ಟೀಕಾಕೃತ್ಪಾದ ಕರುಣಾಕರ ಗುರು
ಶ್ರೀಕಾರಸರಿತವಾಸ
ನಾಕಾಧಿಪನೆ ಮನಶೋಕಾ ಹರಿಸಿ
ನೀ ಕಾಪಾಡುವುದು ನಿತ್ಯ 1
ಪೂರ್ಣಬೋಧರ ಮತಾರ್ಣವಚಂದಿರ
ನಿರ್ಣಯಿಸಿದೆ ಟೀಕಾರ್ಣವದೊಳು ಸುಧ
ಉಣ್ಣಿಸಿದೆಯೊ ಗ್ರಂಥ ವರ್ಣಿಸಿಇರುವೆ ಸತ್ಯ 2
ಮಿಥ್ಯಾವಾದಿಗಳ ಸತ್ಯ ತತ್ತ್ವವೆಲ್ಲ ಕತ್ತರಿಸಿದೆ ನಿತ್ಯ
ಎತ್ತ ನೋಡಲು ತಲೆ ಎತ್ತದಂತೆ
ದೈತ್ಯೋನ್ಮತ್ತರನೆಲ್ಲಾ ಸದೆದೆ3
ನಾಕಾಪತಿಗೆ ದೈತ್ಯಲೋಕಗಳಾ ಬಾಧೆ
ತಾ ಕಳೆಯಲು ನಿತ್ಯ
ಶ್ರೀಕರದಮೃತವ ಶ್ರೀಕಾಂತನಿತ್ತಂತೆ
ನೀ ಸುಧೆಯನು ತಂದೆ 4
ದಶಪ್ರಮತಿಸುಶಾಸ್ತ್ರಶರಧಿಯೊಳು
ವಾಸಿಸುವೆಯೊ ನಿತ್ಯ
ಮೀಸಲಮನ ಕೊಟ್ಟೆನ್ನಾಸೆಯ ಹ
ರಿಸಿ ಪದಸೇವೆಯ ಕೊಡೊ ನಿತ್ಯ5
ಪಾಕಶಾಸನ ಸುಖ ಬೇಕಾಗಿ ತೊರೆದು ನೀ
ನೇಕಾಂತದಲಿ ನಿಂತೇ
ಲೋಕಸುಖದಿ ಭವಶೋಕದಲ್ಲಿಹ ಎ
ನ್ನ ಕಾಪಾಡುವುದು ನಿತ್ಯ6
ಶೇಷಾವೇಶ ಆವೇಶಾಮಹಿಮ ಎನ್ನ
ದೋಷರಾಶಿಯ ಕಳೆದು
ಶೋಷಿಸು ಮನಕಲ್ಮಷವಿಷವನೆಲ್ಲ ನಿ
ಶ್ಶೇಷವ ಮಾಡಿ ಸಲಹೊ 7
ಹಲವು ವಿಷಯದ ಹಂಬಲದಿಂದ ಎನ್ನ e್ಞÁನ
ಹೊಲಬುಗೆಟ್ಟುದು ನಿತ್ಯ
ಅಲವಬೋಧರ ತತ್ತ್ವ ಲವಮಾತ್ರವಾದರು
ನೀ ಎನಗೆ ಪಾಲಿಸೊ8
ಮುಕ್ತಿಮಾರ್ಗಕೆ e್ಞÁನಭಕ್ತಿವೈರಾಗ್ಯಗುರು
ಭಕ್ತಿಯೆ ಮುಖ್ಯಕಾರಣ
ಯುಕ್ತಶಾಸ್ತ್ರ ಪ್ರಸಕ್ತಿ ಇಲ್ಲದ ತ್ವ
ದ್ಭಕ್ತನಾದೆನ್ನ ಸಲಹೊ9
ಅಕ್ಷೋಭ್ಯ ಕಟಾಕ್ಷದಿ ಯತಿ ಹ
ರ್ಯಕ್ಷನಾಗಿಹೆ ದೀಕ್ಷಾ
ಶಿಕ್ಷೆಮಾಡಿ ಪರಪಕ್ಷವಾದಿಗಳನ್ನು ಸ
ತ್ಶಿಕ್ಷಕನಾಗಿ ಮೆರೆದೆ10
ಮರುತಾಂತರ್ಗತ ಶ್ರೀ ವೇಂಕಟೇಶನ ಪಾದ
ಚರಣಕಮಲಮಧುಪ
ನಿರುತ ನೀ ಕರುಣಿಸು
ಉರಗಾದ್ರಿವಾಸವಿಠಲನ ನಿಜದಾಸ 11
****