ನಾರಸಿಂಹನೆ ಶ್ರೀಮನ್ನಾರಸಿಂಹನೆ ಬಾ ಬಾ
ಅಪಾರ ಮಹಿಮ ಕಲ್ಪ ಭೂರುಹದಾರತಿ ಬೆಳಗುವೆನು ll ಪ ll
ಬಾಲನ್ಹತ್ತರೆ ಕೂತು ಲೀಲೆ ಮಾಡುವಿ ಮಲ್ಲಾ
ಕೂಲ ನಿಲಯ ಕರುಣಾಲವಾ ಭೋ ll 1 ll
ದ್ವಾದಶಿಯಲಿ ಪರಮಾದರದಲಿ ಕರಂ
ಭೋದನ ಭುಂಜಿಸಿ ಮೋದಿಸಿದೀಯೊ ll 2 ll
ಸುತ್ತು ನದಿಯು ಬಂದು ವರ್ತ್ಮ ಬಿಡದಲಿರೆ
ಹೊತ್ತುದಾರು ತಂದಿ ಪಕ್ತೃ ಸುಖದಾ ll 3 ll
ಕಡುಬಿನಗೋಸುಗ ಮಡದಿ ಭೂಷಣ ಪೃಥ್ವ್ಯಾ
ಹುಡುಗ ಕೊಳ್ಳಲು ತಂದು ಝಟಿತಿ ನೀಡಿದಿ ll 4 ll
ಒಂದು ದಿವಸ ಅವ್ಯಾಳ್ಯಾ ಮಂದಿ ಬರಲು ಧಾನ್ಯ
ಸ್ಯಂದನ ತರಿಸಿದಿ ಇಂದಿರೇಶನೆ, ನಾರಸಿಂಹನೆ ll 5 ll
***