Wednesday, 1 September 2021

ದೇವ ರಿಪುವನದಾವ ದುರಿತಾಬ್ಧಿನಾವನ ಮಿತ್ರರಕಾವ ಶರಣ ಸಂಜೀವ ದೀಪ್ತಿಪೂರ್ಣ ankita hayavadana

 ..

ದೇವ ರಿಪುವನದಾವ ದುರಿತಾಬ್ಧಿನಾವನ ಮಿತ್ರರಕಾವ ಶರಣ ಸಂಜೀವ ದೀಪ್ತಿಪೂರ್ಣ ಪ.


ದೇವ ದೇವರದೇವ ನೀನಹುದೊದೇವಕಿಯೊಳವತರಿಸಿ ಗೋಕುಲವನ್ನುಪಾವನ ಮಾಡಿ ಮಡುಹಿಮಾವನ ಮಧುರಾವನಿಯ ಉಗ್ರಸೇನನಿಗಿತ್ತು ದೈ -ತ್ಯಾವಳಿಯ ಸವರಿಜೀವಸಖನಾಗಿ ಪಾಂಡವರೊಳ್ಪಾರ್ಥಸೇವೆ ಕೈಕೊಂಡು ತರಿದು ಕೌರವರ ದ್ವಾ-ರಾವತಿಯಿಂದ ಹಯಮೇಧಕ್ಕೆ ಬಂದದೇವ ನೀನಹುದೊ 1


ಧರ್ಮಾರ್ಜುನರೆಜ್ಞತುರಗರಕ್ಷಕ ಕೃತ-ವರ್ಮಾದ್ಯರುಗೂಡಿ ನಡೆದು ನಿಲ್ಲುತ್ತಮರ್ಮವರಿದು ಮುರಿದು ಹಂಸಧ್ವಜನಧರ್ಮವನು ತಡೆದುಕರ್ಮವಶದಿಂದ ಬಭ್ರುವಾಹನ ಕೈಯ್ಯಾದುರ್ಮರಣವಾದ ವಿಜಯ ಕರ್ಣಾತ್ಮಜಗೆಪೆರ್ಮೆಯಿಂದಸುವಿತ್ತು ಪೊರೆದ ನಿತ್ಯನಿರ್ಮಲಾತ್ಮನಹುದೊ2


ಪಿಂತೆಬಾಹರ್ಜುನರ ಕಂಡು ತಾಮ್ರಧ್ವ -ಜಂ ತಡೆಯೆ ಬಡದ್ವಿಜನಾಗಿ ಶಿಖಿಕೇತು-ವಂ ತಾನು ಬೇಡಿ ವೀರವರ್ಮನ ಗೆಲಿದುಕುಂತಳೇಂದ್ರಗೊಲಿದುದÀಂತಿಪುರಕ್ಕವರನು ತಂದು ಹಯಮೇಧವಂತು ಮಾಡಿಸಿ ಮೈದುನರ ಕಾಯ್ದಹೊಂತಕಾರಿ ಹಯವದನನೆ ಶ್ರೀ ಲಕ್ಷೀ -ಕಾಂತ ನೀನಹುದೊ 3

***


No comments:

Post a Comment