Showing posts with label ಶುಭದ ಸುಂದರಕಾಯಾ ವಿಬುಧ jagannatha vittala suladi ಹರಿ ಮಹಿಮಾ ಸುಳಾದಿ SHUBHADA SUNDARAKAAYA VIBHUDA HARI MAHIMA SULADI. Show all posts
Showing posts with label ಶುಭದ ಸುಂದರಕಾಯಾ ವಿಬುಧ jagannatha vittala suladi ಹರಿ ಮಹಿಮಾ ಸುಳಾದಿ SHUBHADA SUNDARAKAAYA VIBHUDA HARI MAHIMA SULADI. Show all posts

Monday, 9 December 2019

ಶುಭದ ಸುಂದರಕಾಯಾ ವಿಬುಧ jagannatha vittala suladi ಹರಿ ಮಹಿಮಾ ಸುಳಾದಿ SHUBHADA SUNDARAKAAYA VIBHUDA HARI MAHIMA SULADI

Audio by Mrs. Nandini Sripad

ಶ್ರೀ ಜಗನ್ನಾಥದಾಸಾರ್ಯ ವಿರಚಿತ 

 ಶ್ರೀಹರಿ ಮಹಿಮಾ ಸುಳಾದಿ 

 ರಾಗ ಅಭೋಗಿ 

 ಧ್ರುವತಾಳ 

ಶುಭದ ಸುಂದರಕಾಯಾ ವಿಬುಧ ಸನ್ಮುನಿಗೇಯಾ
ಅಬುಜ ಜಾಂಡೋದರ ನಿರ್ವಿಕಾರ
ತ್ರಿಭುವನಾತ್ಮ ಭಾವನ ತ್ರಿಗುಣಾತೀತ ನಿತ್ಯ ದು -
ರ್ಲಭ ದುರ್ವಿಭಾವ್ಯ ದೂರೀಕೃತ ದುರಿತ
ನಭಗವರ ವಾಹನ್ನ ನಳಿನಲೋಚನ ಚನ್ನ
ಇಭರಾಜವರದ ಇಂದಿರೆ ಅರಸ
ಉಭಯ ಸ್ಥಾನದಿ ವ್ಯಾಪ್ತ ತತ್ತದ್ದೋಷ ನಿರ್ಲಿಪ್ತ
ಸಭೆಯೊಳು ದ್ರೌಪತಿಯ ಕಾಯ್ದ ಕರುಣಿ
ನಿಬಿಡ ಪಂಕದಿ ಶಿಗಬಿದ್ದು ಬನ್ನಬಡುವ
ಅಬಲರ ಉದ್ಧರಿಸೊ ಅಬುಧಿಶಯನ
ಸುಭುಜನಾಮಕ ಜಗನ್ನಾಥವಿಠ್ಠಲ ನಿನ -
ಗಭಿವಂದಿಸುವೆ ಎನಗಭಯವಿತ್ತು ಸಲಹೊ ॥ 1 ॥

 ಮಟ್ಟತಾಳ 

ಪ್ರತಿಪ್ರತಿ ಕಲ್ಪಸ್ಥ ಪ್ರತಿಪ್ರತಿ ಜೀವರಿಗೆ
ಪ್ರತಿಪ್ರತಿ ಯುಗಗಳಲಿ ಪ್ರತಿಪ್ರತಿ ದೇಹಕ್ಕೆ
ಕೃತ ಕರ್ಮಗಳರಿತು ಪಿತ ಜನನಿ ಭ್ರಾತ
ಸತಿಸುತ ಮುಂತಾದ ಇತರ ಜನರೊಳಿದ್ದು
ಗತಿ ತಪ್ಪಲಿಗೊಡದೆ ಒಬ್ಬೊಬ್ಬರೊಳಗೆ
ಹಿತವನೆ ಪುಟ್ಟಿಸಿ ಪೋಷ್ಯ ಪೋಷಕನೆನಿಸಿ
ವೃತತಿಜಾಂಡವ ಪೊರೆವೆ ನಿರ್ವ್ಯಾಜದಿ ನಿರುತ
ಪತಿತಪಾವನ ಜಗನ್ನಾಥವಿಠ್ಠಲ ನಿನ್ನಾ - 
ದ್ಭುತ ಮಹಿಮೆಯ ತಿಳಿಯೆ ಶತಮೋದಗೊಶವೇ ॥ 2 ॥

 ತ್ರಿವಿಡಿತಾಳ 

ಕಂಥಪಟಗಳಿಗೆ ತಂತು ಜೋಡಿಸಿದಂತೆ
ಪಿಂತೆ ಮಾಡಿದ ಕರ್ಮ ತಂತುಗಳಿಂದಲಿ
ಅಂತವಿಲ್ಲದ ಜೀವ ತಿಂತಿಣಿಗಳ ಕಟ್ಟಿ
ಸಂತೆ ನೆರಹಿ ಜನರ ಅಂತರಂಗದಿ ನೆಲಿಸಿ
ಕಾಂತೆರೊಡನೆ ರಮಿಸಿ ಸಂತೋಷಗಳನೀವೆ
ಸಂತರಿಗೆ ಸರ್ವ ಕಾಲದಲಿ
ಎಂತೆಂತು ಸೇವಿಪ ಜಂತುಗಳಿಗೆ ಗತಿ
ಪ್ರಾಂತಕ್ಕೆ ಕೊಡುವೆ ಶ್ರೀಕಾಂತ ನೀನು
ಇಂಥ ವ್ಯಾಪಾರ ನೀ ಮಾಡುತ ಇರಲಾಗಿ
ಚಿಂತೆ ಬಡುವದ್ಯಾಕೊ ಜೀವರಿಗೆ
ಹೊಂತಕಾರಿ ಜಗನ್ನಾಥವಿಠ್ಠಲ ಬ್ರಹ್ಮ
ಕಂತುಹರಾದ್ಯರ ಸ್ವಾಂತಕ್ಕೆ ನಿಲುಕೆ ॥ 3 ॥

 ಅಟ್ಟತಾಳ 

ಆರಿಗೆ ಚಿಂತಿಸಲಾರಿಗೋಸುಗ ಪೋಗಿ
ಆರಿಗಾಲ್ಪರಿಯಲಿ ಆರೆನ್ನ ಸಲಹುವ -
ರಾರಿವರೆನಗೆ ನಾನಾರು ಜೀವರಿಗೆ ಸ -
ರೋರುಹ ಭವನ ಸುಚಾರು ಸೃಷ್ಟಿಯೊಳಗೆ
ದಾರುಕ ನಾನೋರ್ವ ಭಾರಕರ್ತನು ನೀನೇ
ಈರೇಳು ಭುವನ ವ್ಯಾಪಾರ ಮಾಡುವ ಸರ್ವ -
ಧಾರ ನೀನಿರೆ ಬಡಿವಾರವ್ಯಾಕೆನಗೆ ರ -
ಮಾರಮಣನೆ ಜಗನ್ನಾಥವಿಠ್ಠಲ ಪರಿ - 
ವಾರ ನಿನ್ನದು ಕಾಯೊ ಕಾರುಣ್ಯನಿಧಿ ಬೇಗ ॥ 4 ॥

 ಆದಿತಾಳ 

ಏಸೇಸು ಕಲ್ಪದಲ್ಲಿ ಶ್ರೀಸತ್ಯಾದಿ ಜಗತ್ತು
ಈಶಾವಾಸ್ಯವೆಂದು ಭೂಸುರೋತ್ತಮರು ಪೇಳ್ವ
ರೈಸೇ ಅನ್ಯಥಾ ಉಂಟೆ ವಾಸುದೇವನೆ ಜೀವ
ರಾಶಿಗಳೊಳಗಿದ್ದು ದೋಷಫಲಗಳುಣಿಸ -
ಲೋಸುಗ ಸ್ಥೂಲದೇಹ ನೀ ಸಂಬಂಧಿಸಿ ಹೃದಯಾ -
ಕಾಶದೊಳು ನೀನಿದ್ದು ಕ್ಲೇಶ ಸುಖಗಳೀವೆ
ನೀ ಸ್ವತಂತ್ರನಾಗಿ ಅಜಭವ ಸುರಾದಿಗಳಾ -
ಯಾಸವಿಲ್ಲದೆ ಪೊರೆವೆ ಶಾಶ್ವತ ಮೂರುತಿ
ವಾಸವಾನುಜ ಜಗನ್ನಾಥವಿಠ್ಠಲ ನಿನ್ನ
ದಾಸನ ಅಪರಾಧ ಲೇಶ ನೋಡದೆ ಕಾಯೊ ॥ 5 ॥

 ಜತೆ 

ಅನಂತ ಜೀವರು ನಿನ್ನಾಧೀನರೋ ಶ್ರೀ ಜ - 
 ಗನ್ನಾಥವಿಠ್ಠಲ ಪ್ರಪನ್ನವತ್ಸಲ ನೀನೂ ॥
**************



ಶ್ರೀ ಜಗನ್ನಾಥದಾಸಾರ್ಯ ವಿರಚಿತ ಸುಳಾದಿ 
 ರಾಗ ಅಭೋಗಿ 
 ಧ್ರುವತಾಳ 

ಶುಭದ ಸುಂದರಕಾಯಾ ವಿಬುಧ ಸನ್ಮುನಿಗೇಯಾ
ಅಬುಜ ಜಾಂಡೋದರ ನಿರ್ವಿಕಾರ
ತ್ರಿಭುವನಾತ್ಮ ಭಾವನ ತ್ರಿಗುಣಾತೀತ ನಿತ್ಯ ದು -
ರ್ಲಭ ದುರ್ವಿಭಾವ್ಯ ದೂರೀಕೃತ ದುರಿತ
ನಭಗವರವಾಹನ ನಳಿನ ಲೋಚನ ಚನ್ನ
ಇಭರಾಜವರದ ಇಂದಿರೆಯರಸ
ಉಭಯ ಸ್ಥಾನದಿ ವ್ಯಾಪ್ತ ತತ್ತದ್ದೋಷ ನಿರ್ಲಿಪ್ತ
ಸಭೆಯೊಳು ದ್ರೌಪದಿಯ ಕಾಯ್ದ ಕರುಣಿ
ನಿಬಿಡ ಕರ್ಮಪಂಕದಿ ಶಿಗಬಿದ್ದು ಬನ್ನಬಡುವ
ಅಬಲರನುದ್ಧರಿಸುವ ಅಬುಧಿಶಯನ
ಸುಭುಜನಾಮಕ ಜಗನ್ನಾಥವಿಠ್ಠಲ ನಿನ -
ಗಭಿವಂದಿಸುವೆ ಎನಗಭಯವಿತ್ತು ಸಲಹೊ ॥ 1 ॥

ಮಟ್ಟತಾಳ 

ಪ್ರತಿ ಪ್ರತಿ ಕಲ್ಪಸ್ಥ ಪ್ರತಿ ಪ್ರತಿ ಜೀವರಿಗೆ
ಪ್ರತಿ ಪ್ರತಿ ಯುಗಗಳಲ್ಲಿ ಪ್ರತಿ ಪ್ರತಿ ದೇಹಕ್ಕೆ
ಕೃತ ಕರ್ಮಗಳರಿತು ಪಿತ ಜನನಿ ಭ್ರಾತ
ಸತಿಸುತ ಮುಂತಾದ ಇತರ ಜನರೊಳಿದ್ದು
ಗತಿ ತಪ್ಪಲಿಗೊಡದೆ ಒಬ್ಬೊಬ್ಬರೊಳಗೆ
ಹಿತವನೆ ಪುಟ್ಟಿಸಿ ಪೋಷ್ಯ ಪೋಷಕನೆನಿಸಿ
ವೃತತಿಜಾಂಡ ಪೊರೆವೆ ನಿರ್ವಾಜದಿ ನಿರುತ
ಪತಿತಪಾವನ ಜಗನ್ನಾಥವಿಠ್ಠಲ ನಿನ್ನ - 
ದ್ಭುತ ಮಹಿಮೆಯ ತಿಳಿಯೆ ಶತಮೋದಗೊಶವೇ ॥2॥

ತ್ರಿವಿಡಿತಾಳ 

ಕಂಥ ಪಟಂಗಳಿಗೆ ತಂತು ಜೋಡಿಸಿದಂತೆ
ಪಿಂತೆ ಮಾಡಿದ ಕರ್ಮ ತಂತುಗಳಿಂದಲಿ
ಅಂತವಿಲ್ಲದೆ ಜೀವ ತಿಂತಿಣಿಗಳ ಕಟ್ಟಿ
ಸಂತೆ ನೆರಹಿ ಜನರ ಅಂತರಂಗದಿ ನೆಲೆಸಿ
ಕಾಂತೇರೊಡನೆ ರಮಿಸಿ ಸಂತೊಷಗಳನೀವೆ
ಸಂತರಿಗೆ ಸರ್ವ ಕಾಲದಲಿ
ಎಂತೆಂತು ಸೇವಿಪ ಜಂತುಗಳಿಗೆ ಗತಿ
ಪ್ರಾಂತ್ಯಕ್ಕೆ ಕೊಡುವೆ ಶ್ರೀಕಾಂತ ನೀನು
ಇಂಥ ವ್ಯಾಪಾರ ನೀ ಮಾಡುತ ಇರಲಾಗಿ
ಚಿಂತೆ ಬಡುವುದ್ಯಾಕೊ ಜೀವರಿಗೆ
ಹೊಂತಕಾರಿ ಜಗನ್ನಾಥವಿಠ್ಠಲ ಬ್ರಹ್ಮ
ಕಂತುಹರಾದ್ಯರ ಸ್ವಾಂತಕ್ಕೆ ನಿಲುಕೆ ॥ 3 ॥

ಅಟ್ಟತಾಳ 

ಆರಿಗೆ ಚಿಂತಿಸಲಾರಿಗೋಸುಗ ಪೋಗಿ
ಆರಿಗಾಲ್ಪರಿಯಲಿ ಆರೆನ್ನ ಸಲಹುವ -
ರಾರಿವರೆನಗೆ ನಾನಾರು ಜೀವರಿಗೆ ಸ -
ರೋರುಹ ಭವನ ಸುಚಾರು ಸೃಷ್ಟಿಯೊಳಗೆ
ದಾರುಕ ನಾನೋರ್ವ ಭಾರಕರ್ತನೇನೊ
ಈರೇಳು ಲೋಕ ವ್ಯಾಪಾರ ಮಾಡುವ 
ಸರ್ವಾಧಾರ ನೀನಿರೆ ಬಡಿವಾರವ್ಯಾಕೆನಗೆ 
ರಮಾರಮಣ ಜಗನ್ನಾಥವಿಠ್ಠಲ ಪರಿ - 
ವಾರ ನಿನ್ನದು ಕಾಯೊ ಕಾರುಣ್ಯನಿಧಿ ಬೇಗ ॥ 4 ॥

ಆದಿತಾಳ 

ಏಸೇಸು ಕಲ್ಪದಲ್ಲಿ ತ್ರಿಸತ್ವಾದಿ ಜಗತ್ತು
ಈಶಾವಾಸ್ಯವೆಂದು ಭೂಸುರೋತ್ತಮರು ಪೇಳ್ವ
ರೈಸೇ ಅನ್ಯಥಾ ಉಂಟೆ ವಾಸುದೇವನೆ ಜೀವ
ರಾಶಿಗಳೊಳಗಿದ್ದು ದೋಷಫಲಗಳುಣಿಸ -
ಲೋಸುಗ ಸ್ಥೂಲದೇಹ ನೀ ಸಂಬಂಧಿಸಿ ಹೃದಯಾ -
ಕಾಶದೊಳು ನೀನಿದ್ದು ಕ್ಲೇಶ ಸುಖಗಳೀವೆ
ನೀ ಸ್ವತಂತ್ರನಾಗಿ ಅಜಭವ ಸುರಾದಿಗಳಾ -
ಯಾಸವಿಲ್ಲದೆ ಪೊರೆವೆ ಶಾಶ್ವತ ಮೂರುತಿ
ವಾಸವಾನುಜ ಜಗನ್ನಾಥವಿಠ್ಠಲ ನಿನ್ನ
ದಾಸನ ಅಪರಾಧ ಲೇಶ ನೋಡದೆ ಕಾಯೊ ॥ 5 ॥

ಜತೆ 

ಅನಂತ ಜೀವರು ನಿನ್ನಾಧೀನರೊ ಶ್ರೀ ಜ -
ಗನ್ನಾಥವಿಠ್ಠಲ ಪ್ರಪನ್ನವತ್ಸಲ ನೀನು ॥

https://drive.google.com/file/d/1_LI4dNGNQ1vtQTzBMjEiUOu_mbcWkLl3/view?usp=drivesdk
********