by guruindiresharu
ಅವತಾರತ್ರಯ
ಚರಣ ಸೇವಕರನ್ನು ಪೊರೆದ ಪ್ರಾಣೇಶನ್ನಹರುಷಾದಿ ವಂದಿಸಿ ವರಬೇಡಿರೈ ಪ
ಕರುಣ ಸಾಗರ ಕಲ್ಪತರು ಭಕ್ತ ಕುಮುದ ಚಂದಿರನೆನಿಸುತಭೀಷ್ಟ ಸುರಿಸುವ ನೋಡಿರೈ ಅ.ಪ.
ಪದುಮನಾಭನ ದಿವ್ಯ ಪದಶೇವಕನು ಪೋಗಿಉದಧಿ ಲಂಘಿಸಿ ಲಂಕಾ ಸದನದೊಳುಬೆಡಗಿದ ಒಡಲನೋಳ್ಹುದುಗಿ ರೂಪದಚಂದ್ರವದನೀಯಾ ರಾಜಿಪ ಕಂದರದನೀಯಾವಲ್ಲಭನೊಕ್ಷ ಸದನೀಯಾವನದೊಳಗೆ ನೋಡುತ ಚದರೆ ಸುಂದರಿ ಸುದತಿ ಜಾನಕಿಯಾಪದಕೆರಗಿ ಪೇಳಿದ ಮುದದಿ ರಾಮನಹೃದಯ ವಾರುತಿಯಾಮುದ್ರಿಕೆಯ ಸಲಿಸುತ ವದಗಿದಸುರತ ಒಡೆದ ಕೀರುತಿಯಾಪಿಡಿಯಲ್ಕೆ ಕ್ಷಣದೊಳು ಕದನಕಂಠಕನೆನಿಪರಾವಣನೆದುರಿಸಿ ಗರ್ವ ಶಿಕ್ಷಿಸಲುಪುಚ್ಛದಲಿ ಪಟ್ಟಣ ಸುಟ್ಟು ದಹಿಸಿದಸದಯಕಾಮನ ಕಾರ್ಯ ಪೂರ್ತಿಯಾ 1
ಮದನಜನಕನ ಸಂದರುಶನಗೋಸುಗನೆರೆ ದ್ವಾಪರಡೊಳಗವತರಿಸಿದನೂವರ ಧರ್ಮಜನ ಸಹೋದರನೆಂದೆನಿಸಿ ಗದ ಧರಿಸಿದಾಕೃಷ್ಣನೊಳ್ ಭಾವ ಬೆರಿಸಿದಾಮೋಹಿನಿಯ ವೇಷದಿ ದುರುಳ ಕೀಚಕನೊರಿಸಿ ಸುಖ ಸುರಿದಗಾಂಧಾರಿತನಯನ ಧುರದಿ ತೊಡೆಗಳ ತರಿದು ಬೊಬ್ಬಿರಿದಾಕಡುಕೋಪದಿಂದಲಿ ಜರಿಯ ಸುತನಾ ಭರದಿ ಮದ ಮುರಿದಾಕರಿವರದ ಕರುಣಾಕರನ ವಲಿಸಿದಾಪರಮಮಂಗಳ ಚರಿತ ಸದ್ಗುಣಭರಿತಭವಭಯ ಹರಣ ಸಂನುತ ಚರಣ ಕಮಲª Àಧರೆಯೊಳಗೆ ಪರಿಪರಿ ಮೆರೆದಾ 2
ಮರಳಿ ಭೂಸುರನು ಮಂದಿರದೊಳು ಜನಿಸಿತಾಗುರು ಮಧ್ವಮುನಿಯೆಂದು ಕರೆಸೀದನುವರವೇದವ್ಯಾಸರಾ ಕರುಣಪಡೆದು ದೇಶ ಸಂಚರಿಸಿದಾನಿಂದಕರ ಧಿಕ್ಕರಿಸಿದಾ ಸೇವಕರನುದ್ಧರಿಸಿದಾಗ್ರಂಥಗಳ ರಚಿಸಿ ಭರದಿ ಕಲಿ ಸಂಕರನೋಳ್ವಾದಿಸಿದಾಗುರು ಇಂದಿರೇಶನೆ ಧರೆಗೆ ಪಿತನೆಂದರುಹಿ ಸಾಧಿಸಿದಾಕರಕಂಜಜಾತದಿ ಕರಕೆ ಶಾಸ್ತ್ರದರಿವ ಬೋಧಿಸಿದಾನವರತ್ನ ಭಾಸಿತ ಕರಣಕುಂಡಲಮಕುಟ ಸಕಲಾಭರಣ ಭೂಷಿತಸುಮನಸೋತ್ತುಮ ಮುನಿಪ ಮಾನಂದಾತ್ಮಬುಜಗುಣದರಸೆ ಘನಸುಂದರ ಸುಖಪ್ರದ 3
***