'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+
ನಾರಸಿಂಹ ನಿನ್ನ ಭಜಿಸುವೆನು ಶ್ರೀ ಮಾರಜನಕನೆ
ಸೂರಿಗಳರಸ ಬಳ್ಳಾರಿಲಿ ಮೆರೆವಂಥ
ನಾರಸಿಂಹ ನಿನ್ನ ಭಜಿಸುವೆ ಪ
ಸುರಪವೈರಿಯ ಸೂರಿಮಾಡಿದ | ಸೂರಿಗಳ ಭಯ ಘೋರಬಿಡಿಸಿದ
ಕ್ರೂರ ದೈತ್ಯನ ಕೊರಳ್ಹಾರ ಹರಿದಶಿರಿ1
ಶ್ರೀಶ ನಿನ್ನಯದಾಸತ್ವಕೆ ಆಶಿಸುವೆ | ಎನ್ನ ಪೋಷಿಸುವುದೊ
ದೋಷದೂರಿನೆ ನರಸಿಂಹ ವಿಠಲ 2
ಎನ್ನ ಬಿನ್ನಪವನ್ನು ಮನ್ನಿಸಿ ಇನ್ನು ಈ ಪುರಕಿನ್ನು ಸಾರಿದೆ
ಘನ್ನ ಮಹಿಮೆ ಶಿರಿ ನರಸಿಂಹ ವಿಠಲನೆ 3
****