Showing posts with label ಕೇಳು ಶ್ರೀ ಕೃಷ್ಣ ಕಥೆಯ ಬಾಳು ವೈಷ್ಣವರ prasannavenkata. Show all posts
Showing posts with label ಕೇಳು ಶ್ರೀ ಕೃಷ್ಣ ಕಥೆಯ ಬಾಳು ವೈಷ್ಣವರ prasannavenkata. Show all posts

Monday, 11 November 2019

ಕೇಳು ಶ್ರೀ ಕೃಷ್ಣ ಕಥೆಯ ಬಾಳು ವೈಷ್ಣವರ ankita prasannavenkata

by ಪ್ರಸನ್ನವೆಂಕಟದಾಸರು
ಕೇಳು ಶ್ರೀ ಕೃಷ್ಣ ಕಥೆಯ ಬಾಳು ವೈಷ್ಣವರಪಾಳಿಕೆ ಭಕುತಿಯಿಂದಾಳಾಗಿ ಎಲೆ ಮನುಜ ಪ.

ಖೂಳರೊಳು ಮಾತಾಡದೇಳು ಹರಿಭಟರಡಿಗೆಬೀಳು ಭಗವಜ್ಜನರ ಮ್ಯಾಳದೆದುರಿನಲಿಹೇಳು ಕೀರ್ತನೆ ನಾಮದೋಳಿಗಳ ತನುಮನದಿಊಳಿಗಮಾಡುಬಿಡದಾಳು ಕರಣಗಳ1

ಕೂಳು ಕಾಸಿನ ಸವಿಗೆ ಕೀಳು ಮಾನಿಸರ ಹೊಗಳಿಕೋಳು ಬಂಧನ ಹೋಗದಿರು ಮನದಾಳಿಗೊಳಗಾಗಿಏಳೆರಡು ಭುವನಗಳ ಆಳುವ ಪಿತನಗುಣದೇಳಿಗೆಗೆ ಹರುಷವಂ ತಾಳು ಅನ್ಯವ ಮರೆದು 2

ಗಾಳಿಯಸೊಡರುದೇಹ ನಾಳೆಗೆನ್ನದೆ ಸುಧೆಯಮೇಳೈಸಿಕೊಂಡು ಭವವೇಳಿಲಿಸು ನೀಜಾಳು ಭಾಷ್ಯಗಳಗತಿಹಾಳೆಂದು ಗುರುಮಧ್ವಹೇಳಿದಂತಿರುತಲಿ ದಯಾಳು ಪ್ರಸನ್ವೆಂಕಟನ 3
*******