Showing posts with label ಮುಖ್ಯಪ್ರಾಣನೆ ನಮ್ಮ ಮೂಲ ಗುರುವು pranesha vittala. Show all posts
Showing posts with label ಮುಖ್ಯಪ್ರಾಣನೆ ನಮ್ಮ ಮೂಲ ಗುರುವು pranesha vittala. Show all posts

Friday, 15 November 2019

ಮುಖ್ಯಪ್ರಾಣನೆ ನಮ್ಮ ಮೂಲ ಗುರುವು ankita pranesha vittala

by ಪ್ರಾಣೇಶದಾಸರು
ಮುಖ್ಯ ಪ್ರಾಣನೆ ನಮ್ಮ ಮೂಲ ಗುರುವು |ರಕ್ಕಸಾಂತಕ ಶ್ರೀ ಭಾರತಿಯ ರಮಣನೆಂಬ ಪ

ಅಂಜನಾ ಸುತನಾಗಿ ದಶರಥ ಸುತನಂಘ್ರಿ |ಕಂಜಭಜಿಸಿ ರಾವಣಾದಿ ಖಳರಾ ||ಅಂಜಿಸಿ ಕಪಿಗಳು ಚೇತನ ಕೆಡಲಾಗ |ಸಂಜೀವನವ ತಂದು ಪ್ರಾಣವನುಳುಹಿದ 1

ಹರಿಗೆ ದ್ವೇಷಿಗಳಾದ ಮಗಧಾದಿ ಕ್ಷಿತಿಪರ |ತರಿದು ದ್ರೌಪದಿಯಳಕರವಪಿಡಿದು ||ದುರುಳಕೌರವರನ್ನು ಅಳಿದು ದ್ವಾಪರ ಕೊಟ್ಟಾ |ಗರಳಭೋಜನ ಮಾಡಿ ವೃಕೋದರನೆನಿಸಿದಾ2

ವಿಷಯಂಗಳ ತೊರೆದು ಕಾಷಾಯಾಂಬರ ಧರಿಸಿ |ವಸುಧೆಯೊಳಗೆ ದುರ್ಮತವ ಸೋಲಿಸಿ ||ಅಸಮ ಶ್ರೀ ಪ್ರಾಣೇಶ ವಿಠ್ಠಲ ಪರದೈವವೆಂದು |ಹಸನಾಗಿ ತಿಳಿಸಿದ ಶ್ರೀ ಮಧ್ವಮುನಿಯೆಂಬ 3
*******