ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಯಸವೇ ವ್ಯರ್ಥಾ | ಆಯೋಗ್ಯಜನ ತಿದ್ದುವ ಕುರ್ತಾ ಪ
ಏನು ಹೇಳಿದರೇನು | ಮನಸಿಗೇ ತುಸು ಬಂತ | ಅನುದಿನ ಹಾಲವನು ಬೇವಿನ ಮರಗಳಿಗೆರೆದಂತೆ 1
ಕರಿ ಕಲ್ಲಿನ ಮ್ಯಾಲ ಮೇಘದ ಘನಮಳೆ ಕರೆದರೆ | ತೊರೆದು ಕಠಿಣತನವಾ ನೆನೆಯುವೆ ಎಂದಿಗೆ ಏನಾರೆ 2
ಕತ್ತೆಯ ಮರಿ ತೊಳೆದು ಪರಿಪರಿಶೃಂಗರಿಸಿದರಿಂದೆ | ಉತ್ತಮ ಕುದುರೆಯ ದಶಾಂಶಕ ಬಾಹುದೇ 3
ಲಳಗಿಯೊಳಗ ಹಿಡಿದು ನಾಯಿ ಬಾಲವ ಹಾಕಿದ ಗುರುತ | ಸುಲಲಿತ ವಹುದೆಂದು ತೆಗೆದು ನೋಡಲು ಮೊದಲಂತೆ 4
ಅರವ್ಹಲ್ಲಾ ಮರವ್ಹಲ್ಲಾ ಅರಹು ಮರಹಲಿರುತಿಹುದಲ್ಲಾ | ಹರಿಯೇ ರಕ್ಷಿಸಬೇಕು ನಿಜ ಮಹಿಪತಿನಂದನ ಸೊಲ್ಲಾ 5
***