.. ..by modalakallu sheshadasaru
ವ್ರತವನಲ್ಲದೆ ಅನುವ್ರತ ಮಾಡಬಹುದೇಶತಮುಖ ಸ್ಥಿತನಾದ ದಿವಿಜಪತಿಯ ಪ
ದಾನಶೀಲನೆನಿಸಿ ವಿಬುಧರಿಗೆ ಮೃಷ್ಟಾನ್ನಪಾನಗಳುಂಬೋ ಪಂಕ್ತಿಯಲ್ಲಿ ||ದೀನನೊಬ್ಬನು ಬರಲು ದೋಷಿಯಾದವನೆಂದು ಆನನವ ತಿರುಹುವನೇ ಅವನಿಯೊಳಗೇ 1
ಅನ್ನ ಕಾರಣವಾದ ಪರ್ಜನ್ಯದಿಂದಲಿ ಸಕಲಜನರನು ಪರಿತೋಷ ಬಡಿಸಿ ಕೃಪದಿ ||ಚೆನ್ನಿಗನೆ ಈ ಅಲ್ಪ ಪ್ರಾದೇಶಸ್ಥಿತರನ್ನುಬನ್ನ ಬಡಿಸುವರೇನೊ ಘನ್ನ ಮಹಿಮಾ 2
ಭಕ್ತವತ್ಸಲನೆಂಬೊ ಬಿರುದು ನಿನಗೆ ಉಂಟೆಸಖತನದಿ ಬಿನ್ನೈಪೆ ಸಾರ್ವಭೌಮ ||ಭಕುತ ಸುರಧೇನು ಗುರು ವಿಜಯ ವಿಠಲರೇಯಉಕುತಿ ಲಾಲಿಸಿ ವೃಷ್ಟಿಗರಿವುದು ಕರುಣದಲಿ 3
****