Showing posts with label ನೋಡಿದೆ ನಾನೀಗ ಗುರುರಾಜನ ಬೇಗ krishnavittala. Show all posts
Showing posts with label ನೋಡಿದೆ ನಾನೀಗ ಗುರುರಾಜನ ಬೇಗ krishnavittala. Show all posts

Monday, 6 September 2021

ನೋಡಿದೆ ನಾನೀಗ ಗುರುರಾಜನ ಬೇಗ ankita krishnavittala

 ರಾಗ: [ಭೈರವಿ] ತಾಳ: [ಆದಿ]


ನೋಡಿದೆ ನಾನೀಗ ಗುರುರಾಜನ ಬೇಗ


ನೋಡಿ ಕೊಂಡಾಡಿ ಪಾಡಿ ಬೇಡುವೆನೀಗ ಅ.ಪ


ಕರದೊಳು ದಂಡ ಕಮಂಡಲು ಪಿಡಿದಿಹ

ಕೊರಳೊಳು ತುಳಸಿ ಹಾರವ ಧರಿಸಿಹ

ನರರ ಸೇವೆಯಕೊಳ್ವ ನರಹರಿಪ್ರೀಯನ

ಕರುಣಾಸಾಗರ ನಮ್ಮ ಗುರು ರಾಘವೇಂದ್ರನ 1

ಕಲಿಕಲ್ಮಷದೂರ ಕುಜನಕುಠಾರನ

ಸುಲಲಿತ ಕರುಣಾಬ್ಧಿ ಬುಧಜನವಂದ್ಯನ

ಒಲಿದು ಭಕ್ತರ ಕಾಯ್ವ ಕಾರುಣ್ಯಶೀಲನ

ಜಲಜನಾಭನ ಪಾದ ಭಜಿಪ ಗುರುರಾಜನ 2

ಕಾಮಿತಗಳನೀವ ವರಕಾಮಧೇನುವೆ

ನೇಮದಿಂಭಜಿಪರ್ಗೆ ಚಿಂತಾಮಣಿಯೆನಿಪನ

ಕೋಮಲಾಂಗ ಸಿರಿಕೃಷ್ಣವಿಠಲನಪಾದ

ಪ್ರೆಮದಿಂಪೂಜಿಪ ಗುರು ರಾಘವೇಂದ್ರರ 3

***