Showing posts with label ಏಕಾಂತದಲಿ ಬಂದು ಮಾತು ನುಡಿದೆ ಶ್ರೀ vijaya vittala. Show all posts
Showing posts with label ಏಕಾಂತದಲಿ ಬಂದು ಮಾತು ನುಡಿದೆ ಶ್ರೀ vijaya vittala. Show all posts

Wednesday, 16 October 2019

ಏಕಾಂತದಲಿ ಬಂದು ಮಾತು ನುಡಿದೆ ಶ್ರೀ ankita vijaya vittala

ಏಕಾಂತದಲಿ ಬಂದು ಮಾತು ನುಡಿದೆ ಶ್ರೀ |
ಕಾಂತ ನಿನಗಿದು ಸುಲಭವಾಗಿದೆ ನೋಡು ಪ

ಪರಧನವನಪಹರಿಸಿಕೊಂಡು ಬೆಳೆದು ಇದ್ದ |
ವರ ಮನೆಯೊಳಗಡಲೇತÀಕೆ |
ನಿರುತ ಎನ್ನ | ಹೃದಯವೆಂಬೊ ಗಾಡಾಂಧಕಾರ |
ಭರಿತವಾಗಿದೆ ಇಲ್ಲಿ ಅಡಗಬಾರದೆ ಬಂದು 1

ಕೇವಲ ಹಕ್ಕಲದ ವನದೊಳು ಪೊಕ್ಕು ಬೇಟೆ |
ಕಾವಲಾರಣ್ಯ ಇಲ್ಲಿ ವಿಂಡೂ ತುಂಬಿದೆ |
ಸಾವಧಾನದಿ ಬೇಟೆ ಆಡÀಬಾರದೆ ಬಂದು 2

ವೈಕುಂಠ ಮೂರು ಸ್ಥಾನದಲಿ ಮುಕ್ತರಿಗೆ |
ಬೇಕಾದದೀಯಾಬೇಕು ಕಡಿಮೆ ಇಲ್ಲಾ |
ನೀ ಕೇಳು ಎನ್ನಲ್ಲಿ ಸರಿ ಬಂದಂತೆಯಲ್ಲದೆ |
ವಾಕು ಪೇಳುವೆ ನಿಲ್ಲು ವಿಜಯವಿಠ್ಠಲ ಬಂದು3
**********