Showing posts with label ಏನೇನ ಮಾಡಿದರೇನು ಫಲವಯ್ಯ purandara vittala. Show all posts
Showing posts with label ಏನೇನ ಮಾಡಿದರೇನು ಫಲವಯ್ಯ purandara vittala. Show all posts

Wednesday, 4 December 2019

ಏನೇನ ಮಾಡಿದರೇನು ಫಲವಯ್ಯ purandara vittala

ಪುರಂದರದಾಸರು
ಏನೇನ ಮಾಡಿದರೇನು ಫಲವಯ್ಯ ಭಾನುಕೋಟಿತೇಜ ಶ್ರೀನಿವಾಸನ ಭಜಿಸದೆ ಪ.

ಹಲವು ಓದಿದರೇನು ಹಲವು ಕೇಳಿದರೇನುಜಲದೊಳ ಮುಳುಗಿ ಕುಳಿತಿದ್ದರೇನುಛಲದಿಂದ ಮುಸುಕಿಟ್ಟು ಬೆರಳನೆಣಿಸಿದರೇನುಚೆಲುವ ದೇವನೊಳು ಎರತವಿಲ್ಲದಾತನ 1

ಅನ್ನ ಜರೆದು ಅರಣ್ಯ ಚರಿಸದರೇನುಉನ್ನತ ವ್ರತಗಳಾಚಾರಿಸಿದರೇನುಚೆನ್ನಗಾತಿಯ ಸಂಗ ಬಿಟ್ಟು ಇದ್ದರೇನುಗಾನ ಲೋಲುನಲಿ ಎರಕವಿಲ್ಲದನಕ 2

ಬತ್ತಲೆ ತಿರುಗಿ ಅವಧೂತನೆನಿಸಿದರೇನುತತ್ವ ವಾಕ್ಯಂಗಳ ಪೇಳಿದರೇನುಚಿತ್ತಜನಯ್ಯ ಶ್ರೀ ಪುರಂದರವಿಠಲನಚಿತ್ತದೊಳಿರಿಸಿ ಒಲಿಸಿಕೊಳ್ಳದನಕ 3
*******