Showing posts with label ಕರುಣಿಸಯ್ಯ ಕಸ್ತೂರಿರಂಗ ಕರುಣಿಸಯ್ಯ venkatakrishna. Show all posts
Showing posts with label ಕರುಣಿಸಯ್ಯ ಕಸ್ತೂರಿರಂಗ ಕರುಣಿಸಯ್ಯ venkatakrishna. Show all posts

Tuesday, 1 June 2021

ಕರುಣಿಸಯ್ಯ ಕಸ್ತೂರಿರಂಗ ಕರುಣಿಸಯ್ಯ ankita venkatakrishna

by yadugiriyamma  

ಕರುಣಿಸಯ್ಯ ಕಸ್ತೂರಿರಂಗ ಕರುಣಿಸಯ್ಯ ಪ


ದುಷ್ಟಸಂಸಾರ ಬಹುಕಷ್ಟವಯ್ಯ ಇದ
ರಟ್ಟೊಳಿಗಳ ತಾಳಲಾರೆನಯ್ಯ
ಆರೆನಿದರ ಕೋಟಿಲೆಗಳಾರೆನಯ್ಯ
ವಾರಿಜಾಕ್ಷ ನಿಮ್ಮ ಪಾದ ಸೇರಿಸೈಯ್ಯ 1

ಕಾಮಕ್ರೋಧ ಲೋಭಮೋಹ ಬಿಡಿಸಯ್ಯ
ಮದಮಾತ್ಸರ್ಯವೆಂಬ ಕಾಟ ನೀನೊತ್ತಿಸಯ್ಯ
ಅಂಬುಜನಾಭನೆ ನಿಮ್ಮ ಪಾದ ಹೊಂದಿಸಯ್ಯ
ಸರ್ವಬಂಧು [ನೀ] ಎನ್ನ ಜಿಹ್ವೆಯಲಿ ನೆಲೆಸಯ್ಯ 2

ಆಶ ಪಾಶಕ್ಲೇಶವೆಲ್ಲ ನಾಶ ಮಾಡಿಸಯ್ಯ
ಶ್ರೀಶ ನಿನ್ನ ದಾಸರಲ್ಲಿ ಸೇರಿಸಯ್ಯ
ವಾಸುಕಿಶಯನ ಭವದಿ ನೊಂದೆನಯ್ಯ ಸ
ರ್ವೇಶಬಂಧು ಎನ್ನನುದ್ಧರಿಸಯ್ಯ 3

ಪುತ್ರಮಿತ್ರಬಂಧುವರ್ಗದಿ ಬಿದ್ದಿಹೆನಯ್ಯ ಅ
ನಿತ್ಯಮೋಹದಲ್ಲಿ ಮುಳುಗಿ ಪೋದೆನಯ್ಯ
ವ್ಯರ್ಥನಾಗಿ ಕಾಲವನ್ನು ಕಳೆದೆನಯ್ಯ ಎನ್ನ
ಮರಣ ಕಾಲದಿ ನಿಮ್ಮ ಸ್ಮರಣೆ ಕರುಣಿಸಯ್ಯ 4

ಜನನ ಮರಣವೆಂಬೊ ಜಾಡ್ಯ ಕ್ರೂರವಯ್ಯ
ಇದರ ವಿಧವನರಿತು ವೈದ್ಯ ಮಾಳ್ವರ ಕಾಣೆನಯ್ಯ
ಬ್ರಹ್ಮಾದಿ ದೇವತೆಗಳೂ ಅರಿಯರಯ್ಯ
ಧನ್ವಂತ್ರಿರೂಪ ಶ್ರೀನಿವಾಸ ರಕ್ಷಿಸಯ್ಯ 5

ದೇಹವೆಲ್ಲ ಗಳಿತವಾಗಿ ಪೋಯಿತಯ್ಯ
ಇಂದ್ರೀಯ ಸ್ವಾಧೀನದಲ್ಲಿ ನಿಲ್ಲದಯ್ಯ
ವಿಷಯದಲ್ಲಿ ಮನಸು ಬಹಳ ಹರಿವುದಯ್ಯ
ಲಕ್ಷ್ಮೀಪತಿಯೆ ನಿಮ್ಮ ಭಕ್ತಿಯಿತ್ತು ಸಲಹಯ್ಯ 6

ದೀನನಾಗಿ ನಿನ್ನ ಚರಣ ಸೇರಿದೆನಯ್ಯ
e್ಞÁನವೈರಾಗ್ಯವಿತ್ತು ಪಾಲಿಸೆನ್ನಯ್ಯ ಮರಳಿ
ಜನ್ಮ ಬಾರದಂತೆ ಮಾಡಬೇಕಯ್ಯಾ ಗರುಡಗ
ಮನ ವೆಂಕಟರಮಣ ಭವಸಂಕಟ ಬಿಡಿಸಯ್ಯ 7
****