Showing posts with label ದೇವ ರಿಪುವನದಾವ ದುರಿತಾಬ್ಧಿನಾವನ ಮಿತ್ರರಕಾವ ಶರಣ ಸಂಜೀವ ದೀಪ್ತಿಪೂರ್ಣ hayavadana. Show all posts
Showing posts with label ದೇವ ರಿಪುವನದಾವ ದುರಿತಾಬ್ಧಿನಾವನ ಮಿತ್ರರಕಾವ ಶರಣ ಸಂಜೀವ ದೀಪ್ತಿಪೂರ್ಣ hayavadana. Show all posts

Wednesday, 1 September 2021

ದೇವ ರಿಪುವನದಾವ ದುರಿತಾಬ್ಧಿನಾವನ ಮಿತ್ರರಕಾವ ಶರಣ ಸಂಜೀವ ದೀಪ್ತಿಪೂರ್ಣ ankita hayavadana

 ..

ದೇವ ರಿಪುವನದಾವ ದುರಿತಾಬ್ಧಿನಾವನ ಮಿತ್ರರಕಾವ ಶರಣ ಸಂಜೀವ ದೀಪ್ತಿಪೂರ್ಣ ಪ.


ದೇವ ದೇವರದೇವ ನೀನಹುದೊದೇವಕಿಯೊಳವತರಿಸಿ ಗೋಕುಲವನ್ನುಪಾವನ ಮಾಡಿ ಮಡುಹಿಮಾವನ ಮಧುರಾವನಿಯ ಉಗ್ರಸೇನನಿಗಿತ್ತು ದೈ -ತ್ಯಾವಳಿಯ ಸವರಿಜೀವಸಖನಾಗಿ ಪಾಂಡವರೊಳ್ಪಾರ್ಥಸೇವೆ ಕೈಕೊಂಡು ತರಿದು ಕೌರವರ ದ್ವಾ-ರಾವತಿಯಿಂದ ಹಯಮೇಧಕ್ಕೆ ಬಂದದೇವ ನೀನಹುದೊ 1


ಧರ್ಮಾರ್ಜುನರೆಜ್ಞತುರಗರಕ್ಷಕ ಕೃತ-ವರ್ಮಾದ್ಯರುಗೂಡಿ ನಡೆದು ನಿಲ್ಲುತ್ತಮರ್ಮವರಿದು ಮುರಿದು ಹಂಸಧ್ವಜನಧರ್ಮವನು ತಡೆದುಕರ್ಮವಶದಿಂದ ಬಭ್ರುವಾಹನ ಕೈಯ್ಯಾದುರ್ಮರಣವಾದ ವಿಜಯ ಕರ್ಣಾತ್ಮಜಗೆಪೆರ್ಮೆಯಿಂದಸುವಿತ್ತು ಪೊರೆದ ನಿತ್ಯನಿರ್ಮಲಾತ್ಮನಹುದೊ2


ಪಿಂತೆಬಾಹರ್ಜುನರ ಕಂಡು ತಾಮ್ರಧ್ವ -ಜಂ ತಡೆಯೆ ಬಡದ್ವಿಜನಾಗಿ ಶಿಖಿಕೇತು-ವಂ ತಾನು ಬೇಡಿ ವೀರವರ್ಮನ ಗೆಲಿದುಕುಂತಳೇಂದ್ರಗೊಲಿದುದÀಂತಿಪುರಕ್ಕವರನು ತಂದು ಹಯಮೇಧವಂತು ಮಾಡಿಸಿ ಮೈದುನರ ಕಾಯ್ದಹೊಂತಕಾರಿ ಹಯವದನನೆ ಶ್ರೀ ಲಕ್ಷೀ -ಕಾಂತ ನೀನಹುದೊ 3

***