check same type devaranama by purandaradasaru
ರಾಗ ನಾದನಾಮಕ್ರಿಯೆ ಛಾಪುತಾಳ
ಕಾಳಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ||ಪ||
ಸತ್ಯಕ್ಕೆ ಧರ್ಮನು ಲೆತ್ತವನಾಡಲು
ಅರ್ಧ ಭಾಂಡಾರವೆಲ್ಲವ ಸೋತು
ಮತ್ತೆ ವಿರಾಟರಾಯನ ಮನೆಯಲ್ಲಿ
ತೊತ್ತಾದಳು ದ್ರೌಪದಿ ಒಂದು ವರುಷ ||೧||
ಪುಂಡರೀಕಾಕ್ಷ ಪುರುಷೋತ್ತಮ ಹರಿಯು
ಬಂಡಿಬೋವನಾದ ಪಾರ್ಥನಿಗೆ ಭೂ -
ಮಂಡಲನಾಳುವ ಹರಿಶ್ಚಂದ್ರರಾಯನು
ಕೊಂಡವ ಕಾಯಿದನು ಹೊಲೆಯನಾಳಾಗಿ ||೨||
ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಾಗಿಲ ಕಾಯ್ವರು
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಗೋಣ ಮೇಲೆತ್ತುವರು ||೩||
ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ
ಬೆಂಬಲದಲಿ ನಲಿನಲಿವುತಿಹರು
ಬೆಂಬಲತನ ತಪ್ಪಿ ಬಡತನ ಬಂದರೆ
ಇಂಬು ನಿನಗಿಲ್ಲ ನಡೆಯೆಂಬರು ||೪||
ಏರುವ ದಂಡಿಗೆ ನೂರಾಳು ಮಂದಿಯು
ಮೂರುದಿನದ ಭಾಗ್ಯವು ಝಣಝಣವು
ನೂರಾರು ಸಾವಿರ ದಂಡವ ತೆತ್ತರೆ
ರಂಗವಿಠಲನನೆ ಸರಿಯೆಂಬೊರಯ್ಯ ||೫||
*********
ಕಾಳಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ||ಪ||
ಸತ್ಯಕ್ಕೆ ಧರ್ಮನು ಲೆತ್ತವನಾಡಲು
ಅರ್ಧ ಭಾಂಡಾರವೆಲ್ಲವ ಸೋತು
ಮತ್ತೆ ವಿರಾಟರಾಯನ ಮನೆಯಲ್ಲಿ
ತೊತ್ತಾದಳು ದ್ರೌಪದಿ ಒಂದು ವರುಷ ||೧||
ಪುಂಡರೀಕಾಕ್ಷ ಪುರುಷೋತ್ತಮ ಹರಿಯು
ಬಂಡಿಬೋವನಾದ ಪಾರ್ಥನಿಗೆ ಭೂ -
ಮಂಡಲನಾಳುವ ಹರಿಶ್ಚಂದ್ರರಾಯನು
ಕೊಂಡವ ಕಾಯಿದನು ಹೊಲೆಯನಾಳಾಗಿ ||೨||
ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಾಗಿಲ ಕಾಯ್ವರು
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಗೋಣ ಮೇಲೆತ್ತುವರು ||೩||
ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ
ಬೆಂಬಲದಲಿ ನಲಿನಲಿವುತಿಹರು
ಬೆಂಬಲತನ ತಪ್ಪಿ ಬಡತನ ಬಂದರೆ
ಇಂಬು ನಿನಗಿಲ್ಲ ನಡೆಯೆಂಬರು ||೪||
ಏರುವ ದಂಡಿಗೆ ನೂರಾಳು ಮಂದಿಯು
ಮೂರುದಿನದ ಭಾಗ್ಯವು ಝಣಝಣವು
ನೂರಾರು ಸಾವಿರ ದಂಡವ ತೆತ್ತರೆ
ರಂಗವಿಠಲನನೆ ಸರಿಯೆಂಬೊರಯ್ಯ ||೫||
*********