Showing posts with label ನಾಮ ಮುದ್ರೆಗಳ ಧರಿಸುವ ಕ್ರಮವನ್ನು mudras where to put kalimardhanakrishna. Show all posts
Showing posts with label ನಾಮ ಮುದ್ರೆಗಳ ಧರಿಸುವ ಕ್ರಮವನ್ನು mudras where to put kalimardhanakrishna. Show all posts

Monday, 2 August 2021

ನಾಮ ಮುದ್ರೆಗಳ ಧರಿಸುವ ಕ್ರಮವನ್ನು mudras where to put ankita kalimardhanakrishna

ನಾಮ ಮುದ್ರೆಗಳ ಧರಿಸುವ ಕ್ರಮವನ್ನು

ನಾ ಮಂದನಾದರು ಸರಿ ಗುರುಗಳ ಕೃಪೆಯಿಂದ

ನಾ ಎಂಬುದ ಮರೆತು ಅರಿತಷ್ಟು ಪೇಳುವೆನು

ಕಾಮನಯ್ಯ ಕೇಶವನ್ನ ಸ್ಮರಿಸು ಲಲಾಟದಲ್ಲಿ

ಒಮ್ಮನಸಿನಿಂದ ಮೂಲವನ್ನು ಉದರ ಮಧ್ಯದಲಿ

ಸಾನುವಂದಿತಾದ ಮೇಶನನ್ನು ಹೃದಯದಿ ಉ

ಪಮೇರಹಿತನಾದ ಗೋವಿಂದನನ್ನು ಕಂಠ ಮಧ್ಯದಿ

ರಮ್ಮೆ ಪತಿ ಶ್ರೀ ವಿಷ್ಣುವಿನನ್ನುದಷೋದರದಿ

ಸಮ್ಮಾಧಿತ್ಯ ಶೂನ್ಯ ಮಧುರಿಪುವಿನ ದಕ್ಷಭುಜದಿ

ವಾಮ ಪ್ರತಿಕಂಠದಿ ತ್ರಿವಿಕ್ರಮನನ್ನು

ವಾಮನ ಉದರದಿ ವಾಮನ ಮೂರ್ತಿಯನ್ನು

ವಾಮ ಭುಜಕಂಠದಿ ಶ್ರೀಧರ ಹೃಷಿಕೇಶರನ್ನು

ಸ್ವಾಮಿಯಾಗದಿ ಪದ್ಮನಾಭನನ್ನು ಪುಷ್ಟಭಾಗದಿ

ನಿಮ್ಮ ಮಹಿಮ ಗುರು ಕಾಳೀಮರ್ಧಕೃಷ್ಣ ಭಿನ್ನ

ದಾಮೋದರನನ್ನು ಶಿರೋ ಭಾಗದಿ ನೆನೆಯೊ 1


ಉದರ ಮಧ್ಯದಲಿ ಐದು ಚಕ್ರಂಗಳು

ಹೃದಯಾಕಾಶದಲ್ಲಿ ಮೂರು ಚಕ್ರಂಗಳು

ಹೃದಯ ಮೇಲಿನ ಕಂಠದಲ್ಲಿ ಒಂದು

ಉದರದಕ್ಷ ಕುಕ್ಷಿಯಲ್ಲಿ ಎರಡು

ಮಧುಸೂದÀನ ಸ್ಥಳದಿ ಮೇಲೆ ಎರಡು

ಅಧರ ಭಾಗದಿ ವಾಮ ಬಾಹುವಿನಲ್ಲಿ ಒಂದು

ಅದಲ್ಲದೆ ವಾಮಕಂಠದಿ ತಾ ಒಂದು

ಎದೆಯ ಬಲಪಕ್ಷ ಕಪೋಲದಿ ಮೂರು ಒಂದು

ಇದೇ ಇದೇ ತಿಳಿದು ಚಕ್ರಂಗಳ ಧರಿಸುವರು

ಸದಮಲಗುರು ಕಾಳೀಮರ್ಧನಕೃಷ್ಣನ ಕೊಂಡರು


ದಕ್ಷ ಬಾಹು ಕಂಠದಲ್ಲಿ ಕೆಳಗೆ ಒಂದು ಒಂದರಂತೆ

ಕುಕ್ಷಿವಾಮದಲ್ಲಿ ಭಂಧದಿಕೊಂದು ಪರಂಗಳ

ಪಕ್ಷಿವಾಹನನಾದ ಶ್ರೀಧರಸ್ಥಾನದ ಮೇಲೆ ಎರಡು

ದಕ್ಷವಲ್ಲದ ಕಪೋಲ ಸ್ತನೆಂಗಳಲಿ

ಒಂದು ಮೂರರಂತೆ ಕ್ರಮದಿ

ದಕ್ಷನಾಗಿ ಧರಿಸಿ ಗುರು ಕಾಳೀಮರ್ಧನ ಕೃಷ್ಣನನೆಯೆ 3

****