Showing posts with label ನಾನೇನ ಮಾಡಿದೆನೊ ರಂಗಯ್ಯ ರಂಗ purandara vittala NAANENA MAADIDENO RANGAYYA RANGA. Show all posts
Showing posts with label ನಾನೇನ ಮಾಡಿದೆನೊ ರಂಗಯ್ಯ ರಂಗ purandara vittala NAANENA MAADIDENO RANGAYYA RANGA. Show all posts

Sunday, 12 December 2021

ನಾನೇನ ಮಾಡಿದೆನೊ ರಂಗಯ್ಯ ರಂಗ purandara vittala NAANENA MAADIDENO RANGAYYA RANGA





ನಾನೇನು ಮಾಡಿದೆನೋ, ಕೃಷ್ಣಯ್ಯ
ನೀನೆನ್ನ ಸಲಹಬೇಕು

ಕರಿರಾಜ ಕರೆಸಿದನೆ, ದ್ರೌಪದಿ ದೇವಿ
ಬರೆದೋಲೆಯ ಕಳುಹಿದಳೆ
ಹರುಷದಿಂದಲಿ ಋಷಿಪತ್ನಿಯ ಶಾಪವ
ಪರಿಹರಿಸಿದೆಯಲ್ಲೋ ಹೇ ಸ್ವಾಮಿ

ರಕ್ಕಸ ತನುಜನಲ್ಲೆ ಪ್ರಹ್ಲಾದ
ಚಿಕ್ಕ ಪ್ರಾಯದ ಧ್ರುವನು
ಸಿಕ್ಕಿದ ಪಾಪ ಮಾಡಿದ ಅಜಾಮಿಳ ನಿ-
ನ್ನಕ್ಕರೆ ಮಗನೆ ಪೇಳೊ ಹೇ ಸ್ವಾಮಿ

ಒಪ್ಪಿಡಿ ಅವಲಕ್ಕಿಯ ಕೃಷ್ಣಯ್ಯ ನಿನ-
ಗೊಪ್ಪಿಸಿದವಗೊಲಿದೆ
ಒಪ್ಪೆನು ನಿನಗೆ ಶ್ರೀ ಪುರಂದರವಿಠಲವ-
ರಪ್ಪಂತೆ ಕಾಯಬೇಕೋ ಹೇ ಸ್ವಾಮಿ
*****

just scroll down for other devaranama 

ರಾಗ ಸಾರಂಗ. ಅಟ ತಾಳ  (AUDIO RAGA MAYBE DIFFERENT)
ರಾಗ ಮೋಹನ/ಅಟ್ಟ ತಾಳ

Nanenu madideno venkataraya
Ninenna kayabeko || pallavi ||

Manapamanavu ninnadu enagenu
Dinarakshaka tirupatiya venkataraya || anu pallavi ||

Rakkasanallaveno prahladanu
Cikkava dhruvanallave
Ukki baruva karma madidajamila nimma
Akkana maganeno venkataraya || 1 ||

Kariraya karesidane draupadadevi
Baredole kaluhidale
Vara^^rushi patni kallagi striyadaddu
Dhareyella ariyadeno venkataraya || 2 ||

Oppidiyavalakkiya tandavanige
Oppi kotteyo bagyava
Sarpasayana sri purandaravithala
Aprameyane salaho venkataraya || 3 ||
***

pallavi

nAnEnu mADidenO krSNayya nInenna salahabEku

caraNam 1

karirAja karesidane draupadi dEvi paredole kaLuhidaLe haruSadindali rSipatniya shApava pariharisideyallO hE svAmi

caraNam 2

rakkasa tanujanalle prahlAda cikka prAyada dhruvanu sikkida pApa mADida ajAmiLa ninnakkare magane pELo hE svAmi

caraNam 3

oppiDi avalakkiya krSNayya ninagoppisidavagolideoppEnu ninage shrI purandara viTTalavarappande kAya bEkO hE svAmi
***
ನಾನೇನು ಮಾಡಿದೆನೋ ವೆಂಕಟರಾಯ
ನೀನೆನ್ನ ಕಾಯಬೇಕೋ || ಪಲ್ಲವಿ ||

ಮಾನಾಪಮಾನವು ನಿನ್ನದು ಎನಗೇನು
ದೀನರಕ್ಷಕ ತಿರುಪತಿಯ ವೆಂಕಟರಾಯ || ಅನು ಪಲ್ಲವಿ ||

ರಕ್ಕಸನಲ್ಲವೇನೋ ಪ್ರಹ್ಲಾದನು
ಚಿಕ್ಕವ ಧ್ರುವನಲ್ಲವೆ
ಉಕ್ಕಿ ಬರುವ ಕರ್ಮ ಮಾಡಿದಜಮಿಳ ನಿಮ್ಮ
ಅಕ್ಕನ ಮಗನೇನೋ ವೆಂಕಟರಾಯ || ೧ ||

ಕರಿರಾಯ ಕರೆಸಿದನೆ ದ್ರೌಪದಾದೇವಿ
ಬರೆದೋಲೆ ಕಳುಹಿದಳೆ
ವರಋಷಿ ಪತ್ನಿ ಕಲ್ಲಾಗಿ ಸ್ತ್ರೀಯಾದದ್ದು
ಧರೆಯೆಲ್ಲ ಅರಿಯದೇನೋ ವೆಂಕಟರಾಯ || ೨ ||

ಒಪ್ಪಿಡಿಯವಲಕ್ಕಿಯ ತಂದವನಿಗೆ
ಒಪ್ಪಿ ಕೊಟ್ಟೆಯೊ ಭಾಗ್ಯವ
ಸರ್ಪಶಯನ ಶ್ರೀ ಪುರಂದರವಿಠಲ
ಅಪ್ರಮೇಯನೆ ಸಲಹೋ ವೆಂಕಟರಾಯ || ೩ ||
*********


ನಾನೇನ ಮಾಡಿದೆನೋ ರಂಗಯ್ಯ 
ನಾನೇನ ಮಾಡಿದೆನೋ ರಂಗಯ್ಯ ರಂಗ ನೀ ಎನ್ನ ಕಾಯಬೇಕೋ ||ಪ|| 

ಮಾನಾಭಿಮಾನವು ನಿನ್ನದು ಎನಗೇನು ದೀನರಕ್ಷಕ ತಿರುಪತಿಯ ವೆಂಕಟರಮಣ  ||ಅ ಪ||   

ರಕ್ಕಸಸೂದನನೇ ಕೇಳು ಧ್ರುವರಾಯ ಚಿಕ್ಕವನಲ್ಲವೇನೋ.... ಉಕ್ಕಿಬರುವಕರ್ಮ ಮಾಡಿದ ಅಜಮಿಳ ನಿಮ್ಮಕ್ಕನ ಮಗನೇನೋ....   ||೧|| 

  ಕರೀರಾಜ ಕರೆಸಿದನೇ ದ್ರೌಪದಿದೇವಿ ಬರೆದೋಲೆ ಕಳುಹಿದಳೇ.... ಹರುಷದಿಂದಲಿ ಋಷಿಪತ್ನಿಯ ಶಾಪವ ಪರಿಹರಿಸಿದೆಯಲ್ಲೋ....   ||೨||  

 ಮುಪ್ಪಿಡಿ ಅವಲಕ್ಕಿಯ ತಂದವನಿಗೆ ಒಪ್ಪುವಂತೆ ಕೊಡಲಿಲ್ಲವೇ.... ಸರ್ಪಶಯನ ಶ್ರೀಪುರಂದರ ವಿಠ್ಠಲ ಅಪ್ರಮೇಯ ಕಾಯೋ.... ||೩||
************


ಪುರಂದರದಾಸರು
ನಾನೇನ ಮಾಡಿದೆನೊ ರಂಗಯ್ಯ ರಂಗ 
ನೀನೆನ್ನ ಕಾಯಬೇಕೋ ಪ

ಮಾನಾಭಿಮಾನವು ನಿನ್ನದು ಎನಗೇನುದೀನ ರಕ್ಷಕ 
ತಿರುಪತಿ ವೆಂಕಟರಮಣ ಅ.ಪ.

ರಕ್ಕಸತನುಜನಲ್ಲೇ - ಪ್ರಹ್ಲಾದನುಚಿಕ್ಕ ಪ್ರಾಯದ ಧ್ರುವನು ||
ಸೊಕ್ಕಿನ ಪಾಪ ಮಾಡಿದಜಮಿಳನು ನಿನ್ನಅಕ್ಕನ ಮಗನು ಮಗನು ಏನೋ -ರಂಗಯ್ಯ 1

ಕರಿರಾಜ ಕರಿಸಿದನೇ - ದ್ರೌಪದಿದೇವಿಬರದೋಲೆ ಕಳುಹಿದಳೇ ||ಕರುಣದಿಂದಲಿ ಋಷಿಪತ್ನಿಯ ಶಾಪವಪರಿಹರಿಸಿದೆಯಲ್ಲವೋ -ರಂಗಯ್ಯ

ಒಪ್ಪಿಡಿಯವಲಕ್ಕಿಯ -ನಿನಗೆ ತಂದುಒಪ್ಪಿಸಿದವಗೊಲಿದೆ ||
ಒಪ್ಪುವೆ ನಿನಗೆ ಶ್ರೀಪುರಂದರವಿಠಲವರಪ್ಪಂತೆ ಎನ್ನ ಕಾಯೋ -ರಂಗಯ್ಯ 3
****

just scroll down for other devaranama