Showing posts with label ನೋಡಿದರೆ ನೋಡು ಮಾತಾಡು ತಾಯಿಗಳೆಂದು achalananda vittala. Show all posts
Showing posts with label ನೋಡಿದರೆ ನೋಡು ಮಾತಾಡು ತಾಯಿಗಳೆಂದು achalananda vittala. Show all posts

Monday, 2 August 2021

ನೋಡಿದರೆ ನೋಡು ಮಾತಾಡು ತಾಯಿಗಳೆಂದು ankita achalananda vittala

ನೋಡಿದರೆ ನೋಡು ಮಾತಾಡು ತಾಯಿಗಳೆಂದು

ನೋಡಿ ಭ್ರಮಿಸಲು ಬೇಡ ಪರಸತಿಯರ ಪ.


ದಾರಿಯೊಳು ಭಯವೆಂದು ಚೋರರೊಳು ಪೋಗುವರೆ

ಗೇರುಬೀಜದ ತೈಲ ಲೇಪಿಸುವರೆ

ಅರಣ್ಯ ಮಧ್ಯದಲಿ ಮೃಗವಿರಲು ತುರಗವೆಂ

ದೇರುವರೆ ಪರಸತಿಯ ಪಾಪಿ ಮನವೆ 1


ಹಸಿಯ ಯಕ್ಕೆಯಕಾಯಿ ನಸುಗುನ್ನಿ ತುರುಚೆಯನು

ತೃಷೆಗೆ ಮೆಲುವರೆ ವ್ಯಸನ ದೋರಿತೆಂದು

ವಿಷವ ಸೇವಿಸಿದಂತೆ ನೋಡಿ ನೀ ಪರಸತಿಯ

ವಿಷಯಕೆಳಸುವುದೇಕೆ ಪಾಪಿ ಮನವೆ 2


ಪ್ರೀತಿಯಿಂದಲಿ ಸತಿಯ ಮನೆಗಾಗಿ ಯಿಂದ್ರನತಿ

ಕಾತುರದಿ ಪೋಗಿ ಮೈತೂತಾದನು

ಸೀತೆಗೋಸುಗವಾಗಿ ರಾವಣನು ತಾ ಕೆಟ್ಟ

ಸೋತು ದ್ರೌಪದಿಗೆ ಕೀಚಕ ಕೆಟ್ಟನು 3

********************4

ಕೆಟ್ಟವರದೃಷ್ಟವಿನ್ನೆಷ್ಟು ಹೇಳಿದರೇನು

ಬಿಟ್ಟು ಬಿಡುವರೆ ತಮ್ಮ ಕೆಟ್ಟ ಗುಣವ

ಕಟ್ಟಿನೊಳಗಿಟ್ಟು ಉತ್ಕøಷ್ಟ ಜನಗಳ ಸಂಗ

ಕೊಟ್ಟು ಸಲಹಯ್ಯ ಅಚಲಾನಂದವಿಠಲ 5

****

* ನುಡಿ 4 ಸಿಕ್ಕಿಲ್ಲ