ಕಾಖಂಡಕಿ ಶ್ರೀ ಕೃಷ್ಣದಾಸರು
ಆವ ಸೇವೆಯಿಂದ ನಿನ್ನುತ್ತೀರ್ಣಾಗುವರೋ | ಭೋಕ್ತ ಗುರು ಮಹಿಪತಿ ನಿಮ್ಮ ಶರಣರು ಪ
ಒಡಲೊಳಗಿದ್ದ ಶಿಶು ಹೊರಗ ಬಂದ ಮ್ಯಾಲ ಒಡ ಮೂಡುವದು ನೋಡಿ ಜನನಿ ಮೋಹಾ ಪೊಡವಿಯೊಳಿಹನ ಕರೆದೊಡಲೋಳಿಟ್ಟುಕೊಂಡು ಕುಡಿಸಿ ಬೋಧಾಮೃತವ ಸಲಹುವ ಗುರುಮಾತಾ 1
ಸತಿಯಲಿ ವೀರ್ಯವನಿಟ್ಟು ಬೆಳಸಿ ಘನ ಯುತನಾದರಾಗ ತಂದೆಯ ಮೋಹವು ಕ್ಷಿತಿಯೊಳು ನಿಜವೀರ್ಯ ಕಳಿಯದೆ ಮೂಢ ಭಕ್ತಿರಿಗೊಲಿದು ಬೀರುವ ದಯ ಗುರು ತಂದೆ 2
ತನುವ ನಿರ್ಮಿಸಲು ತಾ ತನುವಿನೊಡೆಯ ನೀನು ಮನವ ನೀಡಲು ಚೇತನಾತ್ಮ ನೀನು ಧನವ ನೀಡಲು ಇಹ ಪರವೀವ ಧೊರಿ ನೀನು ನೆನೆವರ ಶ್ರಯಧೇಯ ಕಾಯೋ ನಂದನ ಪ್ರಭು3
***