Showing posts with label ಉಗಾಭೋಗ ugabhoga ankita others. Show all posts
Showing posts with label ಉಗಾಭೋಗ ugabhoga ankita others. Show all posts

Tuesday, 1 December 2020

ಉಗಾಭೋಗ ugabhoga ankita others

.

ದಾಸರು ಈ ಉಗಾಭೋಗವನ್ನು ಶ್ರಾವಣ ಮಾಸ ಶುಕ್ಲಪಕ್ಷ ಬಿದಿಗೆ ಸ್ಥಿರವಾರದಂದು ರಚಿಸಿದ್ದು.

 ೧೦) ರಾಗ : ಪೂರ್ವಿಕಲ್ಯಾಣಿ sumukh moudgalya

ಮೂರು ವರಗಳನ್ನು ಮೋದದಲಿತ್ತು

ಸ್ವರೂಪ ಸುಖದಲಿ ಜೀವಿಸೆಂದು

ನೀರಜಾಕ್ಷನೆ ಕರುಣಾ ಮಾಡಿದುದಕೆ

ಶಾರೀರೇಂದ್ರಿಯಗಳಿಗೆ ಸುಖವಾಯಿತೋ

ವಿವರ ತಿಳಿಯಲಿಲ್ಲ ಮೂರು ಬಗೆಯಿಂದ

ಪುರುಷಾರ್ಥಗಳ ಸ್ವರೂಪವ 

ಗುರುವಿಜಯರಂದು ಗೂಢ ಮಾತಿಲಿ

ಮೂರು ವರಗಳುಯಿತ್ತು ಬುದ್ಧಿ ಪೇಳಿ

ಪ್ರೇರೇಪಿಸಲಿಲ್ಲೆಂಬ ಸ್ಪಷ್ಟತ್ವಾಗಿ ಎನಗೆ

ವಾರಿಜಾಕ್ಷನೆ ಇಂದು ನೀನದರಂತೆ

ಮೂರು ವರಗಳ ಸೌಖ್ಯ ವೈದೆಯೆಂದು

ಔದಾರ ಮನಸಿನಿಂದ ಪೇಳಿದಲ್ಲದೆ

ತೋರಿಸಲಿಲ್ಲ ಅದರ ಕುರುಹು ಸಂಜ್ಞವನ್ನು

ಸಾರ ಸುಗುಣ ಪೂರ್ಣನೆ ನಿರ್ಮಲಾತ್ಮಾ

ಮೂರು ವಿಧವಾದ ಶಾಪ ತೀರಿದ ಬಗೆಯೊ ಮಾರಾರಿ

ಮರ್ದನನೆ ಕರುಣ ಮಾಡಿ

ಮೂರರಾಜ್ಞಾರೂಪ ತಿಳುಹಿ ವೇಗದಿಂದ

ಸಾರ ಸುಜನ ಕಾರ್ಯವಾಗುವಂತೆ ಕಲ್ಪಿಸುವದು

ಬರಿದೆದಂಧವ್ಯಾಕೆ ಮೋದ ದಯಾಸಿಂಧು ಕೃಷ್ಣ ಅ-

ಪಾರ ಮಹಿಮನೆ ಅಮಿತ ತೇಜ

ಕ್ರೂರಗಜಕೆಹರಿ ಗುರುವಿಜಯವಿಠಲರೇಯ 

ತೋರಿಸಯ್ಯಾ ಚರಣ ತ್ವರಿತದಿಂದ॥


https://drive.google.com/file/d/1UmGerpJnwOKhpJGaQPf5_nHq4jeu-E9r/view?usp=drivesdk


***

ಮೊದಲಕಲ್ಲು ಶ್ರೀಶೇಷದಾಸರ ಆಪತ್ತು ಪರಿಹಾರ ಉಗಾಭೋಗಗಳು 


 ಗಾಯನ : ಶ್ರೀ ಸುಮುಖ ಮೌದ್ಗಲ್ಯ 


 ೧೧) ರಾಗ : ಶುಭಪಂತುವರಾಳಿ


ಉದ್ಯುಕ್ತರಾಗಿ ಎನ್ನ ಯೋಗ್ಯತಯಿದ್ದನಿತು

ಸದ್ವಿರಾಗದಿಂದ ಧೇನಿಸುತ್ತ

ಹೃದ್ವನಜದಲ್ಲಿ ಪೋಗಿ ಕೈಮುಗಿದು ನಮಿಸಿದರು

ಛದ್ರ ಮೂರುತಿ ನಿನ್ನ ಕುರುಹ ಕಾಣಿಸಿಕೊಳದೆ

ಎದ್ದು ಪೋಗಿವಂತೆ ಮನಸು ಮಾಡಿ

ಕ್ಷುದ್ರವಾದ ವಿಷಯ ಜಾಲಗಳು ಎರಗಿಸಿ ಸ-

ಮುದ್ರ ಪೋಲುವ ದುಃಖ ಉಣಿಸಿ ಮರಳೆ ಬುದ್ಧಿ ಭ್ರಮಣವಾಗಿಯಿರುವ ಸಮಯದಲ್ಲಿ ಅ-

ಶುದ್ಧವಾದ ಹೀನ ಸ್ಥಳದಲ್ಲಿ

ಮುದ್ದು ಮೋಹನವಾದ ರೂಪದಿಂದಲಿ ತೋರಿ

ಬುದ್ಧಿಗೆ ವ್ಯಾಕುಲ ತೋರ್ಪದೇನೊ

ನಿದ್ರರಹಿತ ಇಂತು ವಿನೋದ ಮಾಡಿದರೆ

ಬದ್ಧನಾದ ಎನಗೆ ಸುಖವಾಹದೇ

ಕದ್ರುಗೀಶಯನ ನಿನ್ನ ಮನೋ ವಚನ ಕಾಯದಿಂದ

ಪಾದಪದ್ಮಕ್ಕೆರಗೀದ ಮ್ಯಾಲೆ ಇನಿತು ಮಾತೇ

ಮಧ್ವಾಂತರ್ಗತ ಗುರುವಿಜಯವಿಠಲರೇಯ 

ಶುದ್ಧಾನಂದವಿತ್ತು ವಿಷಯನಾಗು॥

***

ಮೊದಲಕಲ್ಲು ಶ್ರೀಶೇಷದಾಸರ ಆಪತ್ತು ಪರಿಹಾರ ಉಗಾಭೋಗಗಳು 


 ಗಾಯನ : ಶ್ರೀ ಸುಮುಖ ಮೌದ್ಗಲ್ಯ 


 ೧೨) ರಾಗ : ಮಧ್ಯಮಾವತಿ


ಒಂದು ಸ್ಮರಿಸುತಿರೆ ಆನಂದವಾಗುತಿದೆ ಮ-

ತ್ತೊಂದು ಸ್ಮರಿಸುತಿರೆ ಕ್ಲೇಶವಹದೊ

ಕುಂದು ಲೇಸಗಳು ಕಾಲಭೇದದಿಂದ ಸ-

ಮ್ಮಂಧ ಗೈಸಿದೆನಗೆ ಸಾರ್ವಭೌಮಾ

ಇಂದಿರಾಪತಿ ನಿನ್ನ ಸತ್ಯ ಸಂಕಲ್ಪವ 

ಮಂದನಾದವ ನಾನು ದಾಟುವೆನೆ

ಅಂದು ಮಾಡಿದ ಕರ್ಮ

ಒಂದೊಂದು ಸ್ಮರಿಸುತಿರೆ

ತಂದೆ ಎನ್ನಯ ಭಾಗ್ಯಕ್ಕೆಣೆಯಾವದೊ

ಇಂದಿನ ದುರ್ಭಾಕ್ಯಕ್ಕೆ ಎಣಿಸಿ ಗುಣಿಸಿ ನೋಡೆ

ಕುಂದಿಗೆ ಸಮ ಉಂಟೆ ವಸುಂಧರಿಲಿ

ಮಂದರೋದ್ಧಾರ ಗುರುವಿಜಯವಿಠಲ ನಿನ್ನ 

ಪೊಂದಿದವಗಿನಿತು ಫಲವೇನೊ॥



https://drive.google.com/file/d/1V1rU42jFHxQn2pI9qe1nMxKxJRXq8FfN/view?usp=drivesdk

***


ಶ್ರೀ ಕನಕದಾಸಾರ್ಯರು ಒಂದು ಪದ್ಯದಲ್ಲಿ ಮಾಡಿದ ಅದ್ಭುತ ಪದ ಪ್ರಯೋಗ.


ದುರಿತಾಬ್ಧಿ ಕುಂಭಸಂಭವ ದುರಿತಗಿರಿವಜ್ರ

ದುರಿತ ಮದಗಜಸಿಂಹ ನಾರಾಯಣಾ

ದುರಿತಾಹಿ ವೈನತೇಯ ದುರಿತಮೃಗ ವ್ಯಾಘ್ರನೇ

ದುರಿತ ವನದಾವ ಶಿಖಿ ದುರಿತಾಂಧಕಾರ ರವಿ

ದುರಿತ ಲತಾಲವಿತ್ರ ನಾರಾಯಣ

ದುರಿತಮರ್ದನ ಕಾಗಿನೆಲೆಯಾದಿಕೇಶವನೆ

ದುರಿತಬಂಧವ ಪರಿದೆ ನಾರಾಯಣ //


ಎಲ್ಲ ದುರಿತಗಳನ್ನು, ಪಾಪಗಳನ್ನು ಪರಮಾತ್ಮ ದೂರ ಮಾಡುವ ಬಗೆಯನ್ನು ಇಲ್ಲಿ ಒಂಭತ್ತು ರೀತಿಗಳಲ್ಲಿ ತಿಳಿಸಿದ್ದಾರೆ.

1) ದುರಿತಾಬ್ಧಿ ಕುಂಭಸಂಭವ =ಅಗಸ್ತ್ಯ ಋಷಿಗಳು ಕುಂಭ ಸಂಭವ ರೆಂದು ಪ್ರಖ್ಯಾತರು. ಅವರು ಇಡೀ ಸಮುದ್ರವನ್ನು ಒಂದೇ ಬಾರಿಗೆ ಆಪೋಶನ ಮಾಡಿದವರು. ಇಲ್ಲಿ ದಾಸರು ಪರಮಾತ್ಮ ನನ್ನು ದುರಿತಗಳ ಅಂದರೆ ನಮ್ಮ ಪಾಪಗಳ ಸಮುದ್ರಕ್ಕೆ ಅಗಸ್ತ್ಯರಂತವನು, ನಮ್ಮ ಪಾಪದ ಕಡಲಿಯನ್ನು ಇಲ್ಲದಂತೆ ಮಾಡುವವನು ಅಂತಾರೆ.

2) ದುರಿತ ಗಿರಿ ವಜ್ರ =ನಮ್ಮ ಪಾಪಗಳೆoಬ ಬೆಟ್ಟಗಳನ್ನು ಛೇಧಿಸುವ ವಜ್ರಾಯುಧ ಆ ಪರಮಾತ್ಮನು.

3) ದುರಿತಮದ ಗಜಸಿಂಹ = ಪಾಪಗಳೆoಬ ಮದಿಸಿದ ಆನೆಗಳ ಪಾಲಿಗೆ ಅವುಗಳನ್ನು ಮಣಿಸುವ ಶ್ರೇಷ್ಠ ಸಿಂಹ

4) ದುರಿತ ಅಹಿ ವೈನತೇಯ = ಪಾಪಗಳೆoಬ ವಿಷ ಸರ್ಪಗಳನ್ನು ಕೊಲ್ಲುವ ವೈನತೇಯ ಅಂದರೆ ಗರುಡನು

5) ದುರಿತ ಮೃಗ ವ್ಯಾಘ್ರ = ಪಾಪಗಳೆoಬ ಮೃಗಗಳ ಪಾಲಿಗೆ ಹೆಬ್ಬುಲಿ ಆ ಭಗವಂತ

6) ದುರಿತವನ ದಾವಶಿಖಿ = ಪಾಪಗಳೆoಬ ವನ, ಕಾಡುಗಳನ್ನು ಸುಟ್ಟು ಬೂದಿ ಮಾಡುವ ಅಗ್ನಿ

7) ದುರಿತ ಜೀಮೂತ ಪವನ = ಪಾಪಗಲೆನ್ನುವ ಮೋಡಗಳನ್ನು ಚದುರಿಸುವ ಬಿರುಗಾಳಿ

8) ದುರಿತ ಅಂಧಕಾರ ರವಿ = ಪಾಪವೆಂಬ ಕತ್ತಲನ್ನು, ಅಜ್ಞಾನವನ್ನು ದೂರೋಡಿಸುವ ಸೂರ್ಯನು

9) ದುರಿತಲತಾಲವಿತ್ರ = ಪಾಪ ಗಳೆoಬುವ ಲತೆ ಗಳು, ಬಳ್ಳಿಗಳನ್ನು ಕತ್ತರಿಸುವ ಸಾಧನ ಕಾಗಿನೆಲೆಯಾದಿ ಕೇಶವನೆಂಬ ನಮ್ಮ ಭಗವಂತ ಅಂತ ಶ್ರೀ ದಾಸರ್ಯಾರು ಕೊಂಡಾಡಿದ್ದಾರೆ.

****





vijayeendra teertharu

ತಪ್ಪುಗಳನರಸ ತನ್ನ ನಂಬಿದವರ ಶ್ರೀಪತಿ

ತಪ್ಪುಮಾಡಿದ ಅಜಮಿಳ ಉಮಾಪತಿ ಮುಖರ

ತಪ್ಪು ನೋಡಿದನೆ ಎ-

ನ್ನಪ್ಪ ಶ್ರೀವಿಜಯೀಂದ್ರರಾಮ ದಯಾನಿಧಿ

***

ಕಾಖಂಡಕಿ ಶ್ರೀ ಕೃಷ್ಣದಾಸರು

ಗಜಾನನಾ ಗಜಾನನಾ ಸ್ವಾಮಿ ನಿನ್ನವನಾ ಪಾರ್ವತಿ ನಂದನಪೂರ್ವ ಚರಿತ ಘನ ನಿರ್ವಿಘ್ನ ದಾಯಕ ಗಜಾನನಾ ಮೂಷಕವಾಹನ ದೋಷಕರಿಪುಕುಲ ನಾಶಿಕ ವಿಗ್ರಹಗಜಾನನಾ ಮದನಾರಿ ಮನೋಭವ ರದಸಾಮಲೇಕದಂತದಯ ಸದನಾ ಲಂಬೊದರ ಗಜಾನನಾ ಕರುಣಾಪೂರಿತ ಸರ್ವಾ ಭರಣಾ ಭೂಷಿತ ಭಯ ಹರಣಾ ತ್ರಿ ಜಗನುತ ಗಜಾನನಾ ಹೊಂದಿದ ಶರಣರಿಗೆಂದೆಂದು ವಿದ್ಯಗಳ ತಂದಿದಿರಿಡುತಿಹ ಗಜಾನನಾ ತಂದೆ ಮಹಿಪತಿ ನಂದÀನ ಸಾರಥಿ ಇಂದೆನ್ನನುದ್ಧರಿಸು ಗಜಾನನಾ

***


 ಉಗಾಭೋಗ

             🌼🌼

ಸಾಧನದ ದೇಹವಿದು|

ನೀ ದಯದಿ ಕೊಟ್ಟದ್ದು|

ಬಾಧೆಗೊಳಗಾಗಿಹುದು|

ಆದಿಮೂರುತಿಯೇ|

ಸಾಧನಕೆ ಪ್ರತಿಬಂಧ|

ವೇದಗೋಚರ ಹರಿಯೇ|

ನೀ ದಯದಿ ನೀಗೆಂದು |

ಮಾಧವನೆ ಭಿನ್ನೈಪೆ|

ಅನ್ಯ ಸಾಧನೆ ಕಾಣೆ|

ನಿನ್ನಸ್ಮಂತಿ ಹೊರತಿನ್ನೂ |

ನನ್ನೆಯಿಂ ಕೈ ಪಿಡಿಯೊ |

ಪನ್ನಂಗ ಶಯನಾ |

ಜೀಣ೯ವಾಯಿತು ದೇಹ |

ಮುನ್ನಾವ ಗತಿಯೆನಗೆ |

ಕಣ್ಣಿಗೆ ಕಾಣೋ *ಗುರುಗೋವಿಂದವಿಠಲಾ |

***


ಕಾಖಂಡಕಿ ಶ್ರೀ ಕೃಷ್ಣದಾಸರು

ಈತನೆನೇ ಹನುಮನು ಈತನೆನೇ ನಮ್ಮಗುರು ಲಂಕೆಯ ಸಖಗ ನಿಶ್ಯಂಕೆಯಲುಣಿಸಿದಾ ಕೌರವ ಬಲದ ಕುಠಾರಿಯಂದೆನಿಸಿದಾ ಮೂರೇಳು ದುರ್ಭಾಷ್ಯ ಹಾರಿಸಿದಾ ಮುನಿ ಹರಿ ಮತ ಸ್ಥಾಪನ ಬಿರುದಾಂಕ ದೇವನು ಗುರುಮಹಿಪತಿ ಜನುದ್ಧರಿಸದ ದೇವನು ||

***

ಶ್ರೀ ಪ್ರಾಣೇಶದಾಸರ ಉಗಾಭೋಗ 🙏

ಅಮರಾಸ್ಯಮೂಲೆಗೆ ಭಕ್ಷ ಪಾಯಸವನ್ನು |

ಕಮ್ಮಗೋಲಾರಿ ಕೋಣೆಗೆ ಲೇಹ್ಯ ಪೇಯಾದಿ |

ಸಮೀಚೀನಸೂಪ ಮಧ್ಯದಲಿ ತುಪ್ಪಾನ್ನವು |

ಕ್ರಮದಿಂದ ಮುಂದೆ ತಾಂಬೂಲ ತಕ್ರೋದಕ |

ವಿಮಲ ಭಕ್ತಿಯಲಿಟ್ಟು ವಿಪದರಚಕ್ರಮೇರು |

ಅಮರರಾಕಳು ಇನಿತು ಪಂಚ ಮುದ್ರೆಯ ತೋರಿ |ಶ್ರೀರಮ ಮನೋರಮ ಶ್ರೀ ಪ್ರಾಣೇಶವಿಠಲನಿಗೆ |

ಸಮರ್ಪಸಿ ಅನಲ ದ್ವಿಜರಿ ಗಿತ್ತುಂಬುವದೇ ಧರ್ಮ ||

ಭಾವಾರ್ಥ : ಶ್ರೀ ಪ್ರಾಣೇಶ ದಾಸರು ಈ ಉಗಾಭೋಗದಲ್ಲಿ ನೈವೇದ್ಯ ಬಡಿಸುವ ಶಾಸ್ತ್ರೀಯ ಪದ್ಧತಿಯನ್ನು ಸುಂದರವಾಗಿ ತಿಳಿಸಿದ್ದಾರೆ.

ಅಮರಾಸ್ಯ ಅಂದರೆ:  ಅಮರರಿಗೆ ಅಸ್ಯ ಅಂದರೆ ದೇವತೆಗಳಿಗೆ ಮುಖದಂತಿರುವ ಅಗ್ನಿ. ಅಮರಾಸ್ಯ ಮೂಲೆ ಅಂದರೆ ಅಗ್ನಿಮೂಲೆ ಆಗ್ನೇಯ ಮೂಲೆ ಅಂತ.

ದೇವರಿಗೆ ಧೂಪಾರತಿಯ ನಂತರ ಭೂಮಿ ಶುದ್ಧ ಮಾಡಿ ಚೌಕಾಕಾರ ಮಂಡಲ ಮಾಡಿ ರಂಗವಲ್ಲಿ ಹಾಕಿ ಅದರ ಮೇಲೆ ತಟ್ಟೆ ಅಥವಾ ಎಲೆ ಹಾಕಿ, ಎಲೆಯ ಆಗ್ನೇಯ ಮೂಲೆಗೆ ಪಾಯಸ ಭಕ್ಶ್ಯಾ ದಿಗಳನ್ನೂ,

ಕಮ್ಮ ಗೋಲಾರಿ ಕೋಣೆಗೆ ಅಂದರೆ ಮನ್ಮಥನ ವೈರಿ ಈಶಾನ (ಈಶಾನ್ಯ ) ಕ್ಕೆ ಲೇಹ್ಯ ಪೇಯಾದಿಗಳನ್ನು ಮೇಲೆ ವ್ಯಂಜನಾದಿಗಳನ್ನು ಮಧ್ಯದಲ್ಲಿ ಅನ್ನ ಅದರ ಅಕ್ಕ ಪಕ್ಕ ತೊವ್ವೆ ತುಪ್ಪ ಬಡಿಸಬೇಕು. ಪ್ರತ್ಯೇಕ ಮಂಡಲದಲ್ಲಿ ತಾಂಬೂಲ ಮಜ್ಜಿಗೆ (ಹಾಲು -ಮೊಸರು )ಶುದ್ಧ ಜಲ ಇತ್ಯಾದಿಗಳನ್ನು ಭಕ್ತಿಯಿಂದ ಇಡಬೇಕು. ನಂತರ ಗರುಡ, ಶಂಖ, ಚಕ್ರ, ಮೇರು, ಧೇನು, ಮುದ್ರಾ ತೋರಿಸಿ ಶ್ರೀ ರಾಮ ರಮೆಯರಿಗೆ ಸಮರ್ಪಸಿ ನಂತರ ವೈಶ್ವದೇವ ಮಾಡಬೇಕು. ಯೋಗ್ಯ ಬ್ರಾಹ್ಮಣರ ಭೋಜನ ಮಾಡಿಸಿ ತರುವಾಯದಲ್ಲಿ ತಾನು ಸ್ವೀಕರಿಸಬೇಕು ಎನ್ನುವುದನ್ನು ದಾಸರು ತಿಳಿಸುವರು.

ಧೇನು ಮುದ್ರೆಯಿಂದ ಅಮೃತಪ್ರಾಯ, ಗರುಡ ಮುದ್ರೆಯಿಂದ ವಿಷ ಪರಿಹಾರ, ಚಕ್ರ ಮುದ್ರೆ ಯಿಂದ ದೈತ್ಯರು ಬರದಂತೆ ರಕ್ಷಿಸುವುದು, ಶಂಖಮುದ್ರೆಯಿಂದ ಪವಿತ್ರ, ಗದಾ ಮುದ್ರೆಯಿಂದ ದಿಗ್ಬಂಧನ, ಮೇರು ಮುದ್ರೆಯಿಂದ ಅಕ್ಷಯ ಹೀಗೆ ಮುದ್ರೆ ತೋರಿಸುವುದರಿಂದ ಭೋಜನ ಪದಾರ್ಥಗಳು ಪರಿಶುದ್ಧವಾಗುವವು ಎಂದು ಶ್ರೀ ವಿಜಯದಾಸರು ತಮ್ಮ ನೈವೇದ್ಯ ಪ್ರಮೇಯದಲ್ಲಿ ತಿಳಿಸಿದ್ದಾರೆ.

ದಾಸವಾರ್ಯಾರಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣ ನಮಸ್ತು.

***

ಎಷ್ಟು ನಾ ಪ್ರಾರ್ಥಿಸಲು ಶಿಷ್ಟಜನ ಪರಿಪಾಲ

ದೃಷ್ಟಿಗೆ ದೃಷ್ಟನಾಗೋ ಮುಟ್ಟಿ ಭಜಿಸುವಂತೆ 

ಕೊಟ್ಟು ಭಕುತಿಯನಿತ್ತು ಶಿಷ್ಟಜನಸಂಗವನಿತ್ತು 

ಸೃಷ್ಟಾದಿ ಅಷ್ಟಕರ್ತ ಮಹಿಮನೆ ಸ್ಪಷ್ಟರೂಪವನೆ ತೋರೊ

ಶ್ರೇಷ್ಠ ಗುರುತಂದೆಗೋಪಾಲವಿಟ್ಠಲ

ನಿನ್ನ ಪಟ್ಟಣದೊಳಿಟ್ಟು ಸಲಹೊ

***

.ಆದಿಯುಗದಿ ಮಹ ಆದಿದೈತೇಯನೊಬ್ಬ

ಮೇದಿನಿಯೊಳ್ ಸ್ವರ್ಣಕಶ್ಯಪು ನಾಮದಿ

ಸಾಧಿಸಿ ಬಂದವಗೊಬ್ಬ ಸೋದರ ಸ್ವರ್ಣಾಂಬಕನೆನಿಸಿ

ಮೇದಿನಿ ಚೋರನಾಗಿ ಹತನಾದನು

ಆದಿಶೇಷನೆ ವಿಷ್ಟಕ್ಸೇನ ತಾ-

ನಾದ ಪ್ರಹ್ಲಾದ ಪ್ರಾಣಾವೇಶದಿಂದ

ಸೋದರ ಜೀವಾಂಶಾಪಾನಾವಿಷ್ಟ ಸ-

ಲ್ಹಾದನಾಮಕ ಮಿತ್ರನಾದ ಕ

ಹ್ಲಾದ ವ್ಯಾನಾವೇಶದಿಂದ

ಮೋದದಿ ಸೋಮಾಂಶೋದಾನಾಯುತ ನು-

ಹ್ಲಾದ ನಾಮಕ ಸಂಭೂತನಾದ

ಆದಿ ಗಣಪ ಸಮಾನಾವೇಶದಿಂದ

ಆದರೈವರಾದೈತ್ಯಗೆ ಪುತ್ರರು

ಮೇದಿನಿ ಸುರರುದ್ಧಾರಗೋಸುಗ

ಆದಿದೈವ ನಾರೇಯಣ ತಾ

ನಾದಿಕಾರಣ ವಿಶ್ವಕರ್ತಾ

ಮೋದಾನಂದ ಮೂರುತಿ ಸುಗುಣ

ಭೋಧಪೊರ್ಣ ಸರ್ವಜ್ಞ ಸ್ವಾತಂತ್ರ

ವೇದಪುರುಷಾದಿ ಜಡಾದಿ ಜಗಕೆ

ಆಧಾರ ಹರಿ ಎಂಬ ಜ್ಞಾನವ

ಭೋದಿಸಿ ಬೊಮ್ಮಮುಖರು ಹರಿ

ಪಾದಸೇವಕರೆನುತ ನಿತ್ಯ

ವಾದದಿ ವಾದಿಗಳ ಜಯಸಿದರವರ

ಪಾದಸೇವಿಸಿ ಕರುಣಾಪಡೆದು

ಆದಿ ಗುರು ಜಗನ್ನಾಥವಿಠಲನ್ನ

ಆದರದಲಿ ಭಜಿಪೆ ಪರಮ ಸುಖ

***

 ..


ಇಂದು ಶೇಖರ ಶಿವ ನಂದಿವಾಹನ ಶೂಲಿ

ಸ್ಕಂಧಗಣಪರ ತಾತ ದಂದಶೂಕಕಲಾಪ

ಮಂದಾಕಿನಿಧರ ಪುರಂದರ ಮುಖಸುರ

ವೃಂದವಿನುತ ಪಾದಾದಿಂದ ಶೋಭಿತ ದೇವ

ಕಂದು ಕಂಧರ ತ್ರಿಪುರ ಸಂದೋಹಹರ ಹರ

ವಂದಿಸಿ ಬೇಡುವೆ ಫಲ ಸಂದೇಹಮಾಡದಲಿತ್ತು

ನಂದ ನೀಡುವಿ ನೀನೆಂದು ನಿನ್ನಯ ಬಳಿಗೆ

ಬಂದೆನ್ನ ಮನೋರಥಾ ಇಂದು ಪೂರ್ತಿಸೋ ಗುರೋ

ಗಂಧವಾಹನ ತನಯಾ ಇಂದಿರಪತಿ ಗುರುಜಗನ್ನಾಥವಿಠಲಾ

ನಂದಾ ಬಡುವನಿದಕೆ ಸಂದೇಹ ಇನಿತಿಲ್ಲಾ

**


ಉ ಗಾ ಭೋ ಗ

ನಾನು ನನ್ನದು ಎಂಬುದಾವ ಕಾಲಕುಬೇಡ
ನೀನು ನಿನ್ನದು ಎಂಬ ದಿವ್ಯಮಂತ್ರವೇ ಇರಲಿ
ಅನುಗಾಲನುಡಿಸಿದನು ಎನ್ನಿಂದ

ಶ್ರೀ ತಂದೆಮುದ್ದುಮೋಹನವಿಠಲಾ
******


ಭಾರತಿದೇವಿ ಭರತನ ರಾಣಿ

ಭಾರವು ನಿನ್ನದು ತಾಯೆ

ಧಾರುಣಿಯೊಳು ನಿನ್ನಾ

ಕೀರುತಿ ಕೇಳಿ ಸಾರಿದೆ ನಿನ್ನನು

ಸಾರಭಕುತಿಯನಿತ್ತು

ಪಾರುಗಾಣಿಸು ವೈ

ಕಾರಿಕಸುರಕರವಾರಿಜ ಪೂಜಿತ

ಚಾರುಚರಣಯುಗ

ತೋರಿಸಿ ಎನ ಮನೋ-

ನೀರಜದಲಿ ನಿಂದು ಮಾರಮಣನ ಪಾದ

ಸೇರಿಪ ಭಕ್ತಿಯ ದಾರಿಯನಿತ್ತು ಭವ

ದÀೂರನ ಮಾಡೆಂದು ಸಾರಿದೆ ಸಾರಿದೆ

ಮಾರಜನಕ ಗುರು ಜಗನ್ನಾಥವಿಠಲನ

ತೋರಿಸು ತೋರಿಸು ದೂರಮಾಡದಲೆ

***


ಮಾರುತಿ ನಿನ್ನಾ ನಿರುತದಿ ಭಜಿಪೆ

ತ್ವರಿತದಿ ಹÀರಿ ಸರ್ವೋತ್ತಮನೆಂಬುವ

ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು

ಪರಿಪಾಲಿಸು ಎಂದು ಶಿರಸದಿ ನಮಿಪೆ

ಸರಿಯಾರಯ್ಯಾ ನಿನಗೀ ಸರಸಿಜಜಾಂಡದೊಳು

ಆರಿಸಿ ನೋಡಲು ಆರಾರು ಇಲ್ಲವೊ

ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ

ಹರಿ ತಾ ಕರುಣಿಪನೆಂದು

ಅರಿತು ನಿನ್ನಯ ದಿವ್ಯ

ಚರಣ ಸೇರಿದೆನಯ್ಯಾ

ಸರಿಬಂದದ್ದು ಮಾಡೋ

ಹರಿ ಕುಲಾವರಿಯಾನೆ

ಪರಿಪರಿ ಜನರನ್ನು ಪಾಲಿಸಿ ಎನ್ನನು

ದೂರದಿ ಇಟ್ಟರೆ ದೊರೆತನವೇನಯ್ಯಾ

ಸಾರುವೆ ಸಾರುವೆ ಸರಸಿಜನಾಭನ ಸುತನೆ

ಆರುಮೂರೆರಡೊಂದು ಸಾವಿರಾ

ಮೂರೆರಡು ಶತಶ್ವಾಸ ಜಪಗಳನು

ಮೂರುಜೀವರಲ್ಲಿ ನೀರಜಜಾಕಲ್ಪ

ಪರಿಯಂತರ ಮಾಡಿ ಅವರವರ ಗತಿಯಾ

ಮರಿಯದೆ ನೀಡುವಿ ಗಿರಿಶಾನುತಪಾದ

ಗುರುಜಗನ್ನಾಥ ವಿಠಲನ್ನ ಅರಿವಂತೆ

ಮಾಡೋ ಧೀರಾ ಕರುಣಿಯೇ

***

..

ವಾಣಿ ಬೊಮ್ಮನ ರಾಣೀ ಗುಣಗಣ ಶ್ರೇಣೀ

ವೀಣಾಪಾಣೀ ಕೋಕಿಲವಾಣೀ ಕಾಲಾಹಿವೇಣೀ

ಮಾಣದೆ ಎನ್ನಾ ವಾಣಿಲಿ ನಿಂತು ಜಾಣತನವಿತ್ತು

ವೀಣೆಯ ಪಿಡಿದು ವಾಣಿಯ ನುಡಿಸುವ

ವೈಣಿಕನ ತೆರ ವಾಣಿಲಿ ಹರಿಗುಣ

ಗಾನವ ಮಾಡಿಸೆ ಪಾಣಿಯುಗವ ಮುಗಿದು

ಗೋಣು ಬೊಗ್ಗಿಸಿ ನಮಿಪೆ ಕ್ಷೋಣಿಯೊಳಗೆ ಙÁ್ಞನ

ಕ್ಷೀಣಿಸಿದಂತಿತ್ತು ಪ್ರಾಣಾಂತರ್ಗತ ವೇಣುಗೋಪಾಲನ

ಕಾಣಿಸುಯನ್ನೊಳು ಕರುಣದಲಿ

ಮಾನದ ಗುರುಜಗನ್ನಾಥವಿಠಲ ತಾನೆ ತೋರುವಂತೆ ಮಾಡೆ

***


ಸರಸಿಜೋದ್ಭವ ರಾಣಿ ಸರಸಕೋಕಿಲ ವಾಣಿ

ಸರಳಾ ನುಡಿಯಾ ನೀಡೆ ಸುಗುಣಾಮಣಿ

ದುರುಳಾ ದುರ್ವಿಷಯಾ ಹಣಿ ತರಳನಾ

ನುಡಿ ಕೇಳು ಎನ್ನಾ ವಾಣೀ

ಮರುಳುಮಾಯಾಗರಳಾಸಾಗರದೊಳು ಬಿ -

ದ್ಹೊರಳುವೆನೇ ನಿತ್ಯಾ ಮರಗುವೆ ಶರಣಾಗತನಾದ್ಯನ್ನಾ

ದುರಿತಾ ಪರಿಹರಿಸಿ ಹರಿಸರ್ವೋತ್ತಮನ್ನಾ ಭಜಿಸುವಂತೆ

ತ್ವರಿತÀದಿ ಮಾಡೆಂದು ಶರಣುಪೊಕ್ಕೆನೆ ನಿನ್ನಾ

ಚರಣಕಮಲಕೆ ಅರಿತು ನೀನೇ ಪರಿಪಾಲಿಸೆ ಜನನೀ

ಮರೆತು ಬಿಟ್ಟರೆನ್ನಾ ಪೊರಿವೊರ್ಯಾರೇ

ಗುರುತಮ ಮಾರುತಿ ಅಂತರ್ಗತನಾದಾ

ಭೂತÉೀಶಾನುತಪಾದಾಂ

ತರಿಯಾಮಿ ಗುರುಜಗನ್ನಾಥ ವಿಠಲನ್ನಾ

ಪರಿಪರಿ ಸ್ತುತಿಸುವಂಥ ಭಾಗ್ಯ ಭಾರತಿ ನೀಡೇ

***

 ..

ಅಂಬಾ ನಿನ್ನಯ ಪಾದ ಅಂಬುಜಯುಗ ಮನ

ಅಂಬುಜಾದೊಳಗತಿ ಸಂಭ್ರಮದಿಂದಲಿ

ನಂಬಿ ಭಜಿಪನ ಚಿತ್ತದಿ ಇಂಬುಗೊಂಡಿರುವೋ

ಬಿಂಬರೂಪನ ತೋರೆ ಅಂಬುಜಾಂಬಕೆ

ಶಂಭುದೇವನ ಪ್ರಿಯೆ - ದಂಭೋಲಿಧರವಿನುತೆ

ಅಂಬರಮಾನಿಮಾತೆ ಪ್ರಖ್ಯಾತೆ

ಶುಂಭನಿಶುಂಭಾಸುರ ಕದಂಬ ಸಂಗ್ರಾಮ ಹಾರೀ

ಕುಂಭಿಣಿಧರಜಾತೆ ರಾಜಿತೆ

ಕಂಬುಚಕ್ರಪಾಣಿ ವಿಶ್ವಂಭರ ಮೂರುತಿ

ಅಂಬುಜಾಪತಿ ನಮ್ಮ ಗುರುಜಗನ್ನಾಥವಿಠಲನ್ನ

ಕಾಂಬುವತೆರ ಮಾಡೆ ಕರುಣಾಕÀರಳೆ

***

ಹನುಮ-ಭೀಮ-ಮಧ್ವರು


ಅಖಿಳ ಬೊಮ್ಮಾಂಡ ನಾಯಕ

ಸಕಲ ಜೀವೋತ್ತುಮ

ವಿಖನಸಾರ್ಚಿತ ಪಾದ ನಿಖಿಳ ಲೋಕವ್ಯಾಪ್ತಾ

ಲಕುಮಿರಮಣನ ಪ್ರಾಣ ಸಂಭೂತ

ಸುಖಜ್ಞಾನಮಯ ಸ್ವರೂಪ ಸುಮನೋತ್ತಂಸ

ಶಿಖಿಸಖೋದಿತರವಿ ಪ್ರಕರ ಸನ್ನಿಭ ಮುಖ

ಸುಖಪೂರ್ಣ ಶುದ್ಧ ಸತ್ತ್ವ್ವಶರೀರ

ಆಖಣಾಶ್ಮ ಸಮಚರಣ ಭಕ್ತಾಭರಣ

ಲೋಕೈಕ ವೈದ್ಯಾಭಾರತೀಕಾಂತಾ

ಲೌಕಿಕ ಸುಖದಾತಾ ಪ್ರಖ್ಯಾತಾ

ಕಾಕೋದರ ಶಾಯಿ ನಮ್ಮ ಗುರುಜಗನ್ನಾಥವಿಠಲನಾ

ಲೋಕನವಿತ್ತು ಪೊರೆಯೋ ಪ್ರಾಣರಾಯ

***

****

by vyasa vittala dasaru kallur subbanna dasaru


ಅನಾದ್ಯನಂತ ಕಾಲದಲಿ ನೀ ನಿರ್ದೋಷಅನಾಥ ಬಂಧುವೆ ಆಪ್ತ ಕಾಮಅನವರತ ನಿನ್ನಾಧೀನದವನಯ್ಯಕಾಣೆ ನಿನ್ನಗಲಿಪ್ಪ ಕಾಲವನ್ನುಜ್ಞಾನೇಚ್ಛ ಪ್ರಯತ್ನ ಚೇತನ ನಿಷ್ಠವೊ ||ತಾನಾದರಾಗಲಿ ತನ್ನಿಯಾಮಕ ನೀನುಈ ನೀತಿ ಸಿದ್ಧವಾಗಿದೆ ಹಾನಿ ವೃದ್ಧಿಗೆನಾನೆ ಕಾರಣನಲ್ಲಾನಂದ ಮೂರ್ತಿಪ್ರಾಣಾಂತರ್ಯಾಮಿ ಶ್ರೀ ವ್ಯಾಸವಿಠ್ಠಲರೇಯನೀನಿಟ್ಟ ಪರಿಯಲ್ಲಿ ನಿಜವಾಗಿ ಇರುತಿಪ್ಪೆ ||1

***

ಅಂಕಿತ – ಗುರು ವಿಜಯವಿಠಲ
ಮೊದಲಕಲ್ಲು ಶೇಷದಾಸರು

ಒಂದು ಸ್ಮರಿಸುತಿರೆ ಆನಂದವಾಗುತಿದೆ ಮ-
ತ್ತೊಂದು ಸ್ಮರಿಸುತಿರೆ ಕ್ಲೇಶವಹದೋ |
ಕುಂದು ಲೇಸಗಳು ಕಾಲಭೇದದಿಂದ ಸಂ-
ಬಂಧ ಗೈಸಿದೆನಗೆ ಸಾರ್ವಭೌಮ |
ಇಂದಿರಾಪತಿ ನಿನ್ನ ಸತ್ಯ ಸಂಕಲ್ಪವ |
ಮಂದನಾದವ ನಾನು ದಾಟುವೆನೆ |
ಅಂದು ಮಾಡಿದ ಕರುಣ ಒಂದೊಂದು ಸ್ಮರಿಸುತಿರೆ |
ತಂದೆ ಎನ್ನಯ ಭಾಗ್ಯಕ್ಕೆಣೆಯಾವದೊ |
ಇಂದಿನ ದುರ್ಭಾಗ್ಯಕ್ಕೆ ಎಣಿಸಿ ಗುಣಿಸಿ ನೋಡೆ |
ಕುಂದಿಗೆ ಸಮ ಉಂಟೆ ವಸುಂಧರೆಲಿ |
ಮಂದರೋದ್ಧಾರ ಗುರು ವಿಜಯವಿಠಲ ನಿನ್ನ |
ಪೊಂದಿದವಗಿನಿತು ಫಲವೇನೋ ||
****

ಶ್ರೀ ಗುರುಗೋಪಾಲದಾಸರ ಉಗಾಭೋಗ

ಗಜರಾಜನ ಪೊರೆದುದೇನು ಘನವು
ಗಜಪುರದ ದ್ರೌಪದಿಯ ಪೊರೆದುದೇನು ಘನವು
ಭಜಕ ಪ್ರಹ್ಲಾದನ್ನ ಪೊರೆದುದೇನಾಶ್ಚರ್ಯ 
ಭಜನೆ ಮಾಡಿದುದಕ್ಕೆ ನೀ ಪೊರೆದೆ ಸರಿದಾಟಿ
ಅಜನಯ್ಯ ನಾ ನಿನ್ನ ಒಮ್ಮೆಯಾದರು ಸರಿ 
ಭಜಿಸಿದವನಲ್ಲ ನೀ ಎನ್ನ ಪೊರೆದರೆ
ಮಝ ಭಾಪುರೆ ಕೀರ್ತಿ ತ್ರಿಜಗದೊಳಗೆ ಸ್ವಾಮಿ
ವೃಜಿನಹರ ಶ್ರೀಗುರುಗೋಪಾಲವಿಠಲ 
ಸುಜನರಿದ ಕಂಡು ಸಂತೋಷಪಡುವರೋ 
***

 ಶ್ರೀ ಮೊದಲಕಲ್ಲು ಶೇಷದಾಸರ ಉಗಾಭೋಗ

ಭಕ್ತವತ್ಸಲನೆಂಬ ಬಿರಿದುಳ್ಳ ದೇವ , ನಿನ್ನ

ಭಕುತಿಯಿಂದಲಿ ನಮಿಸಿ ಬಿನ್ನೈಸುವೆ

ರಿಕತನ್ನ ಬಿನ್ನಪವ ಮನಕೆ ತಂದು ವೇಗ ಆ-

ಸಕುತಿಯಿಂದಲಿ ಗ್ರಹಿಸಿ ಸಫಲ ಮಾಡೋ

ಭಕುತನಾದ ಇವಗೆ ಲೌಕಿಕದಿಂದ ಬಂದ 

ವಿಕಟ ರೂಪವಾದ ದುರಿತದಿಂದ 

ಮುಕುತನ್ನ ಮಾಡುವುದು ಕರುಣದಿಂದಲಿ ವೇಗ

ಶಕಟಭಂಜನ ಕೃಷ್ಣ ಉತ್ಕೃಷ್ಟನು

ಮುಕುತಿದಾಯಕ ಗುರುವಿಜಯವಿಠಲ

ಮಮದ್ಭಕ್ತನ ಪ್ರಾಣಪ್ರೀತಿ ಎಂಬೋದು ಸತ್ಯ ಮಾಡೋ

**


ಸುಖಪರವಯ್ಯಾ ಶ್ರೀಹರಿಲೀಲೆ

ಆ ವೈಜಯಂತಿ ಕೌಸ್ತುಭ ವನಮಾಲಾ

ಪಾವನವಕ್ಷವಿಶಾಲ

ಶ್ರೀವತ್ಸಾಂಕನ ದಾವನಕೊರಳೊಳು

ಕೇವಲ ಗುಂಜಾಮಾಲಾ

ತ್ರಿಜಗಜ್ಜನ್ಮಾದಿಗಳಿಗೆ ಮೂಲಾ

ಜನಾರಿಗೆನಿಸುವ ಕಾಲಾ

ಭಜಿಪರ ಭಾಗ್ಯೋದಯಕಾನಂದ

ವ್ರಜದೊಳೀಗೋಪಿಯ ಕಂದಾ

ಶ್ರೀದವಿಠಲ ಕೇಳು ಸುರತಸುಶೀಲಾ

ರಾಧಾಮನೋನುಕೂಲಾ

ಸಾಧಿಸಿ ವೃಂದಾವನದಲ್ಲಿ ಪೊಂಗೊಳಲೂದುವ ಗಾನವಿಲೋಲ

***


ತಪ್ಪುಗಳನರಸ ತನ್ನ ನಂಬಿದವರ l
ಶ್ರೀಪತಿ, ತಪ್ಪುಮಾಡಿದ ಅಜಮಿಳ ಉಮಾಪತಿಮುಖರ l
ತಪ್ಪು ನೋಡಿದನೆ l
ಎನ್ನಪ್ಪ ಶ್ರೀವಿಜಯೀನ್ದ್ರರಾಮ ದಯಾನಿಧಿ ll  
******


ugabhoga

kruti by ವರದೇಶ ವಿಠಲರು varadesha vittala dasaru


ಏಸೇಸು ಕÀಲ್ಪ್ಪಕ್ಕು ಈಶನು ನೀನಯ್ಯಾ

ಆಸಾಸು ಕಲ್ಪಕ್ಕು ದಾಸನು ಇವನಯ್ಯಾ

ಉದಾಸೀನ ಮಾಡದೆ ಪೋಷಿಸಬೇಕಯ್ಯ

ವಾಸನ ನೀ ಮಾಡಿ ವಾಸನ ಮಯರೂಪÀ

ಸೋಸಿಲಿ ತೋರಿಸಿ ದಾಸನ ಮಾಡಿಕೊ

ಆಸೆ ಬಿಡಿಸಿ ವಿಶೇಷ ಭಕುತಿ ಜ್ಞಾನ

ಲೇಸಾಗಿ ನೀನಿತ್ತು ಶ್ರೀಶಗುರು ಜಗನ್ನಾಥ ವಿಠಲ ವರ-

ದೇಶ ವಿಠಲನೆನಿಸಿದಾಸನ ಪರಿ ಪರಿ ದೇಶದಲ್ಲಿ ಮೆರಿಸಿ

ಆಶೆಯ ಪೂರ್ತಿಸು ವಾಸವನನುಜಾ

***

kruti by ವರದೇಶ ವಿಠಲರು varadesha vittala dasaru


ಘನ್ನ ಮಹಿಮನೆ ನಿನಗೆ ಇವನು ಅನ್ಯನಲ್ಲವೊ ಸ್ವಾಮಿ

ನಿನ್ನ ವರವನು ಜನ್ಮಜನ್ಮದಿ ಮನ್ನಿಸಿ ಪಾಲಿಸಬೇಕಾ

ಪÀನ್ನ ಜನರ ಪಾಲಾ ನಿನ್ನುಳಿದು ಮತ್ತಾರಿಲ್ಲವೆಂಬುವದು

ಎನ್ನ ಮಾತಲ್ಲ ದೇವ ಯನ್ನ ಪಿರಿಯರ ಮಾತು

ನಿನ್ನಯ ದಿವ್ಯ ಮನಕೆ ಚನ್ನಾಗಿ ನೀತಂದು

ನಿನ್ನಯ ಜ್ಞಾನ ಭಕುತಿ ವೈರಾಗ್ಯಗಳನ್ನು

ಅನ್ನ ವಸÀನ ಧನ - ಧಾನ್ಯವೇ ಮೊದಲಾದ

ಘನ್ನ ಸಂಪತ್ತುವಿತ್ತು

ಅನ್ಯಜನಕÀ ಭಾವದಿಂದ ಮುನ್ನ ಧನ್ಯನಮಾಡು

ಸೊನ್ನೊಡಲ ಪಿತ ಸರ್ವದಾ ತಾ

ಚಿನ್ನಗೊಲಿದ ವರದೇಶ ವಿಠಲನೆ

ಮನ್ನದೊಳಗೆ ಪೊಳೆಯೊಯನ್ನನುಡಿ ಲಾಲಿಸು

***

ಮಣ್ಣಿನ ಮಹಿಮೆ ಮನುಜ  ನೀನರಿಯೆ
ಷಣ್ಮಹಿಷಿಯುತ ಸರ್ವೋತ್ತಮನ ಲೀಲೆ
ಮಣ್ಣಿಲಿ ದೊರಕಿದಳು ಮಾತಾಯಿ ಸೀತಾ
ಮಣ್ಣಳಿದ ವಾಮನ ಮಹಬಲಿಯ ಬೇಡಿ
ಮಣ್ಣು ಪಾವನವಾಯ್ತು ರಾಮಪದ ಸ್ಪರ್ಶದಿ
ಮಣ್ಣುಂಡ ಬಾಯಲ್ಲಿ ಬ್ರಹ್ಮಾಂಡ ತೋರಿದ ಕೃಷ್ಣ
ಮಣ್ಣಿಗೇ ನಡೆಯಿತು ಮಹಾಭಾರತ ಯುದ್ಧ.
ಮಣ್ಣಿಗೇ ಮಡಿದವರ ಸಂಖ್ಯೆಗೆ ಎಣೆಯಿಲ್ಲ.
ಮಣ್ಣಲ್ಲಿ ಬಿತ್ತೆ ಬೀಜ ಮಹಾವೃಕ್ಷವಾಗುವದು
ಅಣ್ಣ ನಮ್ಮಾದಿ ಕೇಶವಾನುಗ್ರಹದಿಂ||
****

 ಇನ್ನೆಷ್ಟು ಕಾಲಕ್ಕು  ಮರಿಯಾದಂತೆ ಮಾಡಿಸಿದಿ

ಉನ್ನತಮಹಿಮ ನಿನ್ನ ಇಚ್ಛಕ್ಕೆ ಇದಿರಾರೊ
ಇನ್ನಾದರೂ ಕೃಪೆಯಿಂದ ನೋಡದಿರೆ
ಘನ್ನವಾದ ದುಃಖದಿಂದ ಕಡಿಗೆ ಐದುವೆನೆಂತೊ
ಚಿನ್ಮಯಮೂರುತಿ ಗುರುವಿಜಯವಿಠಲರೇಯ
ಎನ್ನ ಅಪರಾಧವು ನಿನಗರ್ಪಿತವು

-- ಮೊದಲುಕಲ್ಲು ಶೇಷದಾಸರು.
************

ಪ್ರಹ್ಲಾದನು ನಿನ್ನ ಪೊಗಳಿದನಲ್ಲದೆ,  ಪೊಡವಿದಾನದ ದಾನಿತ್ತನೇ
ನಾರದಮುನಿ ನಿನ್ನ ಪಾಡಿದನಲ್ಲದೆ, ನಾಡದಾನದ ದಾನಿತ್ತನೇ 
ವಿಭೀಷಣನು ನಿನ್ನ ಮೊರೆಹೊಕ್ಕನಲ್ಲದೆ, ಏನು ಧನವಿತ್ತನಯ್ಯ
ತ್ರಿದಶಾದ್ಯರು ನಿನ್ನ ತುತಿಸಿದರಲ್ಲದೆ, ಏನು ಭಾಗ್ಯವನಿತ್ತರೈ
ಅಂದಿನವರು ನಿನಗೆ ಏನು ಕೊಟ್ಟರು
ಹರಿಯೇ ನಾನೇನು ಕೊಡಧೋದೆನೋ
ಅಂದು ಸಿರಿವಂತನೇ
ಇಂದು ನೀ ಬಡವನೇ
ಎಲೈ ಲೋಲಲಕ್ಷ್ಮೀಪತಿಯೆ, ತ್ರಿದಶವಂದಿತ 
ಸಿರಿಯೋಗೇಂದ್ರವಿಠಲ 
ನಿನಗೆ ನಮೊ ನಮೊ ನಮೊ ನಮೋ ಎಂಬೆ
*****

ಕಗ್ಗೊರಡೆಳೆ ಗಾಳಿಗೆ ಚಲಿಸುವುದೇ ದು- |
ರಾಗ್ರಹದಿ ಹರಿಚರಿತಾಮೃತನುಂಬುವನೆ |
ಕಗ್ಗಲೆಳೆಬೆಳದಿಂಗಳಿಗೆ ದ್ರವಿಸುವುದೇ |
ಸ್ವರ್ಗಾಪವರ್ಗ ದುರ್ಜನಕೆ ಸೊಗಸುವುದೇ |
ಸುಜ್ಞಾನದ ಸಾಮ್ರಾಜ್ಯದ ಭಕುತಿ ವೈ- |
ರಾಗ್ಯದ ಭಾಗ್ಯವು ದಶಪ್ರಮತಿಶಾಸ್ತ್ರದ |
ಅಗ್ಗಳರ್ಗೆ ಸವಿಸುಗ್ಗಿಯ ಭವಸ್ವರ್ಗ |
ಲಗ್ಗಿಗಾರುಂಟೆ ಪ್ರಸನ್ವೇಂಕಟ ಕೃಷ್ಣ ಸುಜ್ಞಾನ ||
******

 

ಹರಿಯಾರ್ಚನೆಯ ಭಕುತಿಯ ಪ್ರವೀಣ

ತರತರದಿ ಬರುವೆಡರನು ಒಮ್ಮೆ ಕಾಣ

ಹರಿಗೆ ದೇಹೇಂದ್ರಿಯ ಒಪ್ಪಿಸಿ ಪ್ರಾಣ

ಹರಿಪುರದಲ್ಲಿ ಮಾಡಿದನು ತಾಣ

 ಪರಸನ್ನ ವೆಂಕಟಪತಿಯ ಪೂಜಾತ್ರಾಣ 

ವರಿತವ ಕಾಯದೊಳಿದ್ದು ನಿರ್ಗುಣ

****

ugabhogha

ಅಳಿವಾ ದೇಹವಾ ಸಿಂಗರಿಸುವೆಯೇಕೆ

ಬೆಳೆಸು ಹರಿಭಕ್ತಿ ಮನದೊಳು ನಿರತ

ಕಳೆವ ತನುವಿದು ಶಾಶ್ವತವಲ್ಲ ತಿಳಿ

ಒಳಗಿನ ಆತ್ಮ ನಿರಂತರವಾಗಿರಲು

ಘಳಿಗೆಗೊಮ್ಮೆ ಅವನ ಧ್ಯಾನವ ಮಾಡು

ಸುಳಿಯಲಿ ಸಿಕ್ಕಿರಲು ನೀನುಳಿವ ದಾರಿ

ತಿಳಿ, ನೀ ಕರೆ ಸೇರೆ ನಿನ್ನನಾ

ನಳಿನಾಕ್ಷ ಶ್ರೀ ಆದಿಕೇಶವರಾಯ ಪೊರೆವ

****

ಮಣ್ಣಲಿ ಮಾಡಿಹ ಮಡಕೆ ಮಸಿಯಾಗೆ

ಮಣ್ಣಿಂದಲೆ ತಿಕ್ಕಿ ಮಸೆ ಹೋಗುವುದು

ಕಣ್ಣು ಕಿವಿಗಳ ನಡೆಪ ಮನ ಮಲಿನವಾಗೆ

ಕಣ್ಣು ಕಿವಿಗಳಿಂದಲಿ ಮನ ತಿದ್ದಲಾಗುವುದೇ?

ಹಣ್ಣಾಗುವುದು ಮನ ಶ್ರೀ ಹರಿಧ್ಯಾನ ಮಾಡೆ

ಹುಣಾಗಿ ಕಾಡಿಪುದು ಅವನ, ಅದ ಮರೆಯ

ಕಣ್ಣಲಿ ಕಣ್ಣಾಗಿ ಕತ್ತಲಲಿ ಬೆಳಕಾಗಿ

ಫಣಿಶಾಯಿ ಆದಿಕೇಶವರಾಯ ಪೊರೆವ |

****


ಹರಿಭಕ್ತಿಲಷ್ಟಾಂಗ ಪುಟವಿಟ್ಟು ನಿಚ್ಚ

ಉರುಪಾಪಾಟವಿಗೆ ಘಮ್ಮನೆ ಇಟ್ಟ ಕಿಚ್ಚಾ

ಸುರಲೋಕ ಮುಂತಾದ ಸಿರಿಗೆ ಅವ ಮೆಚ್ಚ

ನರರ ಸಂಪದವೆಲ್ಲ ಸ್ಥಿರವೆಂದು ಮೆಚ್ಚ

 ಪರಸನ್ನ ವೆಂಕಟನ ನಂಬಿದ ಹುಚ್ಚಾ

ನರಯದಾರಿಗೆ ಎಂದೂ ಬೆದರನು ಬೆಚ್ಚಾ

******

 ಹರಿಕಥಾಶ್ರವಣವು ಹರಿನಾಮಕೀರ್ತನೆ |

ಹರಿಯ ಸ್ಮರಣೆ ಹರಿಯ ಪಾದಸೇವನೆ |

ಹರಿಪೂಜೆ ವಂದನ ದಾಸ್ಯ ಸಖತ್ವ |

ಪರಸನ್ನವೇಂಕಟ ಪರಬೊಮ್ಮ ಸಿದ್ಧ |

ಗುರುಮಧ್ವಮತಶೃತಿಸ್ಮೃತಿಯೋಳ್ ಪ್ರಸಿದ್ಧ ||

******


ಹರಿಗೆ ತನ್ನಾತ್ಮ ನಿವೇದನದಿಂದಾ

ಉರಿ ಜಲ ಮಣ್ಣು ಗಾಳಿಹೊಂದಾ

ಸ್ವರೂಪನೆ ಹರಿಯಂಘ್ರಿಗರ್ಪಿಸಿ ನಿಂದಾ

ಹರುಷವನುಂಬ ಉನ್ನಾಹದಿಂದ

 ಪರಸನ್ನ ವೆಂಕಟ ಪತಿ ಭಕ್ತಿಯಿಂದಾ

ಸುರ ಋಷಿ ನರರಿಗೆಲ್ಲಾ ನಿಜಾನಂದಾ

*****


ಹರಿಯಲ್ಲಿ ಭಕುತಿಯ ಗೆಳೆತನವಿಟ್ಟಾ

ತರುಣಿ ಸ್ವಪ್ರಜಸಂಪದಗಳ ಸ್ನೇಹಬಿಟ್ಟಾ

ಕರ್ಮತ್ರಯಂಗಳೆಲ್ಲವ ಹಿಂದಕ್ಕಿಟ್ಟಾ

ತಿರುಗಿ ಬರುವ ಊರ ಬಟ್ಟೆಯ ಬಿಟ್ಟಾ

 ಪರಸನ್ನ ವೆಂಕಟನಲಿ ಚಿತ್ತವಿಟ್ಟಾ

ನರಸಿಂಹನೊಲಿಸಿ ಲಿಂಗಾಂಗವ ಸುಟ್ಟಾ

*****

ಹರಿಯ ದಾಸರ ದಾಸ  ದಾಸತ್ವ ಪಡೆದಾ

ಹರಿ ನಂಬದವನೆದೆ ಮೆಟ್ಟಿ ತಾ ನಡೆದಾ

ಹರಿಯ ಬಂಟರ ಬಾಕುಳಿಯ ವೃತ್ತಿ ಹಿಡಿದ

 ಪರಸನ್ನ ವೆಂಕಟ ರಮಣನ ಎಡದಾ ಚರಣ

ನಿರ್ಜರ ತರುಛಾಯವಿಡಿದಾ

******

ಹರಿಪಾದ ಸೇವನಧ್ಯಾನ ಬಲ್ಲಿದನ್ನ

ವರಪುಟವಿಟ್ಟ ಚಿನ್ನದ ಮೊಗ ಬಣ್ಣ

ದುರಿಚ್ಛೆಯಿಂದ ದುರ್ವಿಷಯಕೆ ಎತ್ತ ಕಣ್ಣ

ಹರಿ ಗುರುಗಳಲ್ಲದೆ ಶರಣೆನ್ನ

 ಪರಸನ್ನ ವೆಂಕಟ ಪತಿಯ ಪಾವನ್ನ

ಚರಣಾಬ್ಜ ರಸ ನೀಂಟಿ ಮೊಲೆವಾಲನುಣ್ಣ

******

ಹರಿಸ್ಮರಣೆಗೆ ವಿಸ್ಮೃತಿಯನವ ಜರಿದ

ಚಿರಕಾಲದಘವ ಒಮ್ಮಿಂದೊಮ್ಮೆಲೇ ತರಿದ

ಪರಮ ಭಾಗವತರ ಸಮ್ಮೇಳವ ಬೆರೆದ

ನೆರೆ ಹಿತಕರಿಗೆಲ್ಲ ಮುಕುತಿಗೆ ಕರೆದ

ವರಬಿಂಬ ಕಾಂಬುವ ಕಂಗಳ ತೆರೆದ

 ಪರಸನ್ನ ವೆಂಕಟೇಶನ ಹೊಂದಿ ಮೆರೆದ 

******


ಹರಿನಾಮ ಕೀರ್ತನೆಯ ಭಕುತಿ ತುಂಬಿ ಪೇಳ್ವ

ಸರಸ ಭಾವದಲೆ ಕಣ್ಣೊರತಿಯನು ತಾಳ್ವ

ಹರುಷಮೃತಾಬ್ಧಿಯಲಿ ಮುಳುಮುಳುಗಿ ಏಳ್ವ

ದರಿತಗಜದ ಮಂಡಿಯನು ಹೊಡೆದು ಕೀಳ್ವ

ಹರಿಯಂತೆ ಕೂಗಿ ಸಜ್ಜನರೊಳಗೆ ಬಾಳ್ವ

 ಪರಸನ್ನ ವೆಂಕಟ ಭಟಗೆಮನೊಲಿವ

*****


ಹರಿಕಥಾ ಶ್ರವಣಕ್ಕೆ ಮನವಿಟ್ಟ ಪ್ರೌಡ

ಅರವತ್ತು ಘಳಿಗೆ ವ್ಯರ್ಥ ಹೋಗಗೊಡ

ಪರಮಪದವಿಗೆ ಯೋಗ್ಯನವನೇ ಗಡ

ನರಕದ ಬಟ್ಟೆಯ ದೂರದಲ್ಲೂ ನೋಡ

 ಪರಸನ್ನ ವೆಂಕಟ ಪತಿಯಂಘ್ರಿ ಗಾಢ

ತರದಲಪ್ಪುತ ಮೈಯ ಮರೆದು ಮಾತನಾಡ


ವ್ಯಾಸರಾಜರ ಉಗಾಭೋಗ

ಜಾರತ್ವವನು ಮಾಡಿದ ಪಾಪಗಳಿಗೆಲ್ಲಾ
ಗೋಪೀಜನಜಾರನೆಂದರೆ ಸಾಲದೆ?
ಚೋರತ್ವವನು ಮಾಡಿದ ಪಾಪಗಳಿಗೆಲ್ಲಾ ನವನೀತ-
ಚೋರನೆಂದರೆ ಸಾಲದೆ?
ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲಾ
ಮಾವನ ಕೊಂದವನೆಂದರೆ ಸಾಲದೇ?
ಪ್ರತಿದಿನದಿ ಮಾಡಿದ ಪಾಪಗಳಿಗೆಲ್ಲಾ
ಪತಿತಪಾವನನೆಂದರೆ ಸಾಲದೆ?
ಇಂತಿಪ್ಪ ಮಹಿಮೆಯೊಳಗೊಂದನಾದರೂ ಸರಿಯೆ ನಮ್ಮ
ಸಂತತ ನೆನಹುವರ ಸಲಹುವನು ಸಿರಿಕೃಷ್ಣ


ಎನ್ನ ಎಂಜಲನುಂಡು, ನಿನ್ನ ಬೆಳ್ಳುಡೆಯುಟ್ಟು
ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ
ನಿನ್ನ ಓಲೈಸಲೇಕೋ ಕೃಷ್ಣ
ಸಂಚಿತವನುಂಡು ಪ್ರಪಂಚದೊಳಗೆ ಬಿದ್ದು
ನಿನ್ನ ಓಲೈಸಲೇಕೋ ಕೃಷ್ಣ
ದಿನಕರನುದಿಸಿ ಕತ್ತಲೆ ಪೋಗದಿದ್ದರೆ
ಹಗಲೇನೋ, ಇರುಳೇನೋ ಕುರುಡಗೆ, ಸಿರಿಕೃಷ್ಣ


ಆವ ಜನುಮದ ತಾಯಿ ಆವ ಜನುಮದ ತಂದೆ
ಆವ ಜನುಮದ ಸತಿ ಆವ ಜನುಮದ ಸುತರು
ಆವ ಜನುಮದ ಬಂಧು ಆವ ಜನುಮದ ಬಳಗ
ಆವ ಜನುಮದ ಪಿಂಡ ಆವಂಗೆ ಜನಿಸುವೆವೋ
ನೀವೊಲಿದು ಪಾಲಿಸೈ ಸಿರಿಕೃಷ್ಣರಾಯ


ನೀರಿಲ್ಲದ ಬಾವಿ ಗುರುವಿಲ್ಲದ ಮಠವು
ನೆರಳಿಲ್ಲದ ಮರ ಫಲವಿಲ್ಲದ ಲತೆ
ಧನವಿಲ್ಲದ ದಾತ ದಯವಿಲ್ಲದ ನಾಥ
ಮನಸಿಲ್ಲದ ಶಕುತಿ ಭಯವಿಲ್ಲದ ಭಕುತಿ
ನರಹರಿ ಮುಕುಂದ ಶ್ರೀಕೃಷ್ಣನ ನೆನೆಯದ
ನರರಿದ್ದು ಫಲವೇನು ಇಲ್ಲದಿದ್ದರೇನು ?


ಧರ್ಮಪಥವ ಮೆಟ್ಟಲು ಮನವೆರಗದು ದು-
ಷ್ಕರ್ಮಕಾದರೆ ಜಿಗಿಜಿಗಿದಾಡುವುದು ಯುಗ-
ಧರ್ಮವೋ ಜೀವನ ಕರ್ಮವೋ
ದುರ್ಮತಿಯಿಂದ ಚರಿಸುವ ಜನರ ಮೈ-
ಚರ್ಮ ಸುಲಿಸದೆ ಬಿಡನು ಸಿರಿಕೃಷ್ಣ


ಬಂದ ಕೀರುತಿಯೆಲ್ಲ ಶ್ರೀಕೃಷ್ಣ ನಿನ್ನದಯ್ಯ
ಮಂದ ಮಾನವನಿಗೆ ಇದು ಅಳವಡುವುದೇನಯ್ಯಾ-
ನಂದತೀರ್ಥರ ಮತ ಪೊಂದಿದ್ದ ಕಾರಣ
ಸಂದೇಹವಡಗಿತು, ಮನಸಿಗಾನಂದವಾಯಿತು
ಇಂದುಧರಾದಿದೇವ ವಂದ್ಯ ಶ್ರೀಕೃಷ್ಣ

ಹಿಂದೆ ನೀ ಪ್ರಹ್ಲಾದನ್ನ ಪಾಲಿಸಿದೆ ಗಡ
ದ್ರುಪದನಂದನಿಯ ಮಾನಮಾಕಾಯ್ದೆ ಗಡ
ಭಕ್ತರಿಗೆ ಬಂದೆಡರನಾವಗಂ ಪರಿಹರಿಪೆ
ನರದೇವ ಪೆಸರ್ಗೊಂಡೆ
ಇಂದು ಮೊರೆಯಡರಂ ಕಾಣೆ
ನಕಟಕಟ ಗೋವಿಂದ ನೀನಲ್ಲದೆ
ವಿಚಾರಿಸುವರಿಲ್ಲ ಸಲಹೆಂದವಂ
ಚಿತ್ತದೋಳ್ ಕೃಷ್ಣನಂ ಧ್ಯಾನಿಸುತ್ತ
ನಿರ್ಭಯದೊಳಿರುತಿರರ್ದನು 

ಹರಿನಾಮಕ್ಕೆ ಹರಿದಾಸರು ಕರಗುವರಲ್ಲದೆ
ನರಕಭಾಜನರು ಅಲ್ಪ ಮೂಡರು ಕರಗುವರೆ
ಗುರುಹಿರಿಯರಿಗೆರಗದವಗೆ ಹರಿಭಕುತಿ ಸೊಗಸುವದೆ
ಕೆರಹು ತಿಂಬ ನಾಯಿಗೆ ತುಪ್ಪ ಸಕ್ಕರೆ ಸೊಗಸುವದೆ
ಚಂದ್ರಕಿರಣಕೆ ಚಂದ್ರಕಾಂತ ಒಸರುವದಲ್ಲದೆ
ಉರಿಗಲ್ಲು ಒಸರುವುದೆ ಸಿರಿಕೃಷ್ಣ


ಉ ಗಾ ಭೋ ಗ

ಆವಜನುಮದ ತಾಯಿ, ಆವಜನುಮದ ತಂದೆ,
ಆವಜನುಮದ ಸತಿ, ಆವಜನುಮದ ಸುತರು,
ಆವಜನುಮದ ಬಂಧು, ಆವಜನುಮದ ಬಳಗ,
ಆವಜನುಮದ ಪಿಂಡ, ಆವಂಗೆ ಜನಿಸುವೆವೋ
ನೀ ಒಲಿದು ಪಾಲಿಸೈ ಸಿರಿಕೃಷ್ಣರಾಯ
******



ಮೊಗಕೆಲ್ಲ ಹೊಗೆಸುತ್ತಿ ಬಗೆಗೆಟ್ಟನೊಬ್ಬ |
ಜಗಳಾಡ್ವ ಘಟಪಟದ ಬಾಯ್ಬಡುಕನೊಬ್ಬ |
ನಿಗಮಾರ್ಥವ ಕೆಡಿಸುವ ಖಳನೊಬ್ಬ ತ್ರಿ- |
ಜಗದೊಳಗುಂಡುಟ್ಟು ಬಾಯಾರ್ವನೊಬ್ಬ ಈ |
ವಿಗಡವಾದಿಗಜಮೃಗರಾಜಗುರುಮಧ್ವ- |
ಸುಗುಣಾಬ್ಧಿ ಪ್ರಸನ್ವೇಂಕಟ ಕೃಷ್ಣನ್ನ ತೋರಿದನಾಗಿ ||
******

ಇಲ್ಲೆಂಥಾ ಸುಖಗಳುಂಟೋ ಅಲ್ಲಂಥಾ ಸುಖಗಳುಂಟು |
ದುಃಖಮಿಶ್ರಿತವಾದ ಸುಖ ಇಹಲೋಕದಲ್ಲಿಪ್ಪುದು ನಾಶವುಂಟು |
ದಿನಕೊಂದು ಬಗೆಬಗೆಯಾದಂಥ ಸುಖವಾಗಿ ನಾಶವಿಲ್ಲದ |
ಪ್ರಾಕೃತವಾದ ಸುಖವನನುಭವಿಸುತ್ತ ಕ್ರಮದಿ ತಿರುಗುವರು |
ಅಂದೋಳಿಕ ಛತ್ರ ಚಾಮರ ಸದಾ ಪೀತಾಂಬರ |
ಶಂಖಚಕ್ರಗಳಿಂದೊಪ್ಪುತ ಗುರುಪುರಂದರವಿಠಲನ ಭಜಿಸು ಜೀವ ||
***



ಜಾರತ್ವವನು ಮಾಡಿದ ಪಾಪಗಳಿಗೆಲ್ಲ
ಗೋಪೀಜನ ಜಾರನೆಂದರೆ ಸಾಲದೆ ?
ಚೋರತ್ವವನು ಮಾಡಿದ ಪಾಪಗಳಿಗೆಲ್ಲ
ನವನೀತ ಚೋರನೆಂದರೆ ಸಾಲದೆ?
ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ
ಮಾವನ ಕೊಂದವನೆಂದರೆ ಸಾಲದೆ?
ಪ್ರತಿ ದಿವಸ ಮಾಡಿದ ಪಾಪಂಗಳಿಗೆಲ್ಲಾ
ಪತಿತಪಾವನನೆಂದು ಕರೆದರೆ ಸಾಲದೆ?
ಇಂತಿಪ್ಪ ಮಹಿಮೆಯೊಳೊಗೊಂದನಾದರೂ ಒಮ್ಮೆ
ಸಂತಸದಿ ನೆನೆಯೆ ಸಲಹುವ ನಮ್ಮ ಸಿರಿಕೃಷ್ಣ
*******



by ಕಲ್ಲೂರು ಸುಬ್ಬಣ್ಣಾಚಾರ್ಯರು

ಅನಾದ್ಯನಂತಕಾಲದಲಿ ನೀ ನಿರ್ದೋಷ
ಅನಾಥಬಂಧುವೆ ಆಪ್ತಕಾಮ
ಅನವರತ ನಿನ್ನಧೀನದವನಯ್ಯ
ಕಾಣೆ ನಿನ್ನಗಲಿಪ್ಪ ಕಾಲವನ್ನು
ಜ್ಞಾನೇಚ್ಛಾಪ್ರಯತ್ನ ಚೇತನನಿಷ್ಠವೋ
ತಾನಾದರಾಗಲಿ ತನ್ನಿಯಾಮಕ ನೀನು
ಈ ನೀತಿ ಸಿದ್ಧವಾಗಿರೆ ಹಾನಿವೃದ್ಧಿಗೆ
ನಾನೇ ಕಾರಣನಲ್ಲ   ಅನಂದಮೂರ್ತಿ
ಪ್ರಾಣಾನಂತರ್ಯಾಮಿ ಶ್ರೀ ವ್ಯಾಸವಿಠಲರೇಯ
ನೀನಿಟ್ಟಪರಿಯಲ್ಲಿ ನಿಜವಾಗಿರುತಲಿಪ್ಪೆ
*******

ಅಣು ಆರಂಭಿಸಿಕೊಂಡು ಅಜತೃಣಾದಿ  ಕಲ್ಪತನಕ
ಎಣಿಸಿ ಗುಣಿಸಿ ಮನಸು ಉತ್ಸಾಹದಿಂದ
ಇನಕೋಟಿತೇಜ ವರದವ್ಯಾಸವಿಠಲ
ಬ್ರಹ್ಮನಾಳದೊಳಗೆ ಪೊಳೆವ ದ್ವಿವಿಧ ದೂರಮಾಡೋ ||

-- ಕಲ್ಲೂರು ಸುಬ್ಬಣ್ಣಾಚಾರ್ಯರು
********

ಏಸೇಸು ಕಲ್ಪಕ್ಕು ಈಶನು ನೀನಯ್ಯ
ಆಸಾಸು ಕಲ್ಪಕ್ಕು ದಾಸನು ಇವನಯ್ಯ , ಉ-
ದಾಸೀನ ಮಾಡದೆ ಪೋಷಿಸಬೇಕಯ್ಯ
ವಾಸವ ನೀ ಮಾಡಿ ವಾಸನಾಮಯರೂಪ
ಸೋಸಿಲಿತೋರಿಸಿ ದಾಸನ ಮಾಡಿಕೋ
ಆಶಯ ಬಿಡಿಸಿ ವಿಶೇಷ ಭಕುತಿ ಜ್ಞಾನವ 
ಲೇಸಾಗಿ ನೀನಿತ್ತು ಕೀಶ ಗುರುಜಗನ್ನಾಥವಿಠಲ ವರ-
ದೇಶವಿಠಲನೆನಿಸಿ ದಾಸನ ಪರಿಪರಿ

ದೇಶದಲಿ ಮೆರೆಸಿ ಆಶಯ ಪೂರ್ತಿಸೋ ವಾಸುಕಿ ಶಯನ
by -
*********
ಅಲ್ಪವೆನಿಸಲಿ ಬೇಡವನ್ಯರಿಗೆ ಎಲೊ ಹರಿಯೆ
ಕಾಲಿಗೆರಗುವೆನೊ ಕರುಣಾರ್ಣವೇಶ
ಕಾಲದೇಶವ ತೋರಿ ಕಠಿಣಮಾತುಗಳಾಡೆ
ಮೇಲೆ ನಿನ್ನ ಘನತೆಗೆ ಶ್ರೀಧರ
ಮೂಲ ನೀ ಸಕಲ ಕಾರಣಗಳಿಗೆ ಮುಖ್ಯ ತವ
ಆಳಿನಾಳೊ ನಾನು ಅನಿಮಿತ್ತ ಬಂಧು
ಬಾಲಕರ ಬಳಲಿಸುವ ಬಡಿವಾರವೇನೊ ನಾ
ಕೀಳುಮತಿಯಯ್ಯ ಕಿಂಕರರ ದೊರೆಯೆ
ಸಾಲುಸಾಲಿಗೆ ಶ್ರಮಜಾಲ ತೊಲಗಲು ನಿನ್ನ
ಊಳಿಗಕೆ ಮನವೆರಗುವುದೆ ಕೇಶವ
ಪಾಲಸಾಗರಶಾಯಿ ಪತಿತಪವನ ಮಾತ
ಲಾಲಿಸುವುದುಚಿತ ಸುವಿಶಾಲಚರಿತ
ಬಾಲಗೋಪಾಲ ಶ್ರೀಪತಿವಿಠಲನೆ ನಿನ್ನ

ಪಾಲಿಗೇ ಬಂದ ಪಾಮರದಾಸ ನಾನಯ್ಯ
***********

ಇನ್ನಾವ ಚಿಂತೆ ನನಗೆ ನಿನ್ನವನಾದ ಬಳಿಕ
ಅನ್ನಂತ ಬೊಮ್ಮಾಂಡಕ್ಕೆ  ಹರಸು ಎಂದು
ಘನ್ನ ಕರುಣೆ ಭಾಗ್ಯಸಂಪನ್ನ ಸರ್ವೋತ್ತಮ
ನಿನ್ನ ಬಿಟ್ಟಿರಲಾರೆನೆಂದು
ಪ್ರಪ್ರಪನ್ನರಭಿಲಾಷವು ಕೊಡುವೆನೆಂದು
ಎನ್ನ ಯೋಗ್ಯತೆ ತಕ್ಕ ಜ್ಞಾನಾನಂದವ ಕೊಡುವ

ನಿನ್ನ ಚರಣಕ್ಕೆ ನಮೊ ನಮೊ ರಘುಪತಿ ವಿಠಲ
by --
**********



ಇಂದಿಗೆಂಬೋ ಚಿಂತೆ ನಾಳೆಗೆಂಬೋ ಚಿಂತೆ
ನಾಡದ್ದಿಗೆಂಬೋ ಚಿಂತೆ  ತೊತ್ತಿಗ್ಯಾತಕಯ್ಯ
ಒಡೆಯನುಳ್ಳ ತೊತ್ತಿಗ್ಯಾತರ ಚಿಂತೆ
ಒಡೆಯ ಶ್ರೀನಿವಾಸ ಎಂಬೊ ಛತ್ರವಿರಲು

ಎನ್ನೊಡೆಯ ಅಚಲಾನಂದವಿಠಲ 
- by others
********
ಪ್ರಸನ್ನವೆಂಕಟದಾಸರು

ಉಗಾಭೋಗಕರುಣವಾರಿಧಿ ನೀ ಕರುಣವಾರಿಧಿಯಾದ 
ಕಾರಣಕರಿಕುಲಾಗ್ರಣಿಯನ್ನ ಕಾಯ್ದೆಉರಿಉರಗಬಾಧೆಯ 
ತಪ್ಪಿಸಿ ತರಳನಾರೈದೆಕರುಣವಾರಿಧಿಯಾದ 
ಕಾರಣಸುರರ ಸಂಕಟ ಹರಿದುಕನಕಪುರದರಸುತನ ಕೊಟ್ಟೆ ಪೌಲಸ್ತ್ಯ 
ಅನುಜಗೊಲಿದುಕರುಣವಾರಿಧಿಯಾದ 
ಕಾರಣಸ್ಮರಿಸುತಿಹಗಂಬರದಿ ನಿಲಿಸಿದೆಭರದಿ ಮುನಿ 
ಬಂದೆದೆಯನೊದೆದರೆ ಮರಳಿ ಮನ್ನಿಸಿದೆಕರುಣವಾರಿಧಿ 
ನೀನು ನಿನ್ನಯಕರುಣ ಪಾತ್ರರುಸಿರಿವಿಧಾತ್ರರುಪರಿಚರರ 
ಅಭಿಮಾನಿ ಪ್ರಸನ್ವೆಂಕಟರೇಯ ಮಾಸಹಾಯ 1
********

ಶುಭದಿನ ಶುಭವಾರ ಮಂಗಳವಾರ ದ ಸುಪ್ರಭಾತ ಮಾಲಿಕೆಯಲ್ಲಿ ಹರಿದಾಸರು ರಚಿಸಿದ ಕೆಲವು ಸುಂದರ ಉಗಾಭೋಗ ಗಳು.


೨-ವ್ಯಾಸರಾಯರು--

ಬಂದ ಕೀರುತಿಯೆಲ್ಲ ಶ್ರೀ ಕೃಷ್ಣ ನಿನ್ನದಯ್ಯಾ
ಮಂದಮಾನವಗಿದು ಅಳವಡುವುದೇನಯ್ಯಾ
ಆನಂದತೀರ್ಥ ರ ಮತ ಪೊಂದಿದ್ದ ಕಾರಣ

ಆನಂದ ವಾಯಿತು ಮನಕೆ ಸಂದೇಹವಡಗಿತು
ಇಂದುಧರಾಧಿದೇವ ವಂದಿತ ಶ್ರೀ ಕೃಷ್ಣ//

ಕಂಸಾರಿ ಎಂದು ಸಂಸಾರ ದಾಟುವೆ
ಶ್ರೀ ಹರಿಯೆಂದು ಪಾಪನೆರೆ ಅಟ್ಟುವೆ

ಕಂಜನಾಭ ಯೆಂದು ಅಂಜಿಸುವೆ ಜವನ
ಹರಿಯ ಹೆಸರಿಂದ ಬದುಕುವ ದಾಸ ನಾನು
ಸಿರಿಕೃಷ್ಣದಾಸರ ದಾಸ ನಾನು//

ಅತ್ತಿತ್ತ ಸುತ್ತಿ ಭವಾಟವಿಯಲಿ ನೊಂದೆ
ಇತ್ತ ಬಾರೆಂದು ನಿನ್ನ ಹತ್ತಿರ ವಿರಿಸೊ ಶ್ರೀ ಕೃಷ್ಣ//
***********


ಉಗಾಭೋಗ :

ಹರಿಯು ತುಷ್ಟನಾಗಿ ಪರಮೇಷ್ಟಿಗೆ ಪೇಳ್ದ
ಪರಮೇಷ್ಟಿ ಒಲಿದು ಸೂರ್ಯಂಗೆ ಪೇಳ್ದ
ಕರುಣಿಸಿ ಸೂರ್ಯ ಯಾಜ್ಞವಲ್ಕ್ಯರಿಗೆ ಪೇಳ್ದನೂ
ಅರಿವುದು ಉದ್ಗೀಥ ಬ್ರಾಹ್ಮಣ ಇದೇ ಆರು ಈ ವಿದ್ಯವನು ಪೇಳಿ ಕೇಳ್ದವರಿಗೆ ದಾರಿದ್ರ್ಯ ಭವರೋಗ  ದುಃಖ ಕಳೆದೂ
ಬಾರಿ ಬಾರಿಗೆ ಬೇಡಿದಿಷ್ಟಾರ್ಥಗಳ ಕೊಟ್ಟ
ಧೀರ ಗುರುತಂದೆಗೋಪಾಲವಿಠಲದೂತ  ಕಾರುಣ್ಯದಿಂದ ಸಲಹೊ ಪ್ರಾಣ
******


ಮಣ್ಣಿನ ಮಹಿಮೆ ಮನುಜ  ನೀನರಿಯೆ
ಷಣ್ಮಹಿಷಿಯುತ ಸರ್ವೋತ್ತಮನ ಲೀಲೆ
ಮಣ್ಣಿಲಿ ದೊರಕಿದಳು ಮಾತಾಯಿ ಸೀತಾ
ಮಣ್ಣಳಿದ ವಾಮನ ಮಹಬಲಿಯ ಬೇಡಿ
ಮಣ್ಣು ಪಾವನವಾಯ್ತು ರಾಮಪದ ಸ್ಪರ್ಶದಿ
ಮಣ್ಣುಂಡ ಬಾಯಲ್ಲಿ ಬ್ರಹ್ಮಾಂಡ ತೋರಿದ ಕೃಷ್ಣ
ಮಣ್ಣಿಗೇ ನಡೆಯಿತು ಮಹಾಭಾರತ ಯುದ್ಧ.
ಮಣ್ಣಿಗೇ ಮಡಿದವರ ಸಂಖ್ಯೆಗೆ ಎಣೆಯಿಲ್ಲ.
ಮಣ್ಣಲ್ಲಿ ಬಿತ್ತೆ ಬೀಜ ಮಹಾವೃಕ್ಷವಾಗುವದು
ಅಣ್ಣ ನಮ್ಮಾದಿ ಕೇಶವಾನುಗ್ರಹದಿಂ||
**


ಮೊಗಕೆಲ್ಲ ಹೊಗೆಸುತ್ತಿ ಬಗೆಗೆಟ್ಟನೊಬ್ಬ /

ಜಗಳಾಡ್ವ ಘಟಪಟದ ಬಾಯ್ಬಡುಕನೊಬ್ಬ /

ನಿಗಮಾರ್ಥವ ಕೆಡಿಸುವ ಖಳನೊಬ್ಬ ತ್ರಿ- /

ಜಗದೊಳಗುಂಡುಟ್ಟು ಬಾಯಾರ್ವನೊಬ್ಬ ಈ-/

ವಿಗಡವಾದಿಗಜಮೃಗರಾಜಗುರುಮಧ್ವ-/

ಸುಗುಣಾಬ್ಧಿ ಪ್ರಸನ್ವೇಂಕಟ ಕೃಷ್ಣನ್ನ ತೋರಿದನಾಗಿ//


EXPLANATION BY-Smt. Padma Sirish


ರ್ಥಾನುಸಂಧಾನ ಹರಿವಾಯುಗುರುಗಳ ಅನುಗ್ರಹದಿಂದ ಮಾತ್ರ


👇🏽👇🏽👇🏽👇🏽👇🏽👇🏽👇🏽👇🏽 



ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಮಾಹತ್ಮ್ಯವನ್ನು ತೋರುವಂತಹ ಉಗಾಭೋಗವಿದು... 


ಶ್ರೀ ಪ್ರಸನ್ನವೇಂಕಟದಾಸಾರ್ಯರು ಈ ಉಗಾಭೋಗದಲ್ಲಿ ಶ್ರೀಮದಾಚಾರ್ಯರು 21 ಕುಭಾಷ್ಯಗಳನ್ನು ಹೇಗೆ ಖಂಡಿಸಿದರು? ಎನ್ನುವುದು ಮುಖ್ಯವಾದ  ವಿಭಾಗಗಳನ್ನು ತಗೊಂಡು  ವಿವರವನ್ನು ಸೊಗಸಾಗಿ ನೀಡಿದದ್ದಾರೆ... 


 ಮೊಗಕೆಲ್ಲ ಹೊಗೆಸುತ್ತಿ-  ಅಂದರೆ ಮುಖಕ್ಕೆ ಬರೇ ಭಸ್ಮ ಹಚ್ಚಿ ಹರಿ ಸರ್ವೋತ್ತಮ ತತ್ವವನ್ನು ಒಪ್ಪದ

ಪಾಶುಪತ ಆಗಮವನ್ನು ಒಪ್ಪುವ ಶೈವನು. ಇವನು  ಒಬ್ಬ. 


ಜಗಳಾಡ್ವ ಘಟಪಟದ ಬಾಯ್ಬಡುಕನೊಬ್ಬ - ಬರೇ ವಾದ ವಿವಾದ ಮಾಡುತ್ತ ನಿಜವಾದ ಶಾಸ್ತ್ರವನ್ನು ಮರೆತಿರುವ, ಒಪ್ಪದ  ನ್ಯಾಯಾಯಿಕರು ಇವನೂ ಒಬ್ಬ. 


ನಿಗಮಾರ್ಥವ ಕೆಡಿಸುವ  ಖಳನೊಬ್ಬ - ಖಳ ಅಂದರೆ ದುಷ್ಟ. 

ವೇದಗಳು ಒಪ್ಪಿದಂತೆ ನಟನೆ ಮಾಡುತ್ತಾ  ನಿಜವಾದ ವೇದದ ಅರ್ಥವನ್ನು ಒಪ್ಪದ ಮಾಯಾವಾದಿ..  ಇವನೂ ಒಬ್ಬ..


ಜಗದೊಳಗುಂಡುಟ್ಟು ಬಾಯಾರ್ವನೊಬ್ಬ - ಜೀವನ ಒಂದೇ ಇರೋದು, ಆರಾಮ್ ಉಂಡು, ಉಟ್ಟು ಸುಖವಾಗಿರಬೇಕು ಅಂತ ಅಂಧಂತಮಸ್ಸಿಗೇನೇ ಸಾಧನೆ ಮಾಡುವ ಚಾರ್ವಾಕನು ಒಬ್ಬ... 


ಇಂಥಹ ವಿಗಡವಾದಿಗಳಿಗೆ, ವಿತಂಡವಾದಿಗಳಿಗೆ ಗಜ ಮೃಗರಾಜರಂತಿರುವ-  21 ಕುಭಾಷ್ಯಗಳನ್ನು ಖಂಡಿಸುತ್ತ ಗಜಮೃಗರಾಜರಂತಿರುವ  ಶ್ರೀ ಗುರುಮಧ್ವರು ಅರ್ಥಾತ್ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು , ನಮ್ಮ ಪ್ರಸನ್ನವೆಂಕಟಕೃಷ್ಣ ಪರಮಾತ್ಮನನ್ನು ನಿಜವಾದ ತತ್ವಗಳ ಮುಖಾಂತರ ತಿಳಿಸಿದವರು, ಅರ್ಥಾತ್ ತೋರಿದವರು ಎಂದರ್ಥ... 


ಇದನ್ನೇ ನಮ್ಮ ಮಾನವಿ ಪ್ರಭುಗಳಾದ ಶ್ರೀ ಜಗನ್ನಾಥ ದಾಸಾರ್ಯರು..


ಕ್ಷಿತಿಯೊಳಗೆ ಮಣಿಮಂತ ಮೊದಲಾದತಿ ದುರಾತ್ಮರು ಒಂದಧಿಕ ವಿಂಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ/ ಸತಿಯ ಜಠರದೊಳವತರಿಸಿ ಭಾರತಿರಮಣ ಮಧ್ವಾಭಿಧಾನದಿ ಚತುರದಶಲೋಕದಲಿ ಮೆರೆದಪ್ರತಿಮಗೊಂದಿಸುವೆ // 


ತಮ್ಮ ಮೇರು ಕೃತಿಯಾದ ಶ್ರೀಮದ್ಹರಿಕಥಾಮೃತ ಸಾರದ ಪದ್ಯದ ಮುಖಾಂತರ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಸ್ತುತಿ ಮಾಡಿ ತಿಳಿಸಿದ್ದಾರೆ...


ಶ್ರೀ ಪ್ರಸನ್ನವೇಂಕಟ ದಾಸಾರ್ಯರ ಅಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀವೇಂಕಟೇಶನ ಅನುಗ್ರಹ ಸದಾ ಇರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...


ದಾಸರುಗಾಭೋಗಗಳ ಒಂದು ಬಾರಿ ಪಾರಾಯಣಿಸೆ...  ವಿಶೇಷವಾಗಿ ಶ್ರೀಶ ತೋಷದಿ ವಲಿವಾ

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***

ಹರಿದಾಸ ಕವಿಕುಲತಿಲಕರಾದ ಮೈಸೂರು ಶ್ರೀ ಗುರುಗೋವಿಂದವಿಠಲರ ಉಗಾಭೋಗ

ಕಂಡಕಂಡ ದೈವಂಗಳಿಗೆ ಅಂಗಲಾಚಿ/
ಬೆಂಡಾಗಿಹೆನೋ ಭವದೊಳಗೆ ಬೆಂದು/ ಈ 
ಭಂಡತನವ ಬಿಡಿಸಿ ಕಾಯೋ/
ಪುಂಡರೀಕಾಕ್ಷ ಗುರುಗೋವಿಂದವಿಠಲ

EXPLANATION BY-Smt. Padma Sirish


ಸಂಕ್ಷಿಪ್ತ ಅರ್ಥಾನುಸಂಧಾನ ಶ್ರೀ ಹರಿವಾಯುಗುರುಗಳ ಅನುಗ್ರಹದಿಂದ ಮಾತ್ರ

👇🏽👇🏽👇🏽👇🏽👇🏽👇🏽👇🏽👇🏽 

ಸರ್ವೋತ್ತಮನಾದ, ಸರ್ವತಂತ್ರ್ಯ ಸ್ವತಂತ್ರ್ಯನಾದ, ಎಲ್ಲ ದೇವರ ಗಂಡ ಅಂದರೆ ಒಡೆಯನಾದ ಶ್ರೀಹರಿ ಜಗತ್ತನ್ನು ಸೃಷ್ಟಿಸಿ,  ಅದರಲ್ಲಿ ಕರ್ಮಭೂಮಿಯಾದ ಭಾರತದಲ್ಲಿ,  ಅದರಲ್ಲಿಯೂ ವೈಷ್ಣವ ಜನ್ಮದಲಿ ಹುಟ್ಟಿಸಿ ಸಾಧನ ಶರೀರವನ್ನು ನೀಡಿ, ಸರಿಯಾದ ಹಾದಿ ಹಿಡಿದು ಸಾಧನೆ ಮಾಡು ಅಂತ ತನ್ನ ಭೃತ್ಯರಾದ ಎಲ್ಲ ದೇವತೆಗಳನೂ ಯತಿಗಳಾಗಿ,  ದಾಸರುಗಳಾಗಿ ಅವತಾರ ಮಾಡುವಂತೆ ಮಾಡಿ ನಮಗೆ ಉಪದೇಶ ಮಾಡಿಸಿದರೂ,  ಅವೆಲ್ಲವನ್ನೂ ಕಿವಿಗೆ ಹಾಕಿಕೊಳ್ಳದೆ,  ಇನ್ನೂ ಕಂಡಕಂಡ ದೇವತೆಗಳನು, ಬಾಬಾಗಳನ್ನು ,ದೇವರಂತೆ ಕಾಣುತ್ತಾ  ಅದರಿಂದ ಉಂಟಾದ ಕಷ್ಟಗಳಿಂದ ಬೆಂಡಾಗಿ -  ಆಯಾಸಪಟ್ಟು  ಭವವೆಂಬ ಅಗ್ನಿಯಲ್ಲಿ ಬೆಂದು ಕುಳಿತಿದ್ದೇವೆ.  ಅಂತಹ ಭಂಡರಾದ ಅಂದರೆ ನಾಚಿಕೆಗೆ ಗೆಟ್ಟು ಸೋತು ಕೂತ ನಮ್ಮಗೆ,  ಆ ಭಂಡತನವನ್ನು ದೂರಮಾಡಿಸಿ ಕಾಯೋ ಪುಂಡರೀಕಾಕ್ಷ ಅಭಿನ್ನ ಶ್ರೀ ಗುರುಗೋವಿಂದವಿಠಲನಲ್ಲಿ ಪ್ರಾರ್ಥನೆ ಮಾಡುವುದನ್ನು, ಆತನ ಮೊರೆ ಹೋಗುವುದನ್ನು ಹೇಳಿಕೊಡ್ತಿದ್ದಾರೆ ಶ್ರೀ ದಾಸಾರ್ಯರು.

ನಾವು ತಿಳಿದೂ, ತಿಳಿಯದೆ ಮಾಡಿದ ಸಣ್ಣ ಪುಟ್ಟ ಅಪರಾಧಗಳನ್ನು  ಅಂದರೆ ಮಡಿ ಉಟ್ಟುಕೊಂಡಾಗ,  ಏನಾದರೂ ಮೈಲಿಗೆಯ ವಸ್ತುವನ್ನು ಮುಟ್ಟಿದಾಗ , ಹೀಗೆಲ್ಲಾ ಇತರ ಸಮಯದಲಿ ತಿಳಿಯದೆ ಮಾಡಿದ ಪಾಪಗಳನ್ನು,  ದೂರಮಾಡೆಂದು ಪುಂಡರೀಕಾಕ್ಷ,  ಪುಂಡರೀಕಾಕ್ಷ ಅಂತ ಸ್ಮರಣೆ ಮಾಡ್ತೆವೆ. 

ಪುಂಡರೀಕಾಕ್ಷ ನೇ ಯಾಕೆ ಅಂದರೆ,  ಯಾವುದೇ ಒಂದು ಪದಾರ್ಥ ಅಥವಾ ನೀರಿನ  ಬಿಂದು ಏನೇ ಇದ್ದರೂ  ಕಮಲದ ಪತ್ರ ಅದನ್ನು  ತನ್ನ ಮೇಲೆ ಇರಿಸಿಕೊಳ್ಳುವುದಿಲ್ಲ.  

ಹಾಗೆಯೇ ನಮ್ಮ ಎಲ್ಲ ಇಂದ್ರಿಯಗಳಲ್ಲಿ ಕಣ್ಣುಗಳು ಮಾತ್ರ ಏನೇ ಕಸ ಬಂದರೂ ಅದನ್ನು ಹೊರಗೆ ಹಾಕ್ತವೆ, ಹಾಗೂ ಕಣ್ಣುಗಳನ್ನು ಸ್ವಚ್ಚವಾಗಿರುಸ್ತವೆ.

ಪುಂಡರೀಕಾಕ್ಷನಾದ ಅರ್ಥಾತ್ ಕಮಲದಂತೆ ಕಣ್ಣುಗಳುಳ್ಳ ನಾರಾಯಣನು ಸಜ್ಜನರ ಅಘಗಳನ್ನು (ಕಷ್ಟಗಳನ್ನು) ದೂರ ಮಾಡಿ ಅವರ ಮನಸ್ಸನ್ನು ಸ್ವಚ್ಛವಾಗುವಂತೆ ಮಾಡ್ತಾನೆ.  ಅದಕ್ಕಾಗಿ ಇಲ್ಲಿ
ಪುಂಡರೀಕಾಕ್ಷ ನನ್ನು  ವಿಶೇಷವಾಗಿ ಸ್ತುತಿಸಿದ್ದಾರೆ ಶ್ರೀ ದಾಸಾರ್ಯರು. 

ಅಂದರೆ ಇತರ ದೈವಂಗಳ ಪೂಜೆ , ಆರಾಧನೆ ಮಾಡಿ ಮೈಲಿಗೆಯಾದ ಮನಸ್ಸನ್ನು ಶುದ್ಧಗೊಳಿಸಲು ಶ್ರೀ ಪುಂಡರೀಕಾಕ್ಷನನ್ನು ಬೇಡಿಕೊಳ್ಳುವುದನ್ನು ತಿಳಿಸಿ ಹೇಳಿದ್ದಾರೆ ಎನ್ನುವುದು ಸೂಕ್ಷ್ಮ...

ದಾಸರುಗಾಭೋಗಗಳ ಒಂದು ಬಾರಿ ಪಾರಾಯಣಿಸೆ...  ವಿಶೇಷವಾಗಿ ಶ್ರೀಶ ತೋಷದಿ ವಲಿವಾ

-Smt. Padma Sirish
ನಾದನೀರಾಜನದಿಂ ದಾಸಸುರಭಿ 

***

ತಮಿಳುನಾಡಿನ ದಾಸಾರ್ಯರಾದ ಶ್ರೀ ತಂದೆಪುರಂದರವಿಠಲರ ಉಗಾಭೋಗ


ಆನೆಯಂದದಿ ಕೂಗಲರಿಯೆ,/ ನಾರಿಯಂದದಿ ಕರೆಯರಿಯೆ/

ಭಾನುಸುತನಂತೆ ದಾನವರಿಯೆ/

ಪರೀಕ್ಷಿತನಂತೆ ಶ್ರವಣವರಿಯೆ/

ಹರಿಶ್ಚಂದ್ರನಂತೆ ಸತ್ಯವರಿಯೆ/

ಧರ್ಮಜನಂತೆ ಶಾಂತವನರಿಯೆ /

ಏನಕಂಡು ಎನ್ನ ರಕ್ಷಿಪೆಯೋ ತಂದೆಪುರಂದರವಿಠಲ


EXPLANATION BY-Smt. Padma Sirish


ಸಂಕ್ಷಿಪ್ತ ಅರ್ಥಾನುಸಂಧಾನ ಶ್ರೀ ಹರಿವಾಯುಗುರುಗಳ ಅನುಗ್ರಹದಿಂದ ಮಾತ್ರ 


👇🏽👇🏽👇🏽👇🏽👇🏽👇🏽👇🏽👇🏽


 ನಾವು ಅಶಕ್ತರಾದವರು,  ಸತ್ಯವನ್ನು ಆಡುವವರಲ್ಲ, ದಾನಧರ್ಮದ ಕಾರ್ಯಗಳು ಮಾಡುವವರಲ್ಲ,  ಸದಾ ಭಗವಂತನ ಕಥಾ ಶ್ರವಣ ಕೇಳುವವರಲ್ಲ, ಹೀಗಿದ್ದ ನಮ್ಮನ್ನು ಹೇಗೆ ರಕ್ಷಣೆ ಮಾಡ್ತಿ ಎಂದು  ಭಗವಂತನನ್ನು ಕೇಳುವುದನ್ನು ಈ ಉಗಾಭೋಗದಲ್ಲಿ ತೋರಿಸಿಕೊಟ್ಟಿದ್ದಾರೆ ಶ್ರೀ ದಾಸಾರ್ಯರು..


ಜೊತೆಗೆ ನಮಗೆ ಇಲ್ಲದ ಗುಣಗಳು, ಯಾರ ಯಾರಲ್ಲಿ ಇವೆಯೋ ಅಂತಹ ಭಗವದ್ಭಕ್ತರ ಸ್ಮರಣೆಯೂ ಮಾಡಿದ್ದಾರೆ. 


ಉದಯಕಾಲದಲ್ಲಿ ಗಜೇಂದ್ರ ಮೋಕ್ಷದ ಪಾರಾಯಣ ಶ್ರೀಹರಿಗೆ ಅತ್ಯಂತ ಪ್ರೀತಿಕರವಾದದ್ದು ಎನ್ನುವ ವಿಷಯವನ್ನರಿತು,  ಗಜೇಂದ್ರನಿಂದಲೇ ನಮ್ಮ ಪ್ರಾರ್ಥನೆ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. 


ಆನೆಯಂದದಿ ಕೂಗಲರಿಯೆ - ಗಜೇಂದ್ರಮೋಕ್ಷದಲ್ಲಿ ಆನೆಯು ಕೂಗಿದಾಗ ಪರಮಾತ್ಮನು ಓಡಿ ಬಂದಿದ್ದಾನೆ. ಆನೆಯಾಗಿದ್ದರೂ ಭಗವಂತನ ಸ್ಮರಣೆ ಮಾಡಿ ಆರ್ತಿಯಿಂದ ಕರೆದರೆ ನೀನು ಒಲಿಯುತ್ತಿ ಸ್ವಾಮಿ ! ಮನುಷ್ಯನಾದ ನಾವೂ  ಸಹ ಆ ಗಜೇಂದ್ರನಂತೆ ನಿನ್ನ ಹೊರತು ಬೇರೆ ದಿಕ್ಕಿಲ್ಲ  ಎಂದು ಪರಮಾತ್ಮನನ್ನು  ಬೇಡುವುದನ್ನು ಕಲಿಸುತ್ತಿದ್ದಾರೆ ಶ್ರೀ ತಂದೆಪುರಂದರವಿಠಲರು...


ನಾರಿಯಂದದಿ ಕರೆಯರಿಯೆ - ದ್ರೌಪದೀದೇವಿಯರಂತೆ ನೀನೇ ಅನಾಥ ರಕ್ಷಕ ಎಂದು ಪೂರ್ತಿ ಭಕ್ತಿ ವಿಶ್ವಾಸಗಳಿಂದ ನಿನ್ನ ಕರಿಯುವ ಸಾಮರ್ಥ್ಯವನ್ನು,  ಸಾಸಿವೆ ಕಾಳಷ್ಟಾದರೂ ಭಕ್ತಿಯನ್ನು ನೀಡಿ ಕಾಪಾಡು ಅಂತ ದೇವರನ್ನ ಬೇಡೋದನ್ನ ಕಲಿಸಿದ್ದಾರೆ..


ಭಾನುಸುತನಂತೆ ದಾನವರಿಯೆ - ಸೂರ್ಯನ ಪುತ್ರನಾದ, ಮಹಾದಾನಿಯಾದ,  ತನಗೆ ಮರಣವಿದೆ ಅಂತ ತಿಳಿದಾಗಲೂ ತನ್ನ ಕವಚವನ್ನು ದಾನ ಮಾಡಿದ ಕರ್ಣನಂತೆ,  ಭಗವದ್ಭಕ್ತನಾದ ಮನುಷ್ಯ ದಾನ ಧರ್ಮಗಳಲ್ಲಿ ತಮ್ಮ ಸಂಪದವನ್ನು ವಿನಿಯೋಗಿಸಬೇಕೇ ಹೊರತು , ವಿಲಾಸಜೀವನಕ್ಕಾಗಿ ಅಲ್ಲ ಎಂಬುವುದನ್ನು ಇಲ್ಲಿ ಕರ್ಣನ ದೃಷ್ಟಾಂತದಿಂದ ಸೂಚನೆ ಮಾಡಿದ್ದಾರೆ. 


ಪರೀಕ್ಷಿತನಂತೆ ಶ್ರವಣವರಿಯೆ


ಮುನಿಯ ಪುತ್ರನ ಶಾಪ ಪಡೆದು ತನಗೆ ಸಾವು ಇನ್ನೊಂದು ವಾರವೇ ಎಂದು ತಿಳಿದು ಪರಮಾತ್ಮನ ಕಥಾ ಶ್ರವಣ ಮಾಡಿ, ನಮಗೆ ಶ್ರೀಮದ್ ಭಾಗವತವನ್ನು ನೀಡಿದ ಆ ಮಹಾನ್ ಪರೀಕ್ಷಿತರಾಜನಂತೆ ನಿನ್ನ ಕಥಾಶ್ರವಣವನ್ನು ಮಾಡದೆ ಸದಾ ಲೌಕಿಕಾಲೋಚನೆಯ ಗೊಡವೆಗೆ ಹೋಗಿ ಹಾಳು ಹರಿಟೆಗಳಲ್ಲಿ,  ಬೇರೆಯ ಮಾತುಗಳನ್ನು ಕೇಳಿ ಆಯುಷ್ಯ ಕಮ್ಮಿ ಆಗುತ್ತಿರುವಾಗ ಸಾಧನೆಯ ಗೊಡವೆಗೆ ಹೋಗದಿರುವುದು ಸರಿಯಲ್ಲ ಅಂತಾರೆ ಶ್ರೀ ದಾಸರು.


ಹರಿಶ್ಚಂದ್ರನಂತೆ ಸತ್ಯವರಿಯೆ


ಎಂತಹ ಕಷ್ಟ , ಆಪತ್ತು,  ಕೊನೆಗೆ ಸರ್ವಶ್ವವೂ ಕಳೆದರೂ ಸತ್ಯವನ್ನು ಬಿಡದೆ, ಸತ್ಯ ನಾಮಕ ಪರಮಾತ್ಮನನ್ನು ನಂಬಿದ ಸತ್ಯ ಹರಿಶ್ಚಂದ್ರರಿಗೆ ಭಗವಂತ ಪೂರ್ಣ ಒಲಿದಂತೆ, ಸಜ್ಜನರಾದ, ಸಾಧನೆಯ ಹಾದಿಯಲ್ಲಿದ್ದವರೆಲ್ಲರೂ ಸತ್ಯವನ್ನು ಬಿಡದಿರಬೇಕು ಅಂತಾರೆ ಶ್ರೀ ದಾಸಾರ್ಯರು. 


ಧರ್ಮಜನಂತೆ ಶಾಂತವರಿಯೆ - ಧರ್ಮರಾಜನು ಸಹ ತನ್ನ ಎಲ್ಲವನ್ನೂ ಕಳೆದುಕೊಂಡರೂ,  ಧರ್ಮವನ್ನು ಬಿಡದೆ ಸದಾ ಧರ್ಮದ ಹಾದಿಯಲ್ಲಿ ನಡೆದು ಭಗವಂತನ ಪ್ರೀತಿಗೆ ಒಳಗಾಗಿದ್ದಂತೆ,  ನಾವೂ ಸಹ ಎಂತಹ ಕಷ್ಟ ಸಂದರ್ಭಗಳಲ್ಲಿಯೂ,  ಧರ್ಮವನ್ನು ಬಿಡದಿದ್ದರೆ ಮಾತ್ರ ಶ್ರೀ ತಂದೆಪುರಂದರವಿಠಲಾಭಿನ್ನ ಶ್ರೀಹರಿ ಒಲಿಯುವನು ಎನ್ನುವುದು ಸೂಕ್ಷ್ಮ. ಶ್ರೀ ದಾಸರ ಅನುಗ್ರಹ ಸದಾ ನಮಗಿರಲೆಂದು ಅವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ....


ದಾಸರುಗಾಭೋಗಗಳ ಒಂದು ಬಾರಿ ಪಾರಾಯಣಿಸೆ...  ವಿಶೇಷವಾಗಿ ಶ್ರೀಶ ತೋಷದಿ ವಲಿವಾ

-Smt. Padma Sirish
ನಾದನೀರಾಜನದಿಂ ದಾಸಸುರಭಿ 

***