Showing posts with label ಅಕ್ಕರವುಳ್ಳ ನಮ್ಮಕ್ಕ ರುಕ್ಮಿಣಿ ಕೇಳೆ ರಕ್ಕಸಾಂತಕ ಕೃಷ್ಣ ಮತ್ತೆಲ್ಲೆ ಪೋದ bheemesha krishna. Show all posts
Showing posts with label ಅಕ್ಕರವುಳ್ಳ ನಮ್ಮಕ್ಕ ರುಕ್ಮಿಣಿ ಕೇಳೆ ರಕ್ಕಸಾಂತಕ ಕೃಷ್ಣ ಮತ್ತೆಲ್ಲೆ ಪೋದ bheemesha krishna. Show all posts

Tuesday, 1 June 2021

ಅಕ್ಕರವುಳ್ಳ ನಮ್ಮಕ್ಕ ರುಕ್ಮಿಣಿ ಕೇಳೆ ರಕ್ಕಸಾಂತಕ ಕೃಷ್ಣ ಮತ್ತೆಲ್ಲೆ ಪೋದ ankita bheemesha krishna

ಪುರಾಣ

ಅಕ್ಕರವುಳ್ಳ ನಮ್ಮಕ್ಕ ರುಕ್ಮಿಣಿ ಕೇಳೆ

ರಕ್ಕಸಾಂತಕ ಕೃಷ್ಣ ಮತ್ತೆಲ್ಲೆ ಪೋದ 1

ಸತ್ಯಭಾಮೆಯೆ ನಿನ್ನ ಚಿತ್ತದ್ವಲ್ಲಭ

ನೀರೊಳು ಪೊಕ್ಕು ವೇದವ ತಂದು ಪುತ್ರಗಿಡಹೋದ 2

ಪನ್ನಂಗಶಯನ ಲಾವಣ್ಯರೂಪನು

ಎನ್ನ ಕಣ್ಣಿಗೆ ಮರೆಯಾಗಿ ಇನ್ನೆಲ್ಲೆ ಹೋದ 3

ನಿನ್ನ ಪತಿ ಶರಧಿಯೊಳು ಬೆನ್ನಲಿ ಗಿರಿಯೆತ್ತಿ

ತನ್ನ ಭಕ್ತರಿಗೆ ಸುಧೆಯ ನೀಡಲು ಹೋದ 4

ವನಜನಾಭನ ಕಾಣದೆ ಘನಕ್ಲೇಶದಿಂದೀಗ

ಮನದ ವಿರಹತಾಪವನು ಸೈರಿಸಲ್ಹ್ಯಾಗೆ 5

ಅವನಿ ಕದ್ದವನ ಸಂಹರಿಸಿ ಕೋರೆಗಳಿಂದ

ಭುವನಾಧಿಪತಿಯು ಬರುವನೆ ಸತ್ಯಭಾಮೆ 6

ಹಂಬಲ ಬಿಡದರವಿಂದನೇತ್ರನ ಬಿಟ್ಟು

ಸುಂದರಾಂಗನ ಕರೆತಂದು ತೋರೆನಗೆ 7

ಕಂಬದಿಂದೊಡೆದು ಕಂದನ ತಂದೀ(ದೆಯ?) ಕರುಳ್ಹಾರ

ಕಂದರದಿ ಧರಿಸಿ ತಾ ಬಂದನು ಭಾಮೆ 8

ಸೃಷ್ಟಿಕರ್ತನುಯೆನ್ನ ದಿ(ದೃ?) ಷ್ಟಿಂದೆ ನೋಡದೆ

ಎಷ್ಟು ಹೇಳಲೆ ಪ್ರಾಣ ಬಿಟ್ಟು ಹೋಗುವುದೆ 9

ಪುಟ್ಟ ಬ್ರಾಹ್ಮಣನಾಗಿ ದಿಟ್ಟತನದಲಿ ದಾನವ

ಕೊಟ್ಟ ಬಲಿ ಪಾತಾಳಕೆ ಮೆಟ್ಟಿ ಬಾಹುವನೆ 10

ತ್ವರಿತದಿಂದಲಿ ಯಾದವರರಸು ಶ್ರೀಕಾಂತನ

ಸರಸವಾಡಲೀಗ ಕರೆಸಿ ತೋರೆನಗೆ 11

ಅರಸರ ಕುಲವ ಸಂಹರಿಸಿ ಕ್ಷತ್ರೇರನೆಲ್ಲ

ನಿರುತ ನಿಷ್ಠೆಯಲಿ ತಪ ಚರಿಸಿ ಬಾಹುವನೆ 12

ಹೇಮಪುತ್ಥಳಿಗೊಂಬೆ ಸಾಮಜವರದನ

ಆ ಮಾಸುರರೊಡೆಯ ಮೇಘಶ್ಯಾಮನ ತೋರೆ13

ಮಾಡಿ ಯುದ್ಧವ ಲಂಕಾ ನೋಡಿ ದಶಶಿರವ

ಚೆಂಡಾಡಿ ಜಾನಕಿಯ ಒಡಗೂಡಿ ಬಾಹುವನೆ 14

ವಾಸುದೇವನ ಕಾಣದೊಂದರಘಳಿಗೀಗ

ನಾಲ್ಕು ಯುಗವಾಗಿ ತೋರುವುದೆನ್ನ ಮನಕೆ 15

ಶ್ರೀಶ ತಾ ಸೋಳಸಾಸಿರ ಮಂದಿ ಸತಿಯೇರ ವಿ-

ಲಾಸದಿಂದಿದ್ದನೀಗಿಂದೀವರಾಕ್ಷ 16

ಸಿರಿವೊಬ್ಬಳಲ್ಲದೆ ಪರನಾರಿಯರ ಕಣ್ಣು

ತೆರೆದು ನೋಡುವ ತಾ ಭೂರಮಣನೆಲ್ಲಿಹನೆ 17

ಖರೆಯವೀಮಾತು ತ್ರಿಪುರದ ಸತಿಯರ ಲಜ್ಜೆ

ತೊರೆದು ಕೂಡಿದನೆಂಬೋದು ಪರಮ ಮೋಹಕವೆ18

ನಾಡೊಳಗಧಿಕಶ್ವಾರೂಢ ರುಕ್ಮಿಣೀಕಾಂತನ

ನೋಡದÉನಜೀವ ನಿಲ್ಲದು ನೀರಜಾಕ್ಷಿ 19

ಬೇಡಿಕೊಂಬುವೆನೆಂ(ಯೆ?)ದು ಭೀಮೇಶಕೃಷ್ಣನ

ಕೂಡಿಸುವೆನೆ ಕರೆತಂದು ಕಮಲಾಕ್ಷಿ 20

****