ಹಬ್ಬವೆನಗಿಂದು ಧರೆಯೊಳು ನೋಡಿ ಇಬ್ಬರೊಂದಾದ ನೆಲೆನಿಜಗೂಡಿ ಉಬ್ಬಿ ಉನ್ಮನವಾಗಿ ಎನ್ನೊಳು ಕೊಬ್ಬಿದೆನು ಘನಸುಖ ಬೆರದಾಡಿ 1
ಉಬ್ಬಸೆನಗಿನ್ನು ಹಿಂಗಿತು ನೋಡಿ ಹಬ್ಬದೂಟದ ಸವಿರಸಗೂಡಿ ಹಬ್ಬಿಹವಣಿಸಿ ಬೀಳುವ ಗರ್ಭಪಾಶವನೆಗಳೆದೆನು ಈಡ್ಯಾಡಿ 2
ಹಬ್ಬವಾಯಿತು ಮಹಿಪತಿಗಿಂದು ಒಬ್ಬನಿಜವಾದ ಗುರು ಕೃಪಾಸಿಂಧು ಹಬ್ಬಹರುಷದಿ ನೆಲೆನಿಭಗೊಂಡಿÀನ್ನು ಶೋಭಿಸಿತು ಶುಭಕರ ದಿವಸಿಂದು 3
***