Showing posts with label ದೇಹವ್ಯಾಕೆ ಇಂಥ ದೇಹವ್ಯಾಕೆ ಹಗಲು ಇರುಳು prananatha vittala. Show all posts
Showing posts with label ದೇಹವ್ಯಾಕೆ ಇಂಥ ದೇಹವ್ಯಾಕೆ ಹಗಲು ಇರುಳು prananatha vittala. Show all posts

Thursday, 5 August 2021

ದೇಹವ್ಯಾಕೆ ಇಂಥ ದೇಹವ್ಯಾಕೆ ಹಗಲು ಇರುಳು ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ದೇಹವ್ಯಾಕೆ ಇಂಥ ದೇಹವ್ಯಾಕೆ ಪ


ಹಗಲು ಇರುಳು ಹರಿಯ ನೆನೆಯದ ಕಾಯವ್ಯಾಕೆ ಅ.ಪ


ಹರಿಯ ಪಾದಕೆರಗದಂಥ ಶಿರವು ಏಕೆ

ಪರಮ ಪುರುಷನ ಪಾಡದಂಥ ವದನವ್ಯಾಕೆ 1


ಹರಿಯಸ್ಮರಣೆ ಕೇಳದಂಥ ಕರ್ಣವ್ಯಾಕೆ

ಹರಿಯಮೂರ್ತಿನೋಡದಂಥ ಕಂಗಳ್ಯಾಕೆ 2


ಹರಿಯ ನಿರ್ಮಾಲ್ಯವಾಘ್ರಾಣಿಸದಂಥ ನಾಸವ್ಯಾಕೆ

ಹರಿಯ ನೈವೇದ್ಯ ಭುಂಜಿಸದಂಥಾ ಉದರವ್ಯಾಕೆ 3


ಹರಿಯದಾಸರ ಕೊಡಿ ತಿರುಗದ ಚರಣವ್ಯಾಕೆ

ಶರಣಜನರ ಚರಣ ತೊಳೆಯದ ಕರವು ಏಕೆ4


ಪ್ರಾನನಾಥವಿಠಲನ ಪಾಡದ ಜಿಹ್ವೆ ಏಕೆ

ಜಾಣರೆಲ್ಲರು ತಿಳಿದು ನೋಡಿ ಬದುಕಿ ಜೋ 5

***