Showing posts with label ತನ್ನ ಸ್ಮರಣೆ ತಾನರಿಯದ ಮನವು varaha timmappa. Show all posts
Showing posts with label ತನ್ನ ಸ್ಮರಣೆ ತಾನರಿಯದ ಮನವು varaha timmappa. Show all posts

Friday, 27 December 2019

ತನ್ನ ಸ್ಮರಣೆ ತಾನರಿಯದ ಮನವು ankita varaha timmappa

by ನೆಕ್ಕರ ಕೃಷ್ಣದಾಸ
ಮುಖಾರಿ ರಾಗ ಅಷ್ಟ ತಾಳ

ತನ್ನ ಸ್ಮರಣೆ ತಾನರಿಯದ ಮನವು
ಚಿನುಮಯ ರೂಪನ ಬೆನ್ನವಿಡಿವುದುಂಟೆ ||ಪ||

ಹಾವಿನ ಹೆಜ್ಜೆಯ ಹಾವರಿವಂದದಿ
ಭಾವಿಸಿಕೊಳ್ಳದೆ ತಗ್ಗು ಮುಗ್ಗುಗಳ
ಗೋವಳನಿಲ್ಲದ ಗೋವಿನ ತೆರನಂತೆ
ಜೀವನುಂಗುವ ವ್ಯಾಘ್ರನಗ್ರಕೆ ಸುಳಿಯಲು ||೧||

ಕನ್ನಡಿ ಶುದ್ಧವಾಗಿಯೆ ಕಾಣದ ದೃಷ್ಟಿ
ಚಿನ್ನವಾರಿಕೆಯನ್ನು ಮಾಡುವ ಪರಿಯು
ಧನ್ಯವಾದವರನ್ನು ಕಂಡು ನಗದ ಮನ
ಮನ್ನಣೆಯಿಲ್ಲದ ಮನೆಯೊಳುಂಬರೆ ಹೇಸ ||೨||

ಹೇಳಿದ ಮಾತನು ಕೇಳಿ ಮಾನಸದೊಳು
ಮೇಳವಾಗುವೆನೆಂದು ಖೂಳತನದಿ ಪೋಗಿ
ಕೇಳಿದ ಉತ್ತರಕುತ್ತರ ಹರಿಸದೆ
ಆಳು ಬಾವಿಯ ಹಾರಿ ಹೊಳಚುವ ತೆರನಂತೆ ||೩||

ಕಾಗೆಯು ಗರುಡನ ಸರಿಯೆಂದು ಜೂಜಾಡಿ
ಸಾಗರವನು ಹಾರಿ ನಡುವೆ ಬಿದ್ದಂದದಿ
ಯೋಗಿಯ ಪರಿಯಂತೆ ತಪವೆಂದು ತನ್ನಯ
ಮೂಗ ಮುಚ್ಚಲು ಭವರೋಗ ಹಾರುವುದಂತೆ ||೪||

ಮೀಸಲಿಗೊದಗುವ ಶೇಷಗಿರೀಶನ
ಆಸೆಯ ಗ್ರಾಸವ ಬೇಡಿಕೊಳ್ಳದ ಮನ
ಸಾಸಿರ ವೆಗಡದ ಭಾಂಡದೊಳೋಗರ
ಬೇಯಿಸಿ ಭುಂಜಿಪೆಯೆಂದು ಮೋಸವಾಡುವದಿಂದು ||೫||

ಚಿತ್ರಿಕ ರಚಿಸಿದ ಸೇನೆ ಸೇನೆಗಳಲ್ಲ
ಪ್ರಸ್ತುತಕೊದಗುವುದೆನುತಿಹ ರಾಯನ
ಮುತ್ತಿಕೊಂಡಿಹ ಪರಸೇನೆಯ ಇದಿರೊಳು
ಮೃತ್ಯುದೇವತೆ ಬಂದು ಮೂದಲಿಸುವಳೆಂದು ||೬||

ಮೊಸರನ್ನ ತನ್ನ ಕೈಯೊಳಗಿದ್ದಂತೆ
ಹಸಿವಾದ ವೇಳ್ಯೆದಿ ಹಸಿಯ ಮೆಲ್ಲುವದೇಕೆ
ವಿಷಮವಾಗದೆ ಹರಿ ವರಾಹ ತಿಮ್ಮಪ್ಪನ
ಕುಶಲದಿ ನೆನೆಯಲು ಹಸನದಿ ಸಲಹುವ ||೭||
********