Showing posts with label ನಿಮ್ಮಿಂದ ಗುರು ಪರಮಕಲ್ಯಾಣವು mahipati. Show all posts
Showing posts with label ನಿಮ್ಮಿಂದ ಗುರು ಪರಮಕಲ್ಯಾಣವು mahipati. Show all posts

Wednesday, 11 December 2019

ನಿಮ್ಮಿಂದ ಗುರು ಪರಮಕಲ್ಯಾಣವು ankita mahipati

ರಾಗ - ಬಹುಳಿ (ಶಂಕರಾ) ಝಪ್ ತಾಳ

ನಿಮ್ಮಿಂದ ಗುರು ಪರಮಕಲ್ಯಾಣವು
ನಿಮ್ಮಿಂದಲೆನಗೆ ಘನ ಪರಿಪೂರ್ಣವು||ಪ||

ಹುರಿದು ಭವಬೀಜ ಧರೆಯೊಳು ದಯ ಕರುಣದಲಿ
ಪರಮ ಆನಂದ ಸುಖ ಮಳೆಯಗರೆದು
ಕರ್ಮಪಾಶಗಳೆಂಬ ಕರಿಕಿಬೇರನು ಕಿತ್ತಿ
ಹರಗಿ ಬಿತ್ತಲು ನಾಮ ತಾರಕುಪದೇಶದಲಿ ||೧||

ವರ ಪ್ರತಾಪದ ಬೆಳೆಯು ತುಂಬಿ ತುಳುಕುವ ಸಿರಿಯು
ಸರ್ವಮಯವೆಂಬ ತೆನೆಗಳು ತುಂಬಿ
ಏರಿ ಸುಷುಮ್ನ ನಾಳದ ಮಂಚಿಕೆಯ ಮೆಟ್ಟಿ
ಪರಿಪರಿ ಅವಸ್ಥೆ ಹಕ್ಕಿಗಳ ಹಾರಿಸಲಾಗಿ ||೨||

ಮುರಿದು ಭೇದಾಬೇದವೆಂಬ ಗೂಡಲೊಟ್ಟಿ
ಅರಿವು ಕಣದಲ್ಲಿ ತರತರದಲಿಕ್ಕಿ
ಜ್ಞಾನವೈರಾಗ್ಯವೆಂಬೆರಡು ಎತ್ತುಗಳ ಹೂಡಿ
ಸರ್ವಗುಣ ತೆನೆ ತೆಗೆದು ತುಳಿದು ರಾಶಿ ಮಾಡಿಸಲಾಗಿ ||೩||

ಸರ್ವಮಯವೆಂಬ ರಾಶಿಯು ಒಬ್ಬುಳಿಯ ಮಾಡಿ
ತೂರಿ ತರ್ಕ ಭಾಸಗಳೆದು
ಮಿಥ್ಯಾ ಪ್ರಪಂಚವೆಂಬ ಕಾಳನು ಕಡೆಮಾಡಿ
ಸಫಲ ಸಹಕಾರದಲಿ ಸುಗ್ಗಿ ಮಾಡಿಸಲಾಗಿ ||೪||

ಏಕೋಬ್ರಹ್ಮದ ಗತಿ ನಿಧಾನ ರಾಶಿಯು ದೋರಿ
ಜನ್ಮ ಮರಣದ ಕೊಯಿಲಿಯ ಸುಟ್ಟು ಉರುಹಿ
ಸದ್ಗತಿ ಮುಕ್ತಿ ಸುಕಾಲ ಸಾಧನವಿತ್ತು
ಮೂಢಮಹಿಪತಿ ಪ್ರಾಣ ಸದ್ಗೈಸಲಾಗಿನ್ನು ||೫|
********

 ನಿಮ್ಮಿಂದ ಗುರು ಪರಮ ಕಲ್ಯಾಣವು ನಿಮ್ಮಿಂದಲೆನಗೆ ಘನ ಪರಿಪೂರ್ಣವು ಪ  


ಹುರಿದು ಭವಬೀಜ ಧರೆಯೊಳುದಯ ಕರುಣದಲಿ ಪರಮ ಆನಂದ ಸುಖ ಮಳೆಯಗರೆದು ಕರ್ಮ ಪಾಶಗಳೆಂಬ ಕರಿಕಿ ಬೇರವು ಕಿತ್ತಿ ಹರಗಿ ಬಿತ್ತಲು ನಾಮ ತಾರಕುಪದೇಶದಲಿ 1 

ತುಂಬಿ ತುಳುಕುವ ಸಿರಿಯು ಸರ್ವಮಯವೆಂಬ ತೆನೆಗಳು ತುಂಬಿ ಏರಿ ಸುಷಮ್ನನಾಳದ ಮಂಚಿಕಿಯ ಮೆಟ್ಟಿ ಪರಿಪರಿ ಅವಸ್ಥೆ ಹಕ್ಕಿಗಳು ಹಾರಿಸಲಾಗಿ2 

ಮುರಿದು ಭೇದಾಭೇದವೆಂಬ ಗೂಡಲೊಟ್ಟಿ ಅರಿವು ಕಣದಲಿ ಥರಥರದಲಿಕ್ಕಿ ಙÁ್ಞನ ವೈರಾಗ್ಯವೆಂಬೆರಡೆತ್ತುಗಳ ಹೂಡಿ ಸರ್ವಗುಣ ತೆನೆ ತೆಗೆದು ತುಳಿದು ರಾಸಿಮಾಡಿಸಲಾಗಿ 3 

ಸರ್ವಮಯವೆಂಬ ರಾಶಿಯು ಒಬ್ಬುಳಿಯ ಮಾಡಿ ತೂರಿ ತರ್ಕ ಭಾಸ ಗಳೆದು ಮಿಥ್ಯಾಪ್ರಪಂಚವೆಂಬ ಕಾಳವು ಕಡೆಮಾಡಿ ಸಫಲ ಸಹಕಾರದಲಿ ಸುಗ್ಗಿ ಮಾಡಿಸಲಾಗಿ 4 

ಏಕೋ ಬ್ರಹ್ಮದ ಗತಿ ನಿಧಾನ ರಾಶಿಯುದೋರಿ ಜನ್ಮ ಮರಣವು ಕೊಯಿಲಿಯ ಸುಟ್ಟು ಉರುಹಿ ಸದ್ಗತಿ ಮುಕ್ತಿ ಸುಕಾಲ ಸಾಧನವಿತ್ತು ಮೂಢ ಮಹಿಪತಿ ಪ್ರಾಣ ಸದ್ಗೈಸಲಾಗಿನ್ನು 5

***