀ ಮಜ್ಜನನಿಯ ಭಾರತೀ ankita jagannatha vittala BHAARATI MAJJANANIYA BHARATI



by ಜಗನ್ನಾಥದಾಸರು

ಭಾರತೀ ಮಜ್ಜನನೀ ಭಾರತೀ- ||ಪ||

ಭಾರತೀ ಭರತನರ್ಧಾಂಗಿ ಕರು-
ಣಾರಸಪೂರಿತ ಪಾಂಗಿ ಆಹಾ
ತಾರ್ಕ್ಷ್ಯ ಪ್ರಮುಖ ವೈಕಾರಿಕ ದೇವ ಗ-
ಣಾರಾಧಿತಾಂಘ್ರಿ ಸರೋರುಹೆ ಪಾಲಿಸು ||ಅ.ಪ||

ವಿದ್ಯುನ್ನಾಮಕೆ ವಿಧಿಜಾತೆ ಕೃತಿ
ಪ್ರದ್ಯುಮ್ನ ಜಠರಸಂಭೂತೆ ಅನ-
ವದ್ಯ ಸದ್ಗುಣ ಗಣವ್ರಾತೆ ಬ್ರಹ್ಮ-
ವಿದ್ಯವ ಪಾಲಿಸು ಮಾತೆ ಆಹಾ
ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ಪೆತ್ತ
ಶೃದ್ಧಾನಾಮಕೆ ಅನಿರುದ್ಧನ ತೋರಿಸೆ ||೧||

ಕಾಳಿ ದ್ರೌಪದಿ ಶಿವಕನ್ಯಾ ಮನ್ಮ-
ನಾಲಯದಲ್ಲಿ ನಿಲ್ಲೆ ಘನ್ನ ಪ್ರಾಜ್ಞ
ಮೌಳಿಮಣಿಯೆ ನಿತ್ಯ ಎನ್ನ ಪರಿ-
ಪಾಲಿಸೆ ನಂಬಿದೆ ನಿನ್ನ ಆಹಾ
ಶೈಲಜಾ ಶ್ಯಾಮಲ ಪೌಲೋಮಿ ಉಷೇರಿಂದ
ವಾಲಗ ಕೈಕೊಂಬ ಕಾಲಾಭಿಮಾನಿಯೆ ||೨||

ವಂದಿಪೆ ನಿನಗೀಂದ್ರ ಸೇನಾ ನಳ
ನಂದಿನಿ ಕರುಣಿಸು ಜ್ಞಾನ ಶ್ರೀ ಮು-
ಕುಂದನ ಪರಮಕಲ್ಯಾಣಿ ಗುಣ
ಸಿಂಧುವಿನೊಳಗೆ ಪೀಠಿಣಿ ಆಹಾ
ದ್ವಂದ್ವದಿ ಚರಿಸುವ ಗಂಧವಾಹನ ರಾಣಿ
ಸಿಂಧೂರಗಮನೆ ಪುರಂದರಾರಾಧಿತೆ ||೩||

ಗುಣತ್ರಯತ್ಮಕವಾದ ಲಿಂಗದೊಳು
ಅಣಿರೂಪಳಾಗಿ ತುರಂಗ ಮುಖ
ಅನಿಲಾಂತರ್ಗತ ಪಾಂಡುರಂಗನಂಘ್ರಿ
ವನಜಯುಗಲ ಮತ್ತಭೃಂಗ ಆಹಾ
ಎನಿಸಿ ತತ್ವಕಾರ್ಯ ಅನಿರುದ್ಧ ದೇಹಸ್ಥ
ಅನಿಮಿಷರೊಳು ಪೊಕ್ಕು ದ್ವಿನವರೂಪದಿ ಮಾಳ್ಪೆ ||೪||

ನಿಗಮತತಿಗಳಭಿಮಾನಿ ನಿನ್ನ
ಪೊಗಳಲೆನ್ನೊಶವೆ ಕಲ್ಯಾಣಿ ಆ ಪ-
ನ್ನಗರಾಜ ಸಾಹಸ್ರವಾಣಿಯಿಂದ
ಬಗೆಬಗೆ ತುತಿಪ ಸುಶ್ರೋಣಿ ಆಹಾ
ಮುಗಿವೆ ಕರಗಳೆನ್ನವಗುಣವನೆಣಿಸದೆ
ಜಗನ್ನಾಥವಿಠಲನಂಘ್ರಿಗಳ ಧ್ಯಾನವೀಯೆ ||೫||
****

ರಾಗ-ಶಂಕರಾಭರಣ (ಭೈರವಿ) 
ಅಟತಾಳ (ದಾದರಾ) (raga, taala may differ in audio)

pallavi

bhAratI majjananI bhAratI

anupallavi

bharatI bhatanardhAngi karuNArasa pUritapAngi AhA tArkSa pramukha vaikArika dEva gaNArAdhittAnghri sarOruhe pAlisu

caraNam 1

vidynnAmake vidhijAtE krati pradyumna jaThara sambhUtE anavadya sadguNa gaNavrAtE
brahma vidyava pAlisu mAtE AhA buddhyAbhimAniye sadyOjAtana petta shraddhA nAmake aniruddhana tOrise

caraNam 2

kALi draupadi shiva kanyA manmanAlayadalli nillE ghanna prAjnamauLi maNiyE nitya enna paripAlisE
nambide ninna AhA shailajA shyAmala paulOmi ushErinda vAlaga kaikomba kulAbhimAnavE

caraNam 3

vondipe ninagindra sEnAnaLa nandini karuNisu jnAna shrI mukundana parama kalyANi guNa sindhuvinoLalge
pIThiNi AhA dvandvadi carisuva gandha vAhana rANI sindUra gamane purandharArAdhitE

caraNam 4

guNatrayAtmakavAda lingadoLu anurUpaLAgi turanga mukha anilAntargata pANDurangananghri vanaja yugaLa
matta bhranga AhA enisi tatva kArya aniruddha dEhastha animisharoLu pokku dvinava rUpadi mALpe

caraNam 5

nigama tatigaLabhimAni ninna pogaLanennoshave kalyANi A pannagarAja sahasra vANiyinda bage bage
tutipa sushrONi AhA mugive karegaLennavaguNavane Nesade jagannAtha viThalananghrigaLa dhyAnava nIyE
***



ಭಾರತೀ ಮಜ್ಜನನಿಯ ಭಾರತೀ ಪ

ಭಾರತೀ ಭರತನಾರ್ಧಾಂಗಿ ಕರು
ಣಾರಸ ಪೂರಿತಾಪಾಂಗಿ ಅಹ
ತಾರಕ್ಷ್ಯ ಪ್ರಮುಖ ವೈಕಾರಿಕ ದೇವಗ
ಣಾರಾಧಿತಾಂಘ್ರಿ ಸರೋರುಹೆ ಪಾಲಿಸೆ ಅ

ವಿದ್ಯುನಾಮ್ನಮಕೆ ವಿಧಿಜಾತೆ ಕೃತಿ
ಪ್ರದುಮ್ನ ಜಠರಸಂಭೂತೆ ಅನ
ವದ್ಯ ಸದ್ಗುಣಗಣವ್ರಾತೆ ಬ್ರಹ್ಮ
ವಿದ್ಯವ ಪಾಲಿಸು ಮಾತೆ ಅಹ
ಬುಧ್ಯಾಭಿಮಾನಿಯೆ ಸದ್ಯೋಜಾತನ ಪೆತ್ತ
ಶ್ರದ್ಧಾ ನಾಮಕೆ ಅನಿರುದ್ಧನ ತೋರಿಸೆ 1

ಗುಣತ್ರಯಾತ್ಮಕವಾದ ಲಿಂಗದೊಳು
ಅಣರೂಪಳಾಗಿ ತುರಂಗ ಮುಖ
ಅನಿಲಾಂತರ್ಗತ ಪಾಂಡು ರಂಗನಂಘ್ರಿ
ಭೃಂಗ ಆಹ
ಅನಿರುದ್ಧ ದೇಹಸ್ಥ
ಅನಿಮಿಷರೊಳು ಪೊಕ್ಕು ದ್ವಿನವರೂಪದಿ ಮಾಳ್ಪೆ 2

ಕಾಳಿದ್ರೌಪದಿ ಶಿವಕನ್ಯಾ ಮನ್ಮ
ನಾಲಯದೊಳು ನಿಲ್ಲೆ ಘನ್ನ ಪ್ರಾಜ್ಞ
ನಿತ್ಯ ಎನ್ನ ಪರಿ
ಪಾಲಿಸು ನಂಬಿದೆ ನಿನ್ನ ಆಹ
ಶೈಲಜೆ ಶ್ಯಾಮಲೆÉ ಪೌಲೋಮಿ ಉಷೇರಿಂದ
ಓಲಗ ಕೈಕೊಂಬ ಕಾಲಾಬ್ಧಿ ಮಾನಿಯೆ 3

ವಂದಿಪೆ ನಿನಗಿಂದ್ರಸೇನಾ ನಳ
ನಂದಿನಿ ಕರುಣಿಸು e್ಞÁನ ಶ್ರೀ ಮು
ಕುಂದನ ಪರಮ ಕಲ್ಯಾಣ ಗುಣ
ಸಿಂಧುವಿನೊಳಗೆ ಪಾಠೀನ ಆಹ
ನಂದದಿ ಚರಿಸುವ ಗಂಧವಾಹನ ರಾಣಿ
ಸಿಂಧೂರ ಗಮನೆ ಪುರಂದರಾರಾಧಿತೆ 4

ನಿಗಮತತಿಗಳಭಿಮಾನಿ ನಿನ್ನ
ಪೊಗಳಲೆನ್ನೊಳವೆ ಕಲ್ಯಾಣಿ ಆ ಪ
ನ್ನಗರಾಜ ಸಹಸ್ರ ವಾಣಿಯಿಂದ
ಬಗೆ ಬಗೆ ತುತಿಪ ಸುಶ್ರೋಣೆ ಆಹ
ಮುಗಿವೆ ಕರಗಳೆನ್ನವಗುಣಗಳೆಣಿಸದೆ
ಜಗನ್ನಾಥವಿಠಲನಂಘ್ರಿಗಳ ಧ್ಯಾನವನೀಯೆ 5
********