..
ದಾಸನಾಗೋ ಭವಪಾಶನೀಗೋ - ವಿಶೇಷನಾಗೋ ಪ
ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗೊ - ಸಂತೋಷಿಯಾಗೊಅ
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೊ - ಅಲ್ಲಿ ಆಹೋದೇನೊದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ - ಉಪವಾಸದಲ್ಲಿಮೀಸಲಾಗಿ ಮಿಂದು ಜಪತಪ ಹೋಮನೇಮಗಳಏಸು ಬಾರಿ ಮಾಡಿದರೂ ಫಲವೇನೊ - ಇದು ಚೆಲುವೇನೊವಾಸುದೇವನೆಂಬ ಒಳಗಿಹ ಹಂಸನ ಸೇರಿಲೇಸನುಂಡು ಮೋಸಗೊಳದೆ ಮುಕ್ತನಾಗೊ - ನೀ ಶಕ್ತನಾಗೊ1
ಅತ್ತಲೋ ಇತ್ತಲೋ - ಎತ್ತಲೋ ಈ ಸಂಸಾರಬತ್ತಲೆಗೆ ಬತ್ತಲೆ ನಿತ್ಯವಲ್ಲ - ಪರಿಮಿತಿ ಇಲ್ಲಕತ್ತಲೆ ಕಾವಳದೊಳು ಕಾಣಲಾರದೆ ನೀನುಸತ್ಯವೆಂಬ ದಾರಿಯನು ಸೇರಲಿಲ್ಲ - ಲೇಸು ತೋರಲಿಲ್ಲಉತ್ತಮ ಅ ಉ ಮ ಎಂಬ ಓಂಕಾರ ಬೀಜಾಕ್ಷರಚಿತ್ತದಲಿ ಗ್ರಹಿಸು ನೀ ಬಿಡಬೇಡ - ಬಿಟ್ಟು ಕೆಡಬೇಡಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯನಿತ್ಯವೆಂದು ಸ್ಥಿರವೆಂದು ನಂಬಬೇಡ - ನಿನಗೆ ಡಂಬ ಬೇಡ 2
ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀರಘುರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು - ಭವದಿ ಮಮತೆ ಇಟ್ಟುನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದುಬಾಯಿ ಬಾಯಿ ಬಿಡುತಲಿ ಸಾವುದೇನೊ - ನೀ ನೋವುದೇನೊತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯದಾಯಕನ ಹೊಂದಿ ನೀ ಧನ್ಯನಾಗೊ - ಮುಕ್ತ ಮಾನ್ಯನಾಗೊ 3
ಅಂದಿಗೊ ಇಂದಿಗೊ ಒಮ್ಮೆ ಸಿರಿ ಕಮಲೇಶನನ್ನುಒಂದು ಬಾರಿ ಅರುಹಿಂದ ನೆನೆಯಲಿಲ್ಲ - ಮನ ತಣಿಯಲಿಲ್ಲಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿನೊಂದು ಬೆಂದು ಒಂದರಿಂದ ಉಳಿಯಲಿಲ್ಲ - ಬಂಧ ಕಳೆಯಲಿಲ್ಲಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದುಇಂದು ಕಾಣು ದೇಹದಲಿ ಪಿಂಡಾಂಡ - ಹಾಗೆ ಬ್ರಹ್ಮಾಂಡಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕುತಿಯ ಬೇಡು ಕಂಡ್ಯ - ನೀ ನೋಡು ಕಂಡ್ಯ 4
ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ ಪರನಾರಿಯರ ನೋಟಕೆ ಗುರಿಯ ಮಾಡಿದೆ - ಮನ ಸೆರೆಯ ಮಾಡಿದೆಸೋರೆಯೊಳು ಸುರೆ ತುಂಬಿ ಮೇಲೆ ಹುವ್ವಿನ ಹಾರ ಹಾಕಿಗೀರುಗಂಧ ಅಕ್ಷತೆಯ ಧರಿಸಿದಂತೆ - ನೀ ಮೆರೆಸಿದಂತೆಗಾರುಡಿಯ ಮತ ಬಿಟ್ಟು ನಾದಬ್ರಹ್ಮನ ಪಿಡಿದುಸಾರಿ ಸೇರಿ ಮುಕ್ತಿಯನ್ನು ಶಮನದಿಂದ - ಮತ್ತೆ ಸುಮನದಿಂದನಾರಾಯಣ ಅಚ್ಯುತಾನಂತಾದಿಕೇಶವನಸಾರಾಮೃತವನುಂಡು ಸುಖಿಸೊ ಲಂಡ ಜೀವವೆ - ಎಲೊ ಭಂಡ ಜೀವವೆ
***