ಪುರಂದರದಾಸರು
ರಾಗ ಪೂರ್ವಿ ಅಟ ತಾಳ)
ಸುಣ್ಣವಿಲ್ಲ ಭಾಗವತರೆ
ನುಣ್ಣನೆ ಗೋಡೆಯ ನಿನ್ನೆ ತೊಡೆದು ಬಿಟ್ಟೆ ||ಪ ||
ವೀಳ್ಯ ಹಾಕುವನಲ್ಲ ವ್ಯಾಧಿಸ್ಥ ಗಂಡನು
ಬಾಳು ಸಟೆ ಎನ್ನ ಬಾಯಿ ನೋಡಿ
ಹಾಳು ಮನೆಯ ಹೊಕ್ಕು ಒಡಲು ಉರಿಯುತಿದೆ
ಹೇಳಿ ಈ ಬದುಕನ್ನು ಪ್ರಯೋಜನವೇನು ||
ಮದ್ದು ತಿಂದು ತಿಂದು ಮನೆಯೆಲ್ಲ ಬರಿದಾಗಿ
ಹೊದ್ದಿತು ಮೂದೇವಿ ಮೈದುನಗೆ
ಮದ್ದಿಕ್ಕೊ ಸಂಚಿಯು ಭಂಗಿ ಮುಕ್ಕಿ ಭಾವ
ಬಿದ್ದುಕೊಳ್ಳುತಾನೆ ಒಳಗೆ ಕದನ ಮುಚ್ಚಿ ||
ತೊನ್ನುಬಡಕ ಮಾವ ಅನ್ಯಕಾರಿ ಅತ್ತೆ
ಘನ್ನ ಘಾತಕಿ ರಂಡೆ ಅತ್ತಿಗೆಯು
ಎನ್ನ ಗೋಳು ತಾನೆ ನಾಶವೆಂದಿಗಹುದೊ
ಪನ್ನಗಶಯನ ಶ್ರೀ ಪುರಂದರವಿಠಲ ||
***

pallavi
suNNavilla bhAgavatare suNNane goDeya ninne toDedu biTTe
caraNam 1
vILya hAkuvanalla vyAdhistha gaNdanu bALu saDe enna bAyi nODi
hALu maneya hokku oDalu uriyutide hELi I badukannu prayOjanavEnu
caraNam 2
muddu tindu tindu maneyella baridAgi hoddidu mUdEvi maidunage
maddikko sanciyu bhangi mukki bhAva biddukoLLutAne oLage kadana mucci
caraNam 3
tonnubaDaka mAva anyakAri atte ganna ghAtaki raNDe attikeyu
enna gOLu tAne nAshavendigahudo pannaga shayana shrI purandara viTTala
***
ಸುಣ್ಣವಿಲ್ಲ ಭಾಗವತರೆ |
ನುಣ್ಣನೆಯ ಗೋಡೆಗೆ ನಿನ್ನ ತೊಡೆದು ಬಿಟ್ಟೆ......... ಪ.
ವೀಳೆಯ ಹಾಕುವನಲ್ಲ ವ್ಯಾದಿಷ್ಠ ನನಗಂಡ ||ಬಾಳುಗೇಡಿ ಎನ್ನ ಬಾಯನೋಡಿ ||ಹಾಳಾದ ಮನೆ ಹೊಕ್ಕು ಗೋಳುಗರಿಯತ್ತೇನೆ |ಕೇಳಿದ ಬಳಿಕಿನ್ನು ಹೇಳದೆ ಫಲವೇನು.1
ಮದ್ದು ಮದ್ದು ತಿಂದು ಮನೆಯೆಲ್ಲ ಬರಿದಾಯ್ತು |ಹೊದ್ದಿತು ಮೂದೇವಿ ಮೈದುನಗೆ ||ಬದ್ಧತನದಿ ಸಂಜೆಭಂಗಿ ಮುಕ್ಕುವಭಾವ |ಒದ್ದು ಕೊಳ್ಳುತಾನೆ ಒಳಗೆ ಕದವನಿಕ್ಕಿ 2
ಅನ್ನೆಕಾರಿ ಅತ್ತೆ ತೊನ್ನು ಬಡಕ ಮಾವ |ಗನ್ನ ಘಾತಕಿರಂಡೆಅತ್ತಿಗೆ ಮುಂಡೆ ||ಎನ್ನ ಗೋಳು ತಾಗಿ ಎಂದಿಗೆ ಹೋದಾರು |ಪನ್ನಗಶಯನ ಶ್ರೀ ಪುರಂದರವಿಠಲ 3
********