Showing posts with label ಆರುತಿ ಬೆಳಗಿರೆ ಕೇಶವ ಮೂರ್ತಿಗೆ ಪಾರಾಯಣ ಮಾಡಿ madhwesha krishna. Show all posts
Showing posts with label ಆರುತಿ ಬೆಳಗಿರೆ ಕೇಶವ ಮೂರ್ತಿಗೆ ಪಾರಾಯಣ ಮಾಡಿ madhwesha krishna. Show all posts

Friday, 27 December 2019

ಆರುತಿ ಬೆಳಗಿರೆ ಕೇಶವ ಮೂರ್ತಿಗೆ ಪಾರಾಯಣ ಮಾಡಿ ankita madhwesha krishna

ಕೇಶವಾದಿ ನಾರಾಯಣಗೆ ಆರುತಿ
ಆರುತಿ ಬೆಳಗಿರೆ ಕೇಶವ ಮೂರ್ತಿಗೆ ಪಾರಾಯಣ ಮಾಡಿ ನಾರಾಯಣಗೆ
ಕೀರುತಿ ಪೊಗಳುತ  ಮಾಧವಗೆ ಆನಂದದಿ ಮಾಡೆ ಗೋವಿಂದಗೆ||ಪಲ್ಲ||

ಕಷ್ಟಗಳ ಕಳೆಯೆಂದು ವಿಷ್ಣುವಿಗೆ ಮೋದದಿಂದ ಮಧುಸೂದನಗೆ
ಚಕ್ರಧರನು ತ್ರಿವಿಕ್ರಮಗೆ ಪಾವನ ಮೂರುತಿ ವಾಮನಗೆ||೧||

ಆದರದಲಿ ಮಾಡೆ ಶ್ರೀಧರಗೆ ದೋಷ ಕಳೆವ ಹೃಷಿಕೇಶನಿಗೆ
ಹೃತ್ಪದ್ಮದಲ್ಲಿರುವ ಪದ್ಮನಾಭನಿಗೆಆಮೋದದಿ ಮಾಡೆ ದಾಮೋದರಗೆ||೨||

ಶಂಕರರಿಂದೊಂದಿತ ಸಂಕರುಷಣಗೆ ಲೇಸುಮಾಡುವ ವಾಸುದೇವನಿಗೆ
ವಿದ್ಯ ಬುಧ್ಧಿ ನೀಡೊ ಪ್ರದ್ಯುಮ್ನನಿಗೆ ಧೇನುಪಾಲಕ ಅನಿರುಧ್ಧನಿಗೆ||೩|||

ಹರುಷದಿಂದ ಪುರುಷೋತ್ತಮಗೆ ಪಾದಕೊಂದಿಸಿ ಅದೋಕ್ಷಜಗೆ
ಪಾರುಗಾಣಿಪ ನಾರಸಿಂಹಗೆ ಚ್ಯುತಿಯಿಲ್ಲದೆ ನಮ್ಮ ಅಚ್ಯತಗೆ||೪||

ಧನದಾಸೆಯಿಲ್ಲದೆ ಜನಾರ್ಧನಗೆ ಸಂಪ್ರೀತಿಯಿಂದ ಉಪೇಂದ್ರನಿಗೆ
ಲೀಲೆಯಿಂದಲಿ ಶ್ರೀ ಹರಿಗೆಉಧ್ಧರಿಪ ಕೃಷ್ಣ ಮಧ್ವೇಶಕೃಷ್ಣಗೆ||೫||
*********