Showing posts with label ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ purandara vittala. Show all posts
Showing posts with label ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ purandara vittala. Show all posts

Thursday, 5 December 2019

ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ purandara vittala

ರಾಗ ಬೇಹಾಗ್ ಆದಿತಾಳ 

ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ
ಬೊಮ್ಮನ ಪಡೆದ ದೇವನೊಬ್ಬನೆ ಕಾಣಿರೋ ||ಪ ||

ಆದಿಯಲ್ಲಿ ಕರಿ ಮಕರಿಕೆ ಸಿಕ್ಕಿ ಬಾಧೆಯಿಂದ
ಆದಿದೇವ ಕಾಯೆಂದು ಮೊರೆಯಿಡಲು
ಆ ದೇವ ಈ ದೇವ ಕಾಯ್ದುದಿಲ್ಲ ಕೇಳಿ
ಮಾಧವ ತಾ ಬಂದು ಸಲಹಿದ ಕಾರಣ ||

ಹರಿ ಹರ ಬ್ರಹ್ಮರೊಳು ಹಿರಿಯವರಾರೆಂದು
ಪರಿಕಿಸಿ ಸುರಾಸುರರೆಲ್ಲರನು
ವರ ಭೃಗುಮುನಿ ಬಂದು ಕರವೆತ್ತಿ ಸ್ಥಿರವಾಗಿ
ಹರಿಯೇ ಪರದೈವವೆಂದು ಅರುಹಿದ ಕಾರಣ ||

ಏಕೋ ವಿಷ್ಣು ಎಂತೆಂದು ವೇದಗಳು ಅ-
ನೇಕಮುಖಗಳಿಂದ ಸಾರುತಿರೆ
ಕಾಕುಮತಿಯ ನೀಗಿ ಜೋಕೆಯಿಂ ಭಜಿಸಿರೊ
ಶ್ರೀಕಾಂತ ಪುರಂದರವಿಠಲರಾಯನ ||
***

pallavi

namma dEva nimma dEva tamma dEvanane bEDi bommana paDeda dEvanobbane kANirO

caraNam 1

Adiyalli kari makarike sikki bAdheyinda AdidEva kAyendu moreyiDalu
A dEva I dEva kidudilla kELi mAdhva tA bandu salahida kAraNa

caraNam 2

hari hara brahmaroLu hariyavarArendu parigisi surAsurarellaranu
vara brgumuni bandu karavetti sthiravAgi hariyE paradaivavendu aruhida kAraNa

caraNam 3

EkO viSNu entendu vEdagaLu anEka mukhagaLinda sArutire
kAkumatiya nIgi jOkeyim bhajisiro shrIkAnta purandara viTTalarAyana
***