ಬಿಡೆನೊ ನಿನ್ನ ಚರಣಕಮಲವ ಎನ್ನ ।।ಪ॥
ಹೃದಯಮಧ್ಯದೊಳಿಟ್ಟು ಭಜಿಸುವೆ ಅನುದಿನ ।।ಅ.ಪ॥
ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವ
ನಳಿನೋದ್ಭವ ಬಂದು ಪಾದವ ತೊಳೆಯೆ
ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ
ಹರಿಪಾದ ತೀರ್ಥವೆಂದು ಹರ ಧರಿಸಿದನಾಗ ।।೧।।
ಆ ಪತಿಶಾಪದಿ ಅಹಲ್ಯೆ ಸಾಸಿರ ಯುಗ
ಪಾಷಾಣವಾಗುತ್ತ ಪಥದೊಳಗಿರಲು
ಶ್ರೀಪತಿ ನಿನ್ನಯ ಶ್ರೀಪಾದ ಸೋಕಲು
ಪಾಪರಹಿತಳಾಗಿ ಪದವಿ ಕಂಡಳಾಗ ।।೨।।
ವಜ್ರಾಂಕುಶಧ್ವಜ ಪದುಮ ರೇಖೆಗಳಿಂದ
ಪ್ರಜ್ವಲಿಸುವ ನಿನ್ನ ಪಾದಪದ್ಮವನು
ಗರ್ಜಿಸಿ ಭಜಿಸುವೆ ಹಯವದನನೆ ಭವ-
ಜರಜರ ಬಿಡಿಸುವನೆಂದು ನಂಬಿಹೆನಾಗಿ ।।೩।।
****
ರಾಗ : ಕಲ್ಯಾಣಿ (audio raga, tala may differ)
Bideno ninna charanakamalava enna ||pa||
Hrudayamadhyadolittu Bajisuve anudina ||a.pa||
Baliya danava bedi aleye brahmandava
Nalinodbava bandu padava toleye
Ugurina koneyinda udisidala gange
Haripada tirthavendu hara dharisidanaga ||1||
A patisapadi ahalye sasira yuga
Pashanavagutta pathadolagiralu
Sripati ninnaya sripada sokalu
Paparahitalagi padavi kandalaga ||2||
Vajrankusadhvaja paduma rekegalinda
Prajvalisuva ninna padapadmavanu
Garjisi Bajisuve hayavadanane Bava-
Jarajara bidisuvanendu nambihenagi ||3||
***