ಜಗದೋದ್ದಾರನ ಸಖಿ ಮೊದಲಿಗೆ ಬಲಗೊಂಬೆಮುದದಿಂದ ಮುಯ್ಯ ಗೆಲಿಸೆಂಬೆನಲ್ಲೆ ನಮೋ ಎಂಬೆ ಸುರರ ಎಲ್ಲರ ಬಲಗೊಂಬೆ ಪ.
ನಿಗಮ ತಂದವನಿಗೆ ಮುಗಿವೆವು ಕರಗಳನಗವ ಪೊತ್ತವನ ಬಲಗೊಂಬೆ 1
ಜಗವನೆತ್ತಿದವಗೆ ಜಾಣಿ ವಂದಿಸಿಕರುಳು ಬಗೆದ ನರಸಿಂಹನ ಬಲಗೊಂಬೆ 2
ಪೊಡವಿಯನಾಳಿದವಗೆ ಬಿಡದೆ ವಂದಿಸಿಕೊಡಲಿಯ ಪಿಡಿದ ಭಾರ್ಗವನ ಬಲಗೊಂಬೆ 3
ಸೇತುವೆ ಕಟ್ಟಿದವಗೆ ಪ್ರೀತಿಲೆ ನಮಿಸಿಪಾರಿಜಾತ ತಂದವನ ಬಲಗೊಂಬೆ4
ವಸ್ತ್ರ ಹೀನಗೆ ನಾವು ಅತ್ಯಂತ ನಮಿಸಿ ಕುದುರೆಹತ್ತಿದ ರಾಮೇಶನ ಬಲಗೊಂಬೆ 5
****