Showing posts with label ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರಬೊಮ್ಮ ಮಗನೆಂಬೊ ಧೈರ್ಯಕೆ hayavadana. Show all posts
Showing posts with label ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರಬೊಮ್ಮ ಮಗನೆಂಬೊ ಧೈರ್ಯಕೆ hayavadana. Show all posts

Wednesday, 1 September 2021

ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರಬೊಮ್ಮ ಮಗನೆಂಬೊ ಧೈರ್ಯಕೆ ankita hayavadana

 ..

ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರ

ಬೊಮ್ಮ ಮಗನೆಂಬೊ ಧೈರ್ಯಕೆ ಪ.


ಬೊಮ್ಮನಯ್ಯನ ಸಿರಿರಮ್ಮೆ ಪತಿಯ ಘನ

ಪೆರ್ಮೆ ಗುಣಗಣನಿಲಯನ ಅ.ಪ.


ಹೊಳೆವ ಶ್ರೀರೂಪು ವಟಪತ್ರದಲ್ಲಿ

ಪ್ರಳಯಜಲಧಿಯ ಶಯನನ

ಸೆಳೆಮಂಚದ ಮ್ಯಾಲೆ ಮಗ್ಗುಲೊಳಿಟ್ಟು ತನ್ನ

ನಳಿತೋಳಿಂದೆತ್ತಿದಳೆ ಗೋಪಿ 1

ಚರಾಚರಂಗಳ ಸೃಷ್ಟಿ ಸ್ವಯಿಚ್ಛೆಯಿಂದ

ಪುರುಷರೂಪವ ಧರಿಸಿದ

ಪರಮಮಂಗಳ ಮೂರುತಿಯ ತನ್ನ

ಮರಿಯಂತೆ ಎತ್ತಿದಳೆ ಗೋಪಿ 2

ಕತ್ತಲೆಯನು ನುಂಗಿ ತತ್ವಂಗಳನು ಕೊಂಡು

ಮತ್ತೆ ಬೊಮ್ಮಾಂಡದೊಳಗೆ ಪೊಕ್ಕು

ತತ್ವಸಾರದಿಂದೊಪ್ಪುವ ಕೊಮರನ

ಪೆತ್ತೆನು ಮಗ [ನ]ನೆಂದಳೆ ಗೋಪಿ 3

ಅದಭ್ರಸೃಷ್ಟಿಗಳಿಗಗೋಚರನಾದ

ಆದಿಮೂರುತಿ ¸ಚ್ಚಿದಾನಂದನ

ಸದಾ ತನಯನೆಂದೆತ್ತಿ ಮುದ್ದಿಸಿ ಸುಖ

ಸುಧೆಯಲೋಲಾಡಿದಳೆ ಗೋಪಿ 4

ಚತುರುಭುಜ ಶಂಖ ಚಕ್ರ ಗದೆ ಪದುಮ

ಸುತಪ ಪ್ರಶ್ನೆಗೆ ವರವಿತ್ತ

ಶ್ರುತಿಶಿರೋಮಣಿಯೆಂದರಿಯದೆ ತಾ

ಪೆತ್ತೆನು ಮಗನನೆಂದಳೆ ಗೋಪಿ 5

ಬೊಮ್ಮಕಲುಷಾನಂತ ಸಹಸ್ರಗಳ

ನಿಮಿಷಮಾತ್ರದಿ ಪಡೆದನ

ಬೊಮ್ಮಾಂಡವೆ ತನ್ನ ರೋಮಕೂಪದಲ್ಲಿಪ್ಪ್ಪ

ರನ್ನವೆ ಮಗನೆಂದಳೆ ಗೋಪಿ6

ಅನ್ನಂತ ರವಿತೇಜಕಿರೀಟದ

ಅನ್ನಘ್ರ್ಯ ಸರ್ವಾಭರಣ

ಪೊನ್ನ ವಸ್ತ್ರವನ್ನುಟ್ಟ ಅದ್ಭ್ಬುತ ಬಾಲಕನ

ತನ್ನ ಕುಮಾರನೆಂದಳೆ ಗೋಪಿ 7

ಅನ್ನಂತಾನಂತ ಜೀವಗಣಗಳು

ಅನ್ನಂತಾನಂತ ಕರ್ಮಗಳು

ಅನ್ನಂತಾನಂತ ಗಾಯತ್ರಿಗೆ ಕÀರ್ತೃ ವಿಷ್ಣು

ವಿನ್ನ ಪಡೆದೆನೆಂದಳೆ ಗೋಪಿ 8

ಅನ್ನಂತಾಸನ ಶ್ವೇತದ್ವೀಪ ವೈಕುಂಠ

ದನ್ನವರತ ವಾಸವಾಗಿಪ್ಪನ

ಅನ್ನಿಮಿಷರ ಯೋಚನೆಗೆ ಒಲಿದನ

ತನ್ನ ಕುಮಾರನೆಂದಳೆ ಗೋಪಿ 9

ಧರ್ಮದÀ ವೃದ್ಧಿಗೆ ಧರ್ಮದ ಹಾನಿಗೆ

ತನ್ನಿಚ್ಛೆಯಲವತರಿಸಿದ

ಮಮ ಪ್ರಾಣಾಹಿ ಪಾಂಡವನೆನಿಸಿದ

ಅಮ್ಮಮ್ಮ ಮಗನೆಂದಳೆ ಗೋಪಿ 10

ಉದ್ದಾಮ ಕಾಂಚೀದಾಮ ಕಂಕಣ ಶ್ರೀ-

ಮುದ್ರೆಯ ಶ್ರೀವತ್ಸಕೌಸ್ತುಭಧರನ

ಮಧ್ವಮುನಿಗೆ ತಾನೊಲಿದು ಬಂದನ

ಮುದ್ದಿನ ಮಗನೆಂದಳೆ ಗೋಪಿ 11

ಸರಸಿಜಬೊಮ್ಮಾಂಡ ಒಡೆದಾಗ

ವಿರಿಂಚಿ ತೊಳೆದ ಪಾದೋದಕವ

ಹರ ಸೇವಿಸಲಾಗ ಶಿವನ ಮಾಡಿದ

ಹರಿಯ ಮಗನೆಂದಳೆ [ಗೋಪಿ] 12

ದೇವಕಿ ಉದರದಲ್ಲಿದ್ದಾಗ ಬ್ರಹ್ಮಾದಿ

ದೇವರಿಂದಲ್ಲಿ ಕೀರ್ತಿಸಿಕೊಂಡು

ಭಾವಕಿ ದೇವಕಿ ವಸುದೇವನಲ್ಲಿ ಪಿತೃ

ಭಾವನೆ ಮಗನೆಂದಳೆ ಗೋಪಿ 13

ಶಿಶುರೂಪವ ತೋರಿದ ಬೊಮ್ಮನ ಕಂಡು

ವಸುದೇವಗೆ ನದಿ ಎಡೆ ಬಿಡೆ

ಸಾಸಿರನಾಮ ಚಿತ್ರವಾಗಿದ್ದ ಜಗ-

ದೀಶ ಮಗನೆಂದಳೆ ಗೋಪಿ 14

ಪಾಲಗಡಲಲ್ಲಿ ಪವಡಿಸಿಪ್ಪನ

ಕಾಲಮೇಲೆ ಮಲಗಿಸಿಕೊಂಡು

ನೀಲಮೇಘಶ್ಯಾಮಯೆಂದು ಬಣ್ಣಿಸುತಲಿ

ಪಾಲ ಕುಡಿಯೆಂದಳೆ ಗೋಪಿ 15

ಆದಿದೇವನು ಬ್ರಹ್ಮಸೂತ್ರವ ಕಲ್ಪಿಸಿ

ವೇದ ವಿಭಾಗವ ಮಾಡಿದನ

ಆದರದಿಂತುಂತೆಂದು ಕಲಿಸಿ ಸಂ

ಮೋದದಿ ಮುದ್ದ್ದಾಡಿದಳೆ ಗೋಪಿ 16

ಭಾನುಶತಕೋಟಿತೇಜಪ್ರಕಾಶನ್ನ

ಆನಂದವನೆ ನೋಡಿ ಮನ ಉಬ್ಬಿ

ಆನಂದನಿಧಿಯ ತೊಡೆಯ ಮ್ಯಾಲೆಯಿಟ್ಟು

ಆನೆಯಾಡೈಯೆಂದಳೆ ಗೋಪಿ 17

ಶೃಂಗಾರನಿಧಿಯನ್ನು ಬಾಯೆಂದು ಕರೆದು ರ-

ಥಾಂಗಪಾಣಿಯನೆ ಎತ್ತಿಕೊಂಡು

ತಿಂಗಳನೋಡಯ್ಯ ಕಂದ ಎಂದಾತನ

ಕಂಗಳಿಗೆ ಕಪ್ಪನಿಕ್ಕಿದಳೆ ಗೋಪಿ 18

ಸನ್ನಕಾದಿಗಳಯ್ಯನ ಪಿತನ ಕರೆ

ದೆನ್ನ ಮಾಣಿಕವೆಯೆಂದಪ್ಪಿಕೊಂಡು

ಹೊನ್ನ ತಾ ಗುಬ್ಬಿಯೆಂದಾಡು ಎನ್ನಯ್ಯನೆ

ಉನ್ನತಮಹಿಮನೆಂದಳೆ ಗೋಪಿ 19

ಗಂಭೀರವಾರಿಧಿಗೆ ಅಂಬಾ ಹೂಡಿದ ತೋಳು

ಇಂದಿರೆಯನೆ ಅಪ್ಪಿದ ತೋಳು

ಶಂಭರಾರಿಯ ಪಿತ ತೋಳನ್ನಾಡೈ ಎಂದು

ರಮಿಸಿ ಮುದ್ದಾಡಿದಳೆ ಗೋಪಿ 20

ಬ್ರಹ್ಮಾಂಡಕಟಹ ಪಡೆದ ಪಾದ ಉ-

ದ್ದಂಡ ಬಲಿಯಮೆಟ್ಟಿದ ಪಾದ

ಪುಂಡರೀಕಾಯತವಾದ ಪಾದದಿ ಪ್ರ-

ಚಂಡ ಕುಣಿಯೆಂದಳೆ ಗೋಪಿ 21

ನಿತ್ಯತೃಪ್ತನು ಹಸ್ತ (ಸಿದ?) ನೆಂದೆನುತಲೆ

ಇತ್ತ ಬಾ ಹೊರೀಯೆಂದಾದರಿಸಿ

ಹೊತ್ತಾರಿಂದಮ್ಮೆ ಉಣ್ಣದಿರಲು ಹೊಟ್ಟೆ

ಹತ್ತಿಕೊಂಡಿತುಯೆಂದಳೆ ಗೋಪಿ 22

ಅಮ್ಮೆ ಉಂಬುವ ಪುಟ್ಟ ಬಾಯ ಮುದ್ದಿನ ಮಾ

ರಮ್ಮೆಯನರಸುವನಚ್ಚರಿಯ

ಅಮ್ಮೆ ನೋಡಿ ನಗುವ ಮುದ್ದು ಬಾಲಕನ ಪರ

ಬೊಮ್ಮನೆಂದೇನು ಬಲ್ಲಳೆ ಗೋಪಿ 23

ತಾಯ ಮೊಗವ ನೋಡುತ್ತಾಕಳಿಸುತ

ಬಾಯಲ್ಲೀರೇಳುಲೋಕವ ತೋರೆ

ಆಯತೆ ನೋಡಿ ಮರಳಿ ಕಂಗೆಟ್ಟು ವಿಶ್ವ-

ಕಾಯನ್ನ ಮಗನೆಂದಳೆ ಗೋಪಿ 24

ಜ್ಞಾನಘನನ ವಿಶ್ವತೋನಯನನ

ಆನಂದಚರಿತ್ರನ ಅವ್ಯಕ್ತನ

ಜ್ಞಾನಿಗಳ ಹೃತ್ಕಮಲದೊಳಿಹನ ಕಣ್ಣಮುಚ್ಚಿ

ತಾನಾರು ಪೇಳೆಂದಳೆ ಗೋಪಿ 25

ಹಾಲ ಹರವಿಯ ಒಡೆದು ಬಂದು ಗೋ-

ಪಾಲ ನೀನೆಲ್ಲಿಗೆ ಪೋದೆಯೆಂದು

ಕಾಲಕರ್ಮಂಗಳಿಗೆ ಕಾರಣವಾದೋನ

ಕೋಲಕೊಂಡಟ್ಟಿ ಬಂದಳೆ ಗೋಪಿ 26

ಜಗದುದರ ಜಂಘಿಸುತ ಅಡಿಯಿಡೆ

ಮೃಗಲೋಚನೆ ಮೈಮರೆದಿರೆ

ಅಗಣಿತಮಹಿಮನು ಚರಿಸುತ ಬರ

ಲಾಗ ಒರಳಿಂದಲೆ ಕಟ್ಟಿದಳೆ ಗೋಪಿ 27

ಆಮ್ಮಹಾ ಮತ್ತಿಯ ಮರನ ಮುರಿದು

ಬ್ರಹ್ಮಾದಿ ಸುರರು ಜಯವೆನ್ನೆ

ಶ್ರೀಮಣಿ ಶಿವರಿಂದ ಕೀರ್ತಿಸಿಕೊಂಬ

ಸ್ವಾಮಿಯ ಮಗನೆಂದಳೆ ಗೋಪಿ 28

ಕತ್ತಲೆಯೊಳಗಿದ್ದು ಅಂಜಿದ ಮಗನೆಂದು

ಶ್ರುತಿಮಂತ್ರಗಳಿಂದುಚ್ಚರಿಸಿ

ಮೃತ್ಯುಂಜಯನ ಪಿರಿಯನೆತ್ತಿಕೊಂಡು

ಮತ್ತೆ ರಕ್ಷೆಯ ಕಟ್ಟಿದಳೆ ಗೋಪಿ 29

ಶೇಷಶಾಯಿಯ ಹಾಸಿ ಮಲಗಿಸಿ ಚಾರು-

ವೇಷನ್ನ ನಿದ್ರಿಗೈಸುವೆನೆಂದು

ಸಾಸಿರಮುಖಭೂಷಣನ ಪಾಡುತ್ತ ಸಂ-

ತೋಷದಿ ಮೈಮರೆದಳೆ ಗೋಪಿ30

ತ್ರಿಗುಣಾತೀತನ್ನ ಪೊಂದೊಟ್ಟಿಲೊಳ್ಮಲಗಿಸಿ

ಜೋಗುಳ ಪಾಡುವ ಯಶೋದೆÉಯ

ಎಸೆವ ನೀಲವಸ್ತ್ರನು ಪಾಡೆನ್ನೆ ಕೃಷ್ಣ ಅನು-

ರಾಗದಿಂದಲ್ಲೆ ಪಾಡಿದಳೆ ಗೋಪಿ 31

ಹರಿಯ ಹೊರಿಸುವಳಲ್ಯಲ್ಲಿ ನಿಮ್ಮಣ್ಣ

ವರ ಸಿಂಹಾಸನವಾಗಿಪ್ಪನೆಂದು

ಸಿರಿಯಕೂಡೇಕಾಂತದಲಿಪ್ಪನ್ನ

ಪರಿಯಂಕನ ಪಾಡಿದಳೆ ಗೋಪಿ 32

ಸಿರಿ ಉರದಲಿಪ್ಪ ಪಾದ ನಿಮ್ಮಣ್ಣನ

ಶಿರದಲೊಪ್ಪಿದೆÀಯೆಲೆ ಕಂದ

ಸುರವರರ ಭಾಗ್ಯನಿಧಿಯೆ ಬಲರಾಮ

ಪಿರಿಯನೆಂದು ಪಾಡಿದಳೆ ಗೋಪಿ 33

ಕಣ್ಣಮುಚ್ಚಿದ ಕೃಷ್ಣನೆಂದು ತೊಟ್ಟಿಲ ಬಿಟ್ಟು

ಪುಣ್ಯಾಂಗನೆ ಮೈಮರೆದಿರೆ

ಅಣ್ಣ ಆಶನು ಬೆಣ್ಣೆಯ ಕಳಹೋದ

ಚಿಣ್ಣನ ಕಾಣೆನೆಂದಳೆ ಗೋಪಿ34

ನೀಲಾಂಬರನ ಬೆನ್ನ ಮೆಟ್ಟಿ ನೆಲವಿನ

ಮ್ಯಾಲಿನ ಬೆಣ್ಣೆಯ ಮೆಲ್ಲೆ ಕೃಷ್ಣ

ಬಾಲಕಿಯರು ಕೂಡಿ ಕಳ್ಳ ಸಿಕ್ಕಿದನೆಂದು

ಆಲಿ ಬೊಬ್ಬ್ಬಿಡೆ ಕೇಳಿದಳೆ ಗೋಪಿ 35

ಹುಟ್ಟ್ಟದ ಬೆಳೆಯದ ಹಸುಳೆ ಅಣ್ಣನ ಬೆನ್ನ

ಮೆಟ್ಟಿ ನೆಲವು ಜಗ್ಗಿದನೆಂದು

ರಟ್ಟು ಮಾಡಿದಿರೆಲ್ಲ ನೋಡಿರವ್ವಾ ಎನ್ನ

ಹೊಟ್ಟೆಯ ಪುಣ್ಯವೆಂದಳೆ ಗೋಪಿ 36

ಕಂದನ ಎತ್ತಿಕೊಂಡು ರಾಜ್ಯದಂಗನೆಯರ

ಮಂದಿರವನೆ ಪೊಕ್ಕು ಬರುತಿರೆ

ಒಂದೊಂದು ಕೌತುಕವನೆ ಕಂಡಾನಂದ

ಸಂದೋಹದೊಳಗಿದ್ದಳೆ ಗೋಪಿ 37

ಶಶಿಮುಖಿಯಂಗಳದ ಹಾಲಹಳ್ಳ

ಮೊಸರ ಮಡುವು ಬಾಗಿಲ ಮುಂದೆ

ಪ್ರಸಾದವೆಲ್ಲ ಬೆಣ್ಣೆ ಫಲಿತವಾಗಿರೆ

ಆ ಸಿರಿಯನೆ ಕಂಡಳೆ ಗೋಪಿ 38

ವಾರಿಧಿಯೊಳಗಿದ್ದ ಪನ್ನಗಶಾಯಿಯ

ತೇರ ಮೇಲೆ ಇದ್ದ ಬಾಲಕನ

ಮೂರುತಿ ಒಂದೆಂಬೋ ಅ-

ಕ್ರೂರಗೊಲಿದೋನ ಕುಮಾರನೆಂದಳೆ ಗೋಪಿ 39

ದ್ರೌಪದಿಗಕ್ಷಯವಿತ್ತನ ಗುರು ಸಾಂ-

ದೀಪಗೆ ಸುತನ ತಂದಿತ್ತನ

ಪ್ರೀತಿಯಿಂದಲಿ ಯಜ್ಞಪತ್ಯರಿಗೊಲಿದ ಸುಪ್ರ-

ತಾಪನ್ನ ಮಗನೆಂದಳೆ ಗೋಪಿ 40

ಘಾತಪುತ್ರರ ಆರು ಮಂದಿಯ ತರಹೇಳಿ

ಮಾತೆಯೆಚ್ಚರಿಸೆ ಅಂಗೀಕರಿಸಿ

ಅತಿ ಬೇಗದಿಂದಣ್ಣನ ತಂದು ತೋರಿದ ಅ-

ಜಿತನ್ನ ಮಗನೆಂದಳೆ ಗೋಪಿ 41

ಭಕುತ ಶ್ರುತದೇವ ಬಹುಳಾಶ್ವರಾಯಗೊಲಿ

ದೇಕ ಕಾಲದಿ ರೂಪೆರಡಾಗಿ

ಆ ಕರುಣಾಬ್ಧಿಯ ಮಾಯಾರೂಪಿÀನ ಪರಿ-

ಪಾಕವನೇನ ಬಲ್ಲಳೆ ಗೋಪಿ 42

ಪೂತನಿ ಶಕಟವತ್ಸಾಸುರ ವೃಷಭÀನ

ಪಾತಕಿ ಚಾಣೂರ ಕುಂಜರನ

ಘಾತಿಸಿ ಕಂಸನ್ನ ರಂಟೆಯಾಡಿದ ಬಲು

ಭೂತನ್ನ ಮಗನೆಂದಳೆ ಗೋಪಿ43

ಬಾಲತನದಲ್ಲಿ ಸಖನಾಗಿ ಬಂದು ಕು-

ಚೇಲ ತಂದವಲಕ್ಕಿಯ ಧರಿಸಿ

ಮೇಲುತನದಿಂದ ಸೌಭಾಗ್ಯವಿತ್ತ ಶ್ರೀ

ಲೋಲನ್ನ ಮಗನೆಂದಳೆ ಗೋಪಿ&ಟಿbsಠಿ

***