ಆರಮ್ಮ ಮುರಲಿಯನೂದುವನು
ಮಾರ ಸುಂದರ ಸುಖ ಸಾರುವ ಜಗಕೆ ||ಪ||
ಪುಂಡರೀಕಾಕ್ಷನು ಹಿಂಡು ಗೋವ್ಗಳ ಕಾಯ್ದು
ಕಂಡ ಕಂಡವರನ್ನು ಕರೆಯುತಾನೆ
ಚೆಂಡು ಬುಗರಿ ಗೋಲಿ ಗುಂಡುಗಳನೆ ಕಟ್ಟಿ
ತಂಡ ತಂಡವಾಗಿ ಪೋದನಮ್ಮ ||೧||
ತಾಯಿ ಕಟ್ಟಿರುವಂಥಾ ತೋರ ಬುತ್ತಿಯ ಗಂಟು
ತೂಗುತ ಯಮುನೆಯ ತೀರದಲ್ಲೇ
ತೋರ ಉಪ್ಪಿನಕಾಯಿ ಬುತ್ತಿಗಳನೆ ತಿಂದು
ತೀರಿದವರಿಗೆಲ್ಲಾ ತಾ ಕೊಡುವಾ ||೨||
ಇಂದಿರೇಶನು ಕೊಟ್ಟ ತಿಂದ ಉಪ್ಪಿನಕಾಯಿ
ಆನಂದಪಟ್ಟರು ಗೋಪನಂದನರು
ಹಿಂದಿನ ಪುಣ್ಯವು ಬಂದೊದಗಿತು ಎಂದು
ತಿಂದ ಎಂಜಲನಿಟ್ಟ ಇಂದಿರೇಶ ||೩||
***
Aramma muraliyanuduvanu
mara sundara sukha saruva jagake ||pa||
Pundarikakshanu hindu govgala kaydu
kanda kandavarannu kareyutane
chendu bugari goli gundugalane katti
tanda tandavagi podanamma ||1||
Tayi kattiruvantha tora buttiya gantu
tuguta yamuneya tiradalle
tora uppinakayi buttigalane tindu
tiridavarigella ta koduva ||2||
Indireshanu kotta tinda uppinakayi
anandapattaru gopanandanaru
hindina punyavu bandodagitu endu
tinda enjalanitta indiresha ||3||
***
ಆರಮ್ಮ ಮುರಲಿಯನೂದುವನುಮಾರ ಸುಂದರ ಸುಖ ಸಾರುವ ಜಗಕೆ ಪ
ಪುಂಡರೀಕಾಕ್ಷನು ಹಿಂಡುಗೋವ್ಗಳ ಕಾಯ್ದುಕಂಡ ಕಂಡವರನ್ನು ಕರೆಯುತಾನೆಚೆಂಡು ಬಗರಿ ಗೋಲಿ ಗುಂಡುಗಳನೆ ಕಟ್ಟಿತಂಡ ತಂಡವಾಗಿ ಪೋದನಮ್ಮ 1
ತಾಯಿ ಕಟ್ಟಿರುವಂಥಾ ತೋರ ಬುತ್ತಿಯ ಗಂಟುತೂಗುತ ಯಮುನೆಯ ತೀರದಲ್ಲೇತೋರ ಉಪ್ಪಿನಕಾಯಿ ಬುತ್ತಿಗಳನೆ ತಿಂದುತೀರಿದವರಿಗೆಲ್ಲಾ ತಾ ಕೊಡುವಾ 2
ಇಂದಿರೇಶನು ಕೊಟ್ಟ ತಿಂದ ಉಪ್ಪಿನಕಾಯಿಆನಂದಬಟ್ಟರು ಗೋಪನಂದನರುಹಿಂದಿನ ಪುಣ್ಯವು ಬಂದೊದಗಿತು ಎಂದುತಿಂದ ಎಂಜಲನಿಟ್ಟ ಇಂದಿರೇಶ3
********