ಪಾಲಿಸೆನ್ನನು ಶ್ರೀಲಕುಮಿವರ ಭೂಲೋಲಕಾರ್ಪರ
ದೊಳು ಪಿಪ್ಪಲತರು ಸುಮಂದಿರ ಪ
ಬಾಲತನದಿ ಜನಕನ ಬಹು ಕೀಳುನುಡಿಗಳನು ಸಹಿಸಿದ
ಬಾಲಗೊಲಿದ ನರಹರಿಯೆ ಕೃಪಾಳೊ ನಿಮ್ಮಯ
ಕಾಲಿಗೆರಗುವೆ ಅ.ಪ
ಸಾಲಿಗ್ರಾಮದಿ ನೆಲಸಿ ತರುವರ ಮೂಲದಿ ಸೇವಿಪರ
ಪಾಲಿಸಲೋಸುಗ ನಿರಂತರ ಕಾಲಕಾಲಗಳಲ್ಲಿ ಬಿಡದೆ
ವಾಲಗ ಕೈಕೊಳ್ಳುತ ಮೆರೆವ ಕಾಳಿಯಮದನನೆ ತವಪದ
ಕೀಲಾಜದಲಿ ಭಕುತಿಯ 1
ಮಂದಜಾಸನಾದಿ ಸುರಗಣ ವಂದಿತ ಸುಚರಣ
ದ್ವಂದ್ವ ಭಜಕ ವೃಂದಪೋಷಣ ಸಿಂಧುಶಯನವಂದಿಪೆ ಭವ
ಬಂಧ ಬಿಡಿಸ್ಯಾನಂದಗರಿವ
ಸುಂದರ ಮೂರುತಿಯನು ಮನ
ಮಂದಿರದಲಿ ತಂದುತೋರಿಸಿ2
ನಾರದಾದಿ ಮುನಿ ಸುವರ್ಣಿತ ಉದಾರ ಚರಿತ
ನಾರಾಯಣ ಮುನಿಸು ಪೂಜಿತ ಧಾರುಣಿಯೊಳು ಘೋರ
ಕೃಷ್ಣಾತೀರ ಸಂಸ್ಥಿತ ಸೇರಿದ ಭಕುತರಿಗೆ ತ್ರಿದಶ
ಭೂರುಹ ಸಿರಿನರಸಿಂಹನೆ 3
****