ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಈ ರೇಳು ಜಗಜೀವನಾ | ಜಗಜೀವನಾ ಪ
ಬಾರೋ ಈರೇಳು ಜಗಜೀವನಾ ಜಗಜೀವನಾ | ಪಾವನ ದೇವಾ ಪಾವನ ದೇವಾ | ಧೀರ ಕೇಶವಾ 1 ಕಂಗೆಡುತಿದೆ ಕಂಗೆಡುತಿದೆ | ನಿನ್ನ ಕಾಣದೆ 2
ಬೆನ್ನ ಬಿದ್ದವರವಗುಣವಾ | ಅವಗುಣವಾ | ಆರಿಸುವರೇ ಆರಿಸುವರೇ | ಚಿನ್ನ ಶ್ರೀ ಹರಿ3
ಇಂದು ಮನಿಗೆ ಬಾರದಿರಲು | ಬಾರದಿರಲು | ನಿಲ್ಲದು ಪ್ರಾಣಾ ನಿಲ್ಲದು ಪ್ರಾಣಾ | ಒಂದರೆಕ್ಷಣಾ 4
ತಂದೆ ಮಹಿಪತಿ ಸುತ ಪ್ರಭುವೇ | ಸುತ ಪ್ರಭುವೇ | ದೀನಾಭಿಮಾನಿ ದೀನಾಭಿಮಾನಿ | ಬಂದು ಕೂಡೋ ನಿ 5
***